ಬಂಗಾಳ ಫಲಿತಾಂಶದಿಂದ ಬಾಂಗ್ಲಾ, ಪಾಕಿಸ್ತಾನಕ್ಕೆ ಆಘಾತ: ಆರ್.ಅಶೋಕ್

2 Min Read

ಬೆಂಗಳೂರು: ಬಂಗಾಳ ಫಲಿತಾಂಶದಿಂದ (West Bengal Results) ಬಾಂಗ್ಲಾ, ಪಾಕಿಸ್ತಾನಕ್ಕೆ ಆಘಾತವಾಗಿದೆ ಎಂದು ವಿಪಕ್ಷ ನಾಯಕ ಆರ್. ಅಶೋಕ (R Ashok) ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿ ಜಗನ್ನಾಥ ಭವನದಲ್ಲಿ ಹೇಳಿದರು.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಇಂದು ಸುದಿನ. ಪ್ರಮುಖವಾಗಿ ಪಶ್ಚಿಮ ಬಂಗಾಳ ಚುನಾವಣೆ ದೇಶದ ಗಮನ ಸೆಳೆಯುತ್ತಿದೆ. ಅಸ್ಸಾಂ, ಪುದುಚೇರಿ ಮತ್ತು ಬಂಗಾಳದಲ್ಲಿ ಬಿಜೆಪಿಗೆ ದೊಡ್ಡ ಮಟ್ಟದಲ್ಲಿ ಬಹುಮತ ಬರುತ್ತಿದೆ. ಪರಿಣಾಮ ಡಿಎಂಕೆ ಹತಾಶ ಮನೋಭಾವದಲ್ಲಿ ಗೂಡು ಸೇರಿದ್ದಾರೆ ಎಂದು ಕುಟುಕಿದರು. ಇದನ್ನೂ ಓದಿ: ತಿರುಪತಿಯಿಂದ ನೇರ ವಿಜಯ್ ಮನೆಗೆ ತೆರಳಿದ ತ್ರಿಷಾ

ಮೋದಿ ಮೂರು ಬಾರಿ ಪ್ರಧಾನಿ ಆಗಿದ್ದಾರೆ. ಬಿಜೆಪಿ ದೊಡ್ಡ ಅಲೆ ದೇಶದಲ್ಲಿದೆ ಅನ್ನೋದು ಸಾಬೀತಾಗಿದೆ. ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲಾಗಿದೆ ಎಂದು ಟಾಂಗ್ ಕೊಟ್ಟರು. ಇದನ್ನೂ ಓದಿ: ದಾವಣಗೆರೆಯಲ್ಲಿ ಕಾಂಗ್ರೆಸ್‌ ಗೆಲುವು – ಸಮರ್ಥ್‌ ಮಲ್ಲಿಕಾರ್ಜುನ್‌ಗೆ ವಿಜಯಮಾಲೆ

ಮಮತಾ ಬ್ಯಾನರ್ಜಿ (Mamata Banerjee) ಅವರು ದೇಶದ್ರೋಹಿಗಳಿಗೆ ಬಾಗಿಲು ತೆರೆದುಕೊಟ್ಟಿದ್ದರು. ಆದರೆ ಇಂದಿನ ಫಲಿತಾಂಶ ದೇಶದ ಭದ್ರತೆಗೆ ಸುವರ್ಣ ಹಾದಿ ಮಾಡಿಕೊಟ್ಟಿದೆ. ಕೇರಳದಲ್ಲಿ ಬಿಜೆಪಿ ತನ್ನ ಖಾತೆ ಪ್ರಾರಂಭ ಮಾಡಲಿದೆ. ಬಂಗಾಳ ಮತ್ತು ಅಸ್ಸಾಂನಲ್ಲಿ ಬಿಜೆಪಿ ಸಾಧಿಸಿರುವ ಮುನ್ನಡೆ ಪ್ರಮುಖವಾಗಿದೆ ಎಂದರು. ಇದನ್ನೂ ಓದಿ: ಅಂಚೆ ಮತ ಮರು ಎಣಿಕೆಯಲ್ಲಿ ಗೆದ್ದ ಬಿಜೆಪಿ ಅಭ್ಯರ್ಥಿಗೆ ECI ಪ್ರಮಾಣ ಪತ್ರ

ಬಾಗಲಕೋಟೆ ಚುನಾವಣೆಯಲ್ಲಿ ಕಾಂಗ್ರೆಸ್ ಹಣದ ಹೊಳೆ ಹರಿಸಿದೆ ಮತ್ತು ರೌಡಿಸಂ ಮೂಲಕ ಅಧಿಕಾರ ದುರ್ಬಳಕೆ ಮಾಡಿಕೊಂಡಿದೆ. ರೆಸಾರ್ಟ್‌ಗಳಲ್ಲಿ ಹಣ ಹಂಚಿರುವ ದಾಖಲೆ ಸಂಗ್ರಹಿಸ್ತಿದ್ದೇವೆ ಎಂದು ಅಶೋಕ್ ದೂರಿದರು. ಇದನ್ನೂ ಓದಿ: ಪ್ರಧಾನಿ ಮೋದಿ ದೂರದೃಷ್ಟಿಯ ನಾಯಕತ್ವಕ್ಕೆ ಎನ್‌ಡಿಎ ಭರ್ಜರಿ ಗೆಲುವು – ಅಭಿನಂದನೆ ಸಲ್ಲಿಸಿದ ಹೆಚ್‌ಡಿಕೆ

ಕಾಂಗ್ರೆಸ್ ಪಕ್ಷವು ಮುಸ್ಲಿಮರ ಬೆನ್ನಿಗೆ ಚೂರಿ ಹಾಕಿದೆ. ಮುಸ್ಲಿಂ ಸಮುದಾಯವು ಈಗ ಕಾಂಗ್ರೆಸ್‌ಗೆ ಎಚ್ಚರಿಕೆ ಗಂಟೆ ಬಾರಿಸಿದೆ. ಇತ್ತ ಡಿ.ಕೆ. ಶಿವಕುಮಾರ್ ಅವರು ಹೋದ ಕಡೆಯಲ್ಲೆಲ್ಲಾ ಕಾಂಗ್ರೆಸ್ ಎಡವಿ ಬೀಳುತ್ತಿದೆ. ಗೆಲ್ಲುವ ಕಡೆ ಜಮೀರ್ ಅಹ್ಮದ್ ಅವರನ್ನು ಕಳುಹಿಸಿ, ಸೋಲುವ ಕಡೆ ಡಿಕೆಶಿಯವರನ್ನು ಕಳುಹಿಸುವ ಮೂಲಕ ಅವರನ್ನು ತುಳಿಯುವ ತಂತ್ರ ನಡೆಯುತ್ತಿದೆ ಎಂದು ಮಾತನಾಡಿದರು. ಚುನಾವಣಾ ಫಲಿತಾಂಶ ಮುನ್ನಡೆಯ ಹಿನ್ನಲೆ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷರು ನಿತಿನ್ ನಬಿನ್ ಮತ್ತು ಅಮಿತ್ ಶಾ ಅವರಿಗೆ ಆರ್.ಅಶೋಕ್ ಧನ್ಯವಾದ ಹೇಳಿದರು. ಇದನ್ನೂ ಓದಿ: ಅಸ್ಸಾಂ ಕಾಂಗ್ರೆಸ್‌ ಸಿಎಂ ಅಭ್ಯರ್ಥಿ ಗೌರವ್ ಗೊಗೊಯ್‌ಗೆ ಹೀನಾಯ ಸೋಲು

Share This Article