ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್

Public TV
2 Min Read

ಲಕ್ನೋ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಸಮಾಜವಾದಿ ಪಕ್ಷದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು.

‘ಜನ್ ವಿಶ್ವಾಸ ಯಾತ್ರೆ’ ಯಲ್ಲಿ ಯುಪಿಯ ಕೌಶಂಬಿಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಹಿಂದಿನ ಸರ್ಕಾರ ಜನರ ಹಣವನ್ನು ಲೂಟಿ ಮಾಡುತ್ತಿತ್ತು. ಆದರೆ ಈಗ ನಮ್ಮ ಸರ್ಕಾರ ಕಲ್ಯಾಣ ಯೋಜನೆಗಳಿಗೆ ಹಣವನ್ನು ಖರ್ಚು ಮಾಡಲಾಗುತ್ತಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಕೋಟ್ಯಂತರ ರೂ. ದುರುಪಯೋಗ ಪಡಿಸಿಕೊಳ್ಳಲಾಗುತ್ತಿತ್ತು. ಆದರೆ ನಮ್ಮ ಸರ್ಕಾರ ಸಂಪೂರ್ಣ ಬದ್ಧತೆಯಿಂದ ಕೆಲಸ ಮಾಡುತ್ತಿದೆ ಎಂದರು. ಇದನ್ನೂ ಓದಿ: ನಾನು ’24 ಕ್ಯಾರೆಟ್ ಕಾಂಗ್ರೆಸ್ಸಿಗ’, ಪಕ್ಷದೊಂದಿಗೆ ಯಾವುದೇ ಅಸಮಾಧಾನವಿಲ್ಲ: ಗುಲಾಂ ನಬಿ ಆಜಾದ್

ಕೋವಿಡ್-19 ಲಸಿಕೆಗಳನ್ನು ಪ್ರತಿಪಕ್ಷಗಳು ವಿರೋಧಿಸುವ ಮೂಲಕ ಮಾನವೀಯತೆಯ ವಿರುದ್ಧ ಅಪರಾಧ ಎಸಗಿವೆ. ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ. ಅವರಿಗೆ ಬಡವರ ಬಗ್ಗೆ ಕಾಳಜಿಯಿಲ್ಲ. ಹಿಂದೆ ಅವರಿಗೆ ಜನರನ್ನು ಕಾಯಲು ಅವಕಾಶ ಸಿಕ್ಕಿತ್ತು. ಆದರೆ ಅವರು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ. ಅದಕ್ಕೆ ಈಗ ಅವರು ಜನರಿಗೆ ತಪ್ಪು ಮಾಹಿತಿಯನ್ನು ನೀಡುತ್ತಿದ್ದು, ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ವಿರೋಧ ವ್ಯಕ್ತಪಡಿಸಿದರು.

ಪಿಯೂಷ್ ಜೈನ್ ಅವರ ಮೇಲೆ ಕೇಂದ್ರೀಯ ಸಂಸ್ಥೆಗಳು ಇತ್ತೀಚೆಗೆ ದಾಳಿ ನಡೆಸಿದ್ದು, ಅವರ ಬಳಿ ಒಟ್ಟು 177.45 ಕೋಟಿ ನಗದು ಪತ್ತೆಯಾಗಿತ್ತು. ಈ ಹಿನ್ನೆಲೆ ಕಾನ್ಪುರದ ಉದ್ಯಮಿಯನ್ನು ಉಲ್ಲೇಖಿಸಿ ಮಾತನಾಡಿದ ಅವರು, ಐದು ವರ್ಷಗಳ ಕಾಲ ಅಧಿಕಾರದಿಂದ ಹೊರಗುಳಿದಿದ್ದರೂ, ಇಂದಿಗೂ ಅವರ ಮನೆಯ ಗೋಡೆಗಳಿಂದ ಕೋಟಿಗಟ್ಟಲೆ ಕರೆನ್ಸಿ ನೋಟುಗಳು ಹೊರಬರುತ್ತಿವೆ. ಇದನ್ನು ನೀವು ಸಹ ನೋಡಬಹುದು ಎಂದು ಟೀಕಿಸಿದರು.

ಇಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದ ಜನರಿಗೆ ನೀಡುತ್ತಿರುವ ಉಚಿತ ಆಹಾರದ ಹಣವನ್ನು, ಹಿಂದಿನ ಸರ್ಕಾರ ಭ್ರಷ್ಟಾಚಾರಕ್ಕೆ ಬಳಸುತ್ತಿತ್ತು ಎಂದು ಕಿಡಿಕಾರಿದರು. ಇದನ್ನೂ ಓದಿ: ಬಂಗಾಳದ ಐವರು ಬಿಜೆಪಿ ಶಾಸಕರು ಪಕ್ಷ ತೊರೆಯಬಹುದು: ಬಾಬುಲ್ ಸುಪ್ರಿಯೋ

ತಮ್ಮ ಸರ್ಕಾರದ ಸಾಧನೆಗಳನ್ನು ವಿವರಿಸಿದ ಅವರು, ಕೌಶಾಂಬಿಯಲ್ಲಿ ಸುಮಾರು 50,000 ಕುಟುಂಬಗಳಿಗೆ ಹೊಸ ಮನೆಗಳನ್ನು ಮಂಜೂರು ಮಾಡಲಾಗಿದೆ. ಮೊದಲು ಕಾವೇರಿ ಯಾತ್ರೆಗೆ ನಿರ್ಬಂಧವಿತ್ತು, ಆದರೆ ನಮ್ಮ ಸರ್ಕಾರ ಯಾತ್ರೆಗೆ ಬೇಕಾದ ಅನುಕೂಲವನ್ನು ಮಾಡಿಕೊಟ್ಟಿದೆ. ಈ ಹಿಂದೆ ಪ್ರಯಾಗ್‍ರಾಜ್‍ನ ಕುಂಭದಲ್ಲಿ ಕಾಲ್ತುಳಿತವಾಗಿತ್ತು. ಈಗ ಪ್ರಯಾಗ್‍ರಾಜ್‍ನಲ್ಲಿ ಕುಂಭ ಆಯೋಜಿಸಿದಾಗ, ಯಾವುದೇ ರೀತಿಯ ಅಪಾಯವು ಆಗಲಿಲ್ಲ. ಈ ಸಿದ್ಧತೆಗಳನ್ನು ನೋಡಿದ ಪ್ರಪಂಚದ ಎಲ್ಲ ಭಾಗಗಳ ಭಕ್ತರು ಶ್ಲಾಘಿಸಿದ್ದಾರೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *