ಬಳ್ಳಾರಿ/ಕೊಪ್ಪಳ: ಒಳ ಹರಿವು ಹೆಚ್ಚಳವಾಗಿದ್ದರಿಂದ ಜಲಾಶಯದಿಂದ (TB Dam) ತುಂಗಭದ್ರಾ ನದಿಗೆ (Tungabhadra River) 35,100 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ.
12 ಗೇಟ್ ಗಳನ್ನು ಓಪನ್ ಮಾಡಿ ನದಿಗೆ ನೀರು ರಿಲೀಸ್ ಮಾಡಿದ್ದರಿಂದ ಹಂಪಿಯ (Hampi) ಸ್ನಾನಘಟಕ್ಕೆ ಪ್ರವಾಸಿಗರು ತೆರಳದಂತೆ ಹಾಗೂ ನದಿ ಪಾತ್ರಕ್ಕೆ ಜನ-ಜಾನುವಾರು ತೆರಳದಂತೆ ತುಂಗಾಭದ್ರಾ ಬೋರ್ಡ್ ಸೂಚನೆ ನೀಡಿದೆ.
ಸದ್ಯ ಜಲಾಶಯಕ್ಕೆ 34,625 ಕ್ಯೂಸೆಕ್ ನೀರು ಒಳ ಹರಿವು ಇರುವುದಿಂದ ಯಾವುದೇ ಕ್ಷಣದಲ್ಲಿ ಬೇಕಾದ್ರೂ ನದಿಗೆ ಇನ್ನಷ್ಟು ಪ್ರಮಾಣದ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದೆ.
ನದಿಗೆ 1 ಲಕ್ಷ ಕ್ಯೂಸೆಕ್ ನೀರು ರಿಲೀಸ್ ಮಾಡಿದರೆ ಕಂಪ್ಲಿ ಸೇತುವೆ ಮುಳುಗಡೆಯಾಗಲಿದೆ. ಸೇತುವೆ ಮುಳುಗಡೆಯಾದ್ರೆ ಗಂಗಾವತಿ- ಬಳ್ಳಾರಿ ಸಂಪರ್ಕ ಕಡಿತವಾಗಲಿದೆ. ಇದನ್ನೂ ಓದಿ: ಹೃದಯಾಘಾತಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ – ನಾಲ್ವರು ಮೊಮ್ಮಕ್ಕಳಿಗೆ ಬೈಪಾಸ್ ಸರ್ಜರಿ!
ಅಂತರಜಿಲ್ಲಾ ಸಂಪರ್ಕ ಸ್ಥಗಿತ:
ಕೊಪ್ಪಳ ತಾಲ್ಲೂಕಿನ ಮುನಿರಾಬಾದ್, ಹುಲಗಿ, ತಿರುಮಲಾಪುರ, ಗಂಗಾವತಿ ತಾಲ್ಲೂಕಿನ ಸಣಾಪುರ, ಹನುಮನಹಳ್ಳಿ, ಆನೆಗೊಂದಿ, ಚಿಕ್ಕಜಂತಕಲ್, ಮುಸ್ಟೂರು, ಕಾರಟಗಿ ತಾಲ್ಲೂಕಿನ ನಂದಿಹಳ್ಳಿ, ಶಾಲಿಗೆನೂರು, ಕಕ್ಕರಗೋಳ ಸೇರಿದಂತೆ ಇತರ ಗ್ರಾಮಗಳ ನದಿ ಪಾತ್ರದಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಚಲಿಸದ ಬೋಟ್
ನದಿಯಲ್ಲಿ ಪ್ರವಾಹದ ಸ್ಥಿತಿ ನಿರ್ಮಾಣವಾದ ಹಿನ್ನೆಲೆ ಆನೆಗೊಂದಿಯ ನವವೃಂದಾವನ, ತಳವಾರಘಟ್ಟ, ವಿರುಪಾಪುರ ಗಡ್ಡೆಯಲ್ಲಿನ ದೋಣಿಗಳು ದಡಕ್ಕೆ ಬಂದು ನಿಂತಿವೆ. ಆನೆಗೊಂದಿಯಿಂದ ನವವೃಂದಾವನ ಗಡ್ಡೆಗೆ ಹೋಗುವ ಮಾರ್ಗದಲ್ಲಿನ ಯಾಂತ್ರಿಕ ದೋಣಿ ಸಂಚಾರ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಬೆಳಿಗ್ಗೆ ಮದುವೆ, ರಾತ್ರಿ ನೇಣು ಬಿಗಿದು ಆತ್ಮಹತ್ಯೆ – ಡೇಟಾ ಆಪರೇಟರ್ ಸಾವಿನ ಸುತ್ತ ಅನುಮಾನದ ಹುತ್ತ
ತಳವಾರಘಟ್ಟದಿಂದ ಹಂಪಿ ದಡಕ್ಕೆ ಸೇರಿಸುತ್ತಿದ್ದ ದೋಣಿಗಳೂ ಸಂಚಾರವೂ ಬಂದ್ ಆಗಿದೆ. ವಿರುಪಾಪುರ ಗಡ್ಡೆಯಿಂದ ಹಂಪಿಯ ವಿರೂಪಾಕ್ಷನ ದರ್ಶಕ್ಕೆ ಹೋಗುವವರ ಮಧ್ಯೆ ಸಂಪರ್ಕ ಸೇತುವಾಗಿದ್ದ ದೋಣಿ ವಿಹಾರ ಬಂದ್ ಮಾಡಲಾಗಿದೆ.