ಚೆನ್ನೈ: ತಮಿಳುನಾಡಿನ ಹಾಲಿ ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಸ್ವ ಕ್ಷೇತ್ರದಲ್ಲೇ ಸೋಲನುಭವಿಸಿದ್ದಾರೆ. ಇದು ಸತತ 2ನೇ ಬಾರಿಗೆ ಸರ್ಕಾರ ರಚಿಸುವ ಉತ್ಸಾಹದಲ್ಲಿದ್ದ ಡಿಎಂಕೆ ಪಕ್ಷಕ್ಕೆ ಭಾರೀ ಆಘಾತ ಉಂಟುಮಾಡಿದೆ.
2011 ರಿಂದಲೂ ಸತತವಾಗಿ ಗೆದ್ದು ಬರುತ್ತಿದ್ದ ಕೊಳತ್ತೂರು ಕ್ಷೇತ್ರದಲ್ಲಿ ಸ್ಟಾಲಿನ್ ಟಿವಿಕೆ ಅಭ್ಯರ್ಥಿ ವಿ.ಎಸ್ ಬಾಬು ಅವರ ವಿರುದ್ಧ ಸೋಲು ಕಂಡಿದ್ದಾರೆ. ಇದನ್ನೂ ಓದಿ: ಕೇರಳದಲ್ಲಿ ಕಾಂಗ್ರೆಸ್ ಅಬ್ಬರ: ಪಿಣರಾಯಿ ಪಲ್ಟಿ, ಯುಡಿಎಫ್ ಚಕ್ರವರ್ತಿ!
ಸತತ 3 ಬಾರಿ ಕೊಳತ್ತೂರು ಕ್ಷೇತ್ರದಿಂದ ಗೆದ್ದಿದ್ದ ಸ್ಟಾಲಿನ್, 2021ರ ಚುನಾವಣೆಯಲ್ಲಿ ಎಐಎಡಿಎಂಕೆಯ ಆದಿ ರಾಜಾರಾಮ್ ವಿರುದ್ಧ 70,384 ಮತಗಳ ಅಂತರದಿಂದ ಭರ್ಜರಿ ಗೆಲುವು ಕಂಡಿದ್ದರು. ಇದನ್ನೂಓದಿ: ವಿಜಯ್ ಕಾರು ಚಾಲಕನ ಪುತ್ರನಿಗೆ ಖುಲಾಯಿಸಿದ ಅದೃಷ್ಟ – ಗೆಲುವಿನ ಸನಿಹದತ್ತ ಶಬರಿನಾಥನ್
ದಕ್ಷಿಣ ಭಾರತದ ಪ್ರಮುಖ ರಾಜ್ಯಗಳಲ್ಲೊಂದಾದ ತಮಿಳುನಾಡಿನ 234 ವಿಧಾನಸಭಾ ಕ್ಷೇತ್ರಗಳಿಗೆ ಏ.23 ರಂದು ಮತದಾನ ನಡೆದಿತ್ತು. ರಾಜ್ಯದಲ್ಲಿ ದಾಖಲೆಯ 4,654 ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ 3,579 ಪುರುಷ ಮತ್ತು 443 ಮಹಿಳಾ ಮತದಾರರು ಸ್ಪರ್ಧಿಸಿದ್ದರು. 84.69% ಮತದಾನ ನಡೆದಿತ್ತು. ರಾಜ್ಯದಲ್ಲಿ ಬಹುಮತಕ್ಕೆ 118 ಸ್ಥಾನಗಳು ಬೇಕಿದ್ದವು. ರಾಜ್ಯದಲ್ಲಿ ಆಡಳಿತಾರೂಢ ಡಿಎಂಕೆ ಮೈತ್ರಿಕೂಟ, ಎಐಎಡಿಎಂಕೆ ಮೈತ್ರಿಕೂಟ, ನಟ ವಿಜಯ್ ನೇತೃತ್ವದ ಟಿವಿಕೆ, ಎನ್ಟಿಕೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದವು.
ಕಳೆದ ಚುನಾವಣೆಯಲ್ಲಿ 10 ವರ್ಷಗಳ ನಂತರ ಎಐಎಡಿಎಂಕೆ (AIADMK) ಆಡಳಿತವನ್ನು ಅಂತ್ಯಗೊಳಿಸಿ ಡಿಎಂಕೆ ನೇತೃತ್ವದ ಮೈತ್ರಿಕೂಟ ಭರ್ಜರಿ ಜಯ ಸಾಧಿಸಿತು. ಡಿಎಂಕೆ ಮೈತ್ರಿಕೂಟ: 159 ಸ್ಥಾನಗಳು (ಡಿಎಂಕೆ ಏಕಾಂಗಿಯಾಗಿ 133 ಸ್ಥಾನ ಗೆದ್ದು ಸ್ಪಷ್ಟ ಬಹುಮತ ಪಡೆಯಿತು). ಎಐಎಡಿಎಂಕೆ ಮೈತ್ರಿಕೂಟ: 75 ಸ್ಥಾನ ಗೆದ್ದಿದ್ದವು.

