ತಮಿಳುನಾಡಿನಲ್ಲಿ ಡಿಎಂಕೆಗೆ ಮತ್ತೆ ಅಧಿಕಾರ ಸಾಧ್ಯತೆ – ಕಿಂಗ್ ಮೇಕರ್ ಆಗ್ತಾರಾ ದಳಪತಿ?

3 Min Read

ತಮಿಳುನಾಡಿನ ರಾಜಕೀಯ ರಂಗಭೂಮಿ ಮತ್ತೊಮ್ಮೆ ತೀವ್ರ ಟಗ್ ಆಫ್ ವಾರ್‌ಗೆ ಸಾಕ್ಷಿಯಾಗಿದೆ. ಮತದಾನ ಮುಗಿದಿದೆ, ಜನಮತ ಇವಿಎ ಪೆಟ್ಟಿಗೆಯಲ್ಲಿ ಲಾಕ್ ಆಗಿದೆ. ಆದರೆ ಎಕ್ಸಿಟ್ ಪೊಲ್ ಫಲಿತಾಂಶ ದ್ರಾವಿಡ ನೆಲದಲ್ಲಿ ರಾಜಕೀಯ ಬಿಸಿ ಹೆಚ್ಚಿಸಿದೆ. ಡಿಎಂಕೆ ಅಬ್ಬರ ನಾ? ಅಥವಾ ಎಐಎಡಿಎಂಕೆ ಅಚ್ಚರಿ ನಾ? ಈ ನಡುವೆ ಸಿನಿಮಾದಲ್ಲಿ ಸರ್ಪ್ರೈಸ್ ಕೊಟ್ಟಂತೆ ನಟ ವಿಜಯ್ ನೇತೃತ್ವದ ಟಿವಿಕೆ ಟ್ವಿಸ್ಟ್ ಕೊಡುತ್ತಾ ಎಂಬುದು ಇಂದು ತಿಳಿಯಲಿದೆ.

ದೇಶಾದ್ಯಂತ ಭಾರೀ ಕುತೂಹಲಕ್ಕೆ ಕಾರಣವಾಗಿರುವ ಪಂಚ ರಾಜ್ಯಗಳ ಚುನಾವಣೆ ಪೈಕಿ ಎಲ್ಲರ ಗಮನ ಸೆಳೆದಿದ್ದು ತಮಿಳುನಾಡು ವಿಧಾನಸಭೆ ಚುನಾವಣೆ ಕೂಡ. ಡಿಎಂಕೆ ಮತ್ತು ಎಐಎಡಿಎಂಕೆ ಸಾಂಪ್ರಾದಾಯಿಕ ಹೋರಾಟದಲ್ಲಿ ನಟ ದಳಪತಿ ವಿಜಯ್ ನೇತೃತ್ವದ ಟಿಎಂಕೆ ಎಂಟ್ರಿ ಇಡೀ ರಾಜಕೀಯ ಚಿತ್ರಣವನ್ನೇ ಬದಲಿಸಿದೆ.

ತನ್ನ ಅಭಿಮಾನಿಗಳು ಮತ್ತು ಯುವ ಮತದಾರರನ್ನು ಗಮನದಲ್ಲಿಟ್ಟುಕೊಂಡು ಕಣಕ್ಕಿಳಿದ ವಿಜಯ್ ರಾಜಕೀಯದಲ್ಲಿ ಹೊಸ ಸಸ್ಪೇನ್ಸ್ ಥ್ರೀಲರ್ ಸಿನಿಮಾ ಶುರು ಮಾಡಿದ್ದಾರೆ. ವಿಜಯ್ ಎಂಟ್ರಿಯಿಂದ ಡಿಎಂಕೆ ಎಐಡಿಎಂಕೆಯಲ್ಲೂ ಆತಂಕ ಶುರುವಾಗಿದ್ದು ತಮ್ಮ ಮತ ಬ್ಯಾಂಕ್ ಕಳೆದುಕೊಳ್ಳುವ ಭೀತಿಯಲ್ಲಿವೆ. ಈ ಹೊಸ ರಾಜಕೀಯ ಅಲೆಯಲ್ಲಿ 234 ವಿಧಾನಸಭೆ ಕ್ಷೇತ್ರಗಳಿಗೆ ಚುನಾವಣೆ ನಡೆದಿದ್ದು ಸೋಲು ಗೆಲುವಿನ ಲೆಕ್ಕಚಾರ ಶುರುವಾಗಿದೆ. ಈ ನಡುವೆ ಹಲವು ಸಂಸ್ಥೆಗಳು ಕೊಟ್ಟಿರುವ ಚುನಾವಣೊತ್ತರ ಸಮೀಕ್ಷೆಗಳು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಸಮೀಕ್ಷೆಗಳು ಹೇಳಿರುವುದೇನು?

* ಟುಡೇಸ್ ಚಾಣಕ್ಯ: ಡಿಎಂಕೆ-125, ಟಿವಿಕೆ-63, ಅಣ್ಣಾಡಿಎಂಕೆ- 45, ಇತರೆ- 1
* ಎಕ್ಸಿಸ್ ಮೈ ಇಂಡಿಯಾ: ಟಿವಿಕೆ : 98-120.. ಡಿಎಂಕೆ : 92-110.. ಎಐಎಡಿಎಂಕೆ : 22-32
* ಚಾಣಕ್ಯ ಸ್ಟ್ರ್ಯಾಟಜಿ: ಡಿಎಂಕೆ 145-160.. ಎಐಎಡಿಎಂಕೆ 50-65.. ಇತರೆ 18-26..
* ಪಿಮಾರ್ಕ್ : ಡಿಎಂಕೆ :125-145.. ಎಐಎಡಿಎಂಕೆ :65-85.. ಟಿವಿಕೆ : 16-26.. ಇತರೆ :1-6
* ಟೈಮ್ಸ್ ನೌ: ಡಿಎಂಕೆ 75-95.. ಎಐಎಡಿಎಂಕೆ 128 -147.. ಟಿವಿಕೆ 8-15.. ಇತರೆ 00
* ಮ್ಯಾಟ್ರಿಜ್: ನಡಿಎಂಕೆ : 122-132.. ಎನ್‌ಡಿಎ : 87-100.. ಟಿವಿಕೆ : 10-12..ಇತರೆ : 0-6

ಹಲವು ಸಮೀಕ್ಷೆಗಳ ಪ್ರಕಾರ ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ ಗೆಲುವು ಸಾಧಿಸಲಿದ್ದು, ಸತತ 2ನೇ ಬಾರಿ ಅಧಿಕಾರ ಹಿಡಿಯುವ ಸಾಧ್ಯತೆಯಿದೆ. 8 ರಲ್ಲಿ 5 ಸಮೀಕ್ಷೆಗಳು ಡಿಎಂಕೆಗೆ ಸ್ಪಷ್ಟ ಬಹುಮತ ನೀಡಿದ್ದರೆ, 1 ಸಮೀಕ್ಷೆ ಎಐಎಡಿಎಂಕೆ ಮತ್ತು 2 ಸಮೀಕ್ಷೆ ಟಿವಿಕೆ ವಿಜಯ್ ಪರವಿದೆ.

ಮೊದಲ ಪ್ರಯತ್ನದಲ್ಲೇ ಕಿಂಗ್ ಆಗ್ತಾರ ವಿಜಯ್?
ನಟ ವಿಜಯ್ ಕಣಕ್ಕಿಳಿದ್ದರಿಂದ ತಮಿಳುನಾಡು ಚುನಾವಣೆ ಈ ಬಾರಿ ಸಾಕಷ್ಟು ಕುತೂಹಲ ಮೂಡಿಸಿತ್ತು. ಆದರೆ ಕೆಲ ಸಮೀಕ್ಷೆಗಳು ಟಿವಿಕೆ 10 ಸ್ಥಾನಗಳೂ ದಾಟುವುದಿಲ್ಲ ಎಂದು ಹೇಳಿದ್ದರೆ, ಒಂದೆರಡು ಸಮೀಕ್ಷೆ 40 ಸ್ಥಾನ ಗೆಲ್ಲಬಹುದು ಎಂದು ತಿಳಿಸಿದೆ. ಎನ್‌ಡಿಟಿವಿ ನೇತೃತ್ವದಲ್ಲಿ ಸಮೀಕ್ಷೆ ನಡೆಸಿರುವ ಆಕ್ಸಿಕ್ ಮೈ ಇಂಡಿಯಾ ಸಂಸ್ಥೆ ಮಾತ್ರ ಟಿವಿಕೆ 120 ಸ್ಥಾನಗಳವರೆಗೆ ಗೆಲ್ಲಬಹುದು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದೆ. ಹೀಗಾಗೀ ಈ ಬಾರಿಯ ಚುನಾವಣೆಯಲ್ಲಿ ವಿಜಯ್ ಕಿಂಗ್ ಅಥಾವ ಕಿಂಗ್ ಮೇಕರ್ ಕೂಡಾ ಆಗಬಹುದು ಎನ್ನಲಾಗುತ್ತಿದೆ.

* ತಮಿಳುನಾಡಲ್ಲಿ ವಿಜಯ್ ಅಧಿಕಾರಕ್ಕೇರುತ್ತಾರಾ?

> ತಮಿಳುನಾಡಲ್ಲಿ ಮತ್ತೆ ಡಿಎಂಕೆ ಅಧಿಕಾರಕ್ಕೇರುವ ಬಗ್ಗೆ ಸುಳಿವು
> ಎಲ್ಲ ಸಮೀಕ್ಷೆಗಳಲ್ಲಿ ಡಿಎಂಕೆಗೆ ಬಹುಮತ
> ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಷ್ಟೇ ವಿಜಯ್ ಪಕ್ಷಕ್ಕೆ ಅಧಿಕಾರ
> ಕಿಂಗ್ ಮೇಕರ್ ಆಗುತ್ತಾರಾ ವಿಜಯ್…?
> ತಮಿಳುನಾಡಿನ ಎಂಜಿಆರ್ ಅಂತಲೇ ರಾಜಕೀಯ ತಜ್ಞರ ಪರಿಗಣನೆ
> ಆಕ್ಸಿಸ್ ಮೈ ಇಂಡಿಯಾ ಸಮೀಕ್ಷೆಯಲ್ಲಿ ಟಿವಿಕೆಗೆ 98-120 ಸ್ಥಾನ ಸಾಧ್ಯತೆ
> ಎಐಎಡಿಎಂಕೆಗೆ 22-32 ಸ್ಥಾನಗಳ ಲೆಕ್ಕಾಚಾರ
> ಈ ಸಮೀಕ್ಷೆ ನಿಜವಾದ್ರೆ ಅಣ್ಣಾಡಿಎಂಕೆ- ಟಿವಿಕೆ ಮೈತ್ರಿ ಸಾಧ್ಯತೆ
> ಟಿವಿಕೆ ಜೊತೆ ಮಾತುಕತೆಗೆ ಅಣ್ಣಾಡಿಎಂಕೆ ಒಲವು ತೋರಿದೆ. ಇನ್ನು ವಿಜಯ್ ರಾಜಕೀಯ ಅಖಾಡಕ್ಕಿಳಿದಿದ್ದರಿಂದ ತಮಿಳುನಾಡು ರಾಜಕೀಯದಲ್ಲಿ ಕೆಲ ಬದಲಾವಣೆ ನಿರೀಕ್ಷೆ ಮಾಡಲಾಗಿದೆ.

ಲಾಭ ಯಾರಿಗೆ – ಇನ್ಯಾರಿಗೆ ನಷ್ಟ?

* ಈ ಬಾರಿ ಮಹಿಳೆಯರು ಹೆಚ್ಚು ಮತ ಚಲಾವಣೆ (85.76%)
* ಪಶ್ಚಿಮ ತಮಿಳುನಾಡಿನ ಕರೂರು, ಸೇಲಂ, ನಾಮಕ್ಕಲ್‌ನಲ್ಲಿ 90%+ ಮತದಾನ
* ಮತದಾನ ಹೆಚ್ಚಳ ಟಿವಿಕೆಗೆ ಹೆಚ್ಚು ಲಾಭ ಆಗುವ ಸಾಧ್ಯತೆ
* ಡಿಎಂಕೆ, ಅಣ್ಣಾಡಿಎಂಕೆ, ಟಿವಿಕೆ ಮಧ್ಯೆ ಮತ ಇಬ್ಭಾಗ ಸಾಧ್ಯತೆ
* ನಟ ವಿಜಯ್ ಚರಿಸ್ಮಾದಿಂದ ಯುವ ಮತಗಳು
* ಹೊಸ ಮತದಾರರು ಟಿವಿಕೆ ಕಡೆ ವಾಲಬಹುದು
* ಟಿವಿಕೆಯಿಂದ ಮತಗಳು ಚದುರಿ ಫಲಿತಾಂಶ ಅನಿರೀಕ್ಷಿತವಾಗಬಹುದು

ಒಟ್ಟಾರೆ.. ತಮಿಳುನಾಡಿನಲ್ಲಿ ಸಿನಿಮಾ ಮತ್ತು ರಾಜಕೀಯ ಒಂದಕ್ಕೊಂದು ಆಳವಾದ ಸಂಬಂಧ ಹೊಂದಿರುವ ಕಾರಣ ಇತಿಹಾಸದಲ್ಲಿ ಹಲವು ತಿರುವು ಭವಿಷ್ಯದಲ್ಲೂ ಕಂಡರೂ ಅಚ್ಚರಿ ಇಲ್ಲ. ಆ ಅಚ್ಚರಿ ತಮಿಳುನಾಡಿನ ಜನರು ನೀಡಿದ್ದಾರ ಇಲ್ವ ಕೆಲವೇ ಗಂಟೆಗಳಲ್ಲಿ ಗೊತ್ತಾಗಲಿದೆ.

Share This Article