LatestMain PostNational

ಬಂಗಾಳದ ಐವರು ಬಿಜೆಪಿ ಶಾಸಕರು ಪಕ್ಷ ತೊರೆಯಬಹುದು: ಬಾಬುಲ್ ಸುಪ್ರಿಯೋ

ಕೋಲ್ಕತ್ತಾ: ಬಿಜೆಪಿ ವಾಟ್ಸಾಪ್ ಗ್ರೂಪ್‍ನಿಂದ ಹೊರಬಂದ ಪಶ್ಚಿಮ ಬಂಗಾಳದ ಐವರು ಅತೃಪ್ತ ಶಾಸಕರು ಕೇಸರಿ ಪಕ್ಷವನ್ನು ತೊರೆಯಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ ನಾಯಕ ಬಾಬುಲ್ ಸುಪ್ರಿಯೋ ಹೇಳಿದ್ದಾರೆ.

ಮೂರು ತಿಂಗಳ ಹಿಂದೆ ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷಕ್ಕೆ ಸೇರ್ಪಡೆಗೊಂಡ ಕೇಂದ್ರದ ಮಾಜಿ ಸಚಿವ ಮತ್ತು ತೃಣಮೂಲ ಕಾಂಗ್ರೆಸ್ ನಾಯಕ ಬಾಬುಲ್ ಸುಪ್ರಿಯೋ ಅವರು ಈ ಕುರಿತಂತೆ ಟ್ವಿಟ್ಟರ್‌ನಲ್ಲಿ ಬಿಜೆಪಿಯಲ್ಲಿ ಒಂದರ ಹಿಂದೆ ಒಂದು ವಿಕೆಟ್ ಬೀಳುತ್ತಿದೆ. ಇನ್ನೂ ಐದು ವಿಕೆಟ್ ಬೀಳಲಿದೆ. ವಿಧಾನಸಭಾ ಚುನಾವಣೆಗೂ ಮುನ್ನ ಬಿಜೆಪಿ ಪ್ರಚಾರದ ಮೇಲ್ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್ ಇದೀಗ ಕೈಲಾಸ ಪರ್ವತಕ್ಕೆ ಹೋಗಿದ್ದಾರೆ. ನಿಮ್ಮನ್ನು ಹಿಂದಿನಿಂದ ಎಳೆಯುವ ಬಂಗಾಳಿ ಹೇಡಿಗಳನ್ನು ಹುಡುಕಲು ಪ್ರಯತ್ನಿಸುತ್ತದ್ದರೆ ಮುರಳೀಧರ್ ಲೇನ್‍ಗೆ ಹೋಗಿ ಎಂದಿದ್ದಾರೆ.

ಪಶ್ಚಿಮ ಬಂಗಾಳದ ಐವರು ಶಾಸಕರಾದ ಮುಕುತ್ಮೋನಿ ಅಧಿಕಾರಿ (ರಣಘಾಟ್ ದಕ್ಷಿಣ), ಸುಬ್ರತಾ ಠಾಕೂರ್ (ಗೈಘಾಟ), ಅಂಬಿಕಾ ರಾಯ್ (ಕಲ್ಯಾಣಿ), ಅಶೋಕ್ ಕೀರ್ತಾನಿಯಾ (ಬೊಂಗಾವ್ ಉತ್ತರ), ಮತ್ತು ಅಸಿಮ್ ಸರ್ಕಾರ್ (ಹರಿಂಘಟ) ಬಿಜೆಪಿ ವಾಟ್ಸಾಪ್ ಗ್ರೂಪ್ ತೊರೆದಿದ್ದಾರೆ. ಇದನ್ನೂ ಓದಿ:  ಪ್ರಧಾನಿ ಮೋದಿ ನಮ್ಮ ದೇಶದ ಹೆಮ್ಮೆ: ಗುಲಾಂ ನಬಿ ಆಜಾದ್

ಈ ವಿಚಾರವಾಗಿ ಪ್ರತಿಕ್ರಿಯಿಸಿದ ಬಿಜೆಪಿ ರಾಜ್ಯಾಧ್ಯಕ್ಷ ಸುಕಾಂತ ಮಜುಂದಾರ್ ಅವರು, ಐವರು ಶಾಸಕರಲ್ಲಿ ಯಾರನ್ನು ಸಹ ಬಿಡುವುದಿಲ್ಲ, ಹೊಸ ಸಮಿತಿಗಳಲ್ಲಿ ಅವರಿಗೆ ಅವಕಾಶ ಕಲ್ಪಿಸುತ್ತೇವೆ. ಎಲ್ಲರೂ ಸ್ವಲ್ಪ ತಾಳ್ಮೆಯಿಂದಿರಬೇಕು ಎಂದಿದ್ದಾರೆ. ಇದನ್ನೂ ಓದಿ: 40 ವರ್ಷ ಮೇಲ್ಪಟ್ಟ ಮಹಿಳೆಯರು ಮೋದಿಯಿಂದ ಪ್ರಭಾವಿತರಾಗಿದ್ದಾರೆಯೇ ಹೊರತು ಜೀನ್ಸ್ ತೊಟ್ಟ ಹುಡುಗಿಯರಲ್ಲ: ದಿಗ್ವಿಜಯ್ ಸಿಂಗ್

Leave a Reply

Your email address will not be published.

Back to top button