ನ.25 ರಂದು ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟ – ಒಂದೇ ಬಣದಲ್ಲಿ ಇಂಡೋ-ಪಾಕ್‌!

2 Min Read

ಮುಂಬೈ: ಭಾರತ ಮತ್ತು ಶ್ರೀಲಂಕಾದ ಜಂಟಿ ಆತೀತ್ಯದಲ್ಲಿ ನಡೆಯಲಿರುವ 2026ರ ಐಸಿಸಿ ಟಿ20 ವಿಶ್ವಕಪ್‌ (T20 World Cup 2026) ವೇಳಾಪಟ್ಟಿ ನ.25ರಂದು ಪ್ರಕಟವಾಗಲಿದೆ. ಅಂದು ಸಂಜೆ 6:30ಕ್ಕೆ ಐಸಿಸಿ (ICC) ವೇಳಾಪಟ್ಟಿ ಪ್ರಕಟಿಸಲಿದೆ.

- Advertisement -

ವಿಶ್ವಕಪ್‌ ಹಿನ್ನೆಲೆ 20 ತಂಡಗಳನ್ನ 4 ಗುಂಪುಗಳಲ್ಲಿ ವರ್ಗೀಕರಿಸಲಾಗಿದ್ದು, ಸಾಂಪ್ರದಾಯಿಕ ಎದುರಾಳಿ ಭಾರತ-ಪಾಕ್‌ (Ind vs Pak) ಎರಡೂ ತಂಡಗಳು ಒಂದೇ ಗುಂಪಿನಲ್ಲಿ ಸ್ಥಾನ ಪಡೆದುಕೊಂಡಿವೆ. ಸೆಪ್ಟೆಂಬರ್‌ನಲ್ಲಿ ಮುಕ್ತಾಯಗೊಂಡ ಏಷ್ಯಾಕಪ್‌ (Asia Cup) ಟೂರ್ನಿಯಲ್ಲೂ ಭಾರತ-ಪಾಕ್‌ ಒಂದೇ ಗುಂಪಿನಲ್ಲಿದ್ದವು, ಹೀಗಾಗಿ ಲೀಗ್‌ ಸುತ್ತು, ಸೂಪರ್‌ ಫೋರ್‌ ಹಾಗೂ ಫೈನಲ್‌ ಸೇರಿ 3 ಬಾರಿ ಮುಖಾಮುಖಿಯಾಗಿದ್ದವು. ಮೂರು ಬಾರಿಯೂ ಪಾಕ್‌ ಸೋಲು ಕಂಡಿತು. ಹೀಗಾಗಿ ಟಿ20 ವಿಶ್ವಕಪ್‌ನಲ್ಲಿ ಗುಂಪು ಹಂತದಿಂದಲೇ ಕಠಿಣ ಪೈಪೋಟಿ ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಗಿಲ್‌ಗೆ‌ ಕುತ್ತಿಗೆ ನರದ ಸಮಸ್ಯೆ – ಕನ್ನಡಿಗ ಕೆ.ಎಲ್‌ ರಾಹುಲ್‌ಗೆ ಏಕದಿನ ನಾಯಕನ ಪಟ್ಟ?

- Advertisement -

- Advertisement -

ಭಾರತ-ಪಾಕ್‌ ಫೈನಲ್‌ ತಲುಪಿದ್ರೆ ಲಂಕಾದಲ್ಲೇ ಮ್ಯಾಚ್‌
ಈ ಬಾರಿ ಭಾರತದ ಬಳಿಯೇ ಆತಿಥ್ಯ ಇದ್ದರೂ ಸೆಮಿಸ್‌ ಅಥವಾ ಫೈನಲ್‌ಗೆ ಪಾಕ್‌ ತಲುಪಿದ್ರೆ, ಆ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲೇ ನಡೆಯಲಿದೆ. ಏಕೆಂದ್ರೆ ಪಾಕ್‌ ಆತಿಥ್ಯದಲ್ಲಿ ನಡೆದ ಚಾಂಪಿಯನ್ಸ್‌ ಟ್ರೋಫಿ ಟೂರ್ನಿ ವೇಳೆ ಭಾರತ ತಂಡ ಪಾಕ್‌ಗೆ ತೆರಳಲು ನಿರಾಕರಿಸಿದರು. ಆ ಬಳಿಕ ನಡೆದ ಪಹಲ್ಗಾಮ್‌ ಅಟ್ಯಾಕ್‌, ಅದಕ್ಕೆ ಪ್ರತಿಯಾಗಿ ನಡೆದ ಆಪರೇಷನ್‌ ಸಿಂಧೂರ ಕಾರ್ಯಾಚರಣೆಯಿಂದ ಎರಡೂ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧ ಸಂಪೂರ್ಣವಾಗಿ ಮುರಿದು ಬಿದ್ದಿತು.

- Advertisement -

ವರದಿಗಳ ಪ್ರಕಾರ, ಆತಿಥೇಯ ಭಾರತ ಮತ್ತು ಶ್ರೀಲಂಕಾ ತಂಡಗಳು ಸಂಪೂರ್ಣ ವಿಭಿನ್ನ ಸವಾಲುಗಳನ್ನ ಎದುರಿಸಲಿವೆ. ಭಾರತ ತಂಡ ಸುಲಭ ಎನ್ನಬಹುದಾದ ಗ್ರೂಪ್‌ನಲ್ಲಿದ್ದರೆ ಶ್ರೀಲಂಕಾ ಕಠಿಣ ಸ್ಪರ್ಧೆಯಿರುವ ಗ್ರೂಪ್‌ನಲ್ಲಿ ಸಿಲುಕಿದೆ. ಹೀಗಾಗಿ ಭಾರತ ಸೆಮಿಸ್‌ ಪ್ರವೇಶಿಸೋದು ಸುಲಭ ಎನ್ನುವಂತಾಗಿದೆ. ಇದನ್ನೂ ಓದಿ: IND vs SA Test | ಕುಲ್ದೀಪ್ ಸ್ಪಿನ್ ಮ್ಯಾಜಿಕ್ – ಮೊದಲ ದಿನಾಂತ್ಯಕ್ಕೆ ಆಫ್ರಿಕಾ 247ಕ್ಕೆ 6 ವಿಕೆಟ್

ಯಾವ ಗುಂಪಿನಲ್ಲಿ ಯಾವ ತಂಡ?
ʻಎʼ ಗುಂಪು – ಭಾರತ, ಪಾಕಿಸ್ತಾನ, ನೆದರ್ಲೆಂಡ್, ನಮೀಬಿಯಾ, ಯುಎಸ್ಎ
ʻಬಿʼ ಗುಂಪು – ಶ್ರೀಲಂಕಾ, ಆಸ್ಟ್ರೇಲಿಯಾ, ಜಿಂಬಾಬ್ವೆ, ಐರ್ಲೆಂಡ್, ಒಮನ್
ʻಸಿʼ ಗುಂಪು – ಇಂಗ್ಲೆಂಡ್, ವೆಸ್ಟ್ ಇಂಡೀಸ್, ಬಾಂಗ್ಲಾದೇಶ, ನೇಪಾಳ, ಇಟಲಿ
ʻಡಿʼ ಗುಂಪು – ದಕ್ಷಿಣ ಆಫ್ರಿಕಾ, ನ್ಯೂಜಿಲೆಂಡ್, ಅಫ್ಘಾನಿಸ್ತಾನ, ಯುಎಇ, ಕೆನಡಾ

ನವೆಂಬರ್ 25 ರಂದು ಮುಂಬೈನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಐಸಿಸಿ ಅಧಿಕೃತವಾಗಿ ಬಣಗಳು ಹಾಗೂ ವೇಳಾಪಟ್ಟಿಯನ್ನು ಅಧಿಕೃತವಾಗಿ ಪ್ರಕಟಿಸಲಿದೆ. ಟೂರ್ನಿ 2024ರ ಆವೃತ್ತಿಯಂತೆಯೇ ನಡೆಯಲಿದೆ. ಪ್ರತಿ ಗ್ರೂಪ್‌ನಿಂದ ಅಗ್ರ ಎರಡು ತಂಡಗಳು ಸೂಪರ್-8ಕ್ಕೆ ಪ್ರವೇಶಿಸಲಿವೆ. ನಂತರ, ಅಗ್ರ 4 ತಂಡಗಳು ಸೆಮಿ-ಫೈನಲ್‌ಗೆ ಮುನ್ನಡೆಯಲಿವೆ. ಇದನ್ನೂ ಓದಿ: The Ashes | ಎರಡೇ ದಿನಕ್ಕೆ ಮುಗಿದ ಪಂದ್ಯ – ಆಸೀಸ್‌ಗೆ 8 ವಿಕೆಟ್‌ಗಳ ಜಯ, 1-0 ಸರಣಿ ಮುನ್ನಡೆ

Share This Article