ಡಿಕೆಶಿ ಸಿಎಂ ಆಗಲೆಂದು ಕೈ ಕಾರ್ಯಕರ್ತರಿಂದ ವಿಶೇಷ ಪೂಜೆ

1 Min Read

ಬಾಗಲಕೋಟೆ: ಅಧಿಕಾರ ಹಂಚಿಕೆ ಹಗ್ಗಜಗ್ಗಾಟ ತೀವ್ರವಾಗುತ್ತಿರುವ ಬೆನ್ನಲ್ಲೇ ಡಿಕೆ ಶಿವಕುಮಾರ್‌ (DK Shivakumar) ಸಿಎಂ ಆಗಬೇಕೆಂದು ಕಾಂಗ್ರೆಸ್ (Congresss) ಕಾರ್ಯಕರ್ತರು ದೇವಾಲಯಗಳಲ್ಲಿ ವಿಶೇಷ ಪಾರ್ಥನೆ, ಪೂಜೆ, ಹರಕೆಗಳನ್ನು ಆರಂಭಿಸಿದ್ದಾರೆ.

- Advertisement -

ಜಿಲ್ಲಾ ಕಾಂಗ್ರೆಸ್ ಯುವ ಘಟಕದ ಕಾರ್ಯಕರ್ತರು, ಜಮಖಂಡಿ (Jamkhandi) ತಾಲೂಕಿನ ಕಲ್ಲೋಳ್ಳಿದ ಶ್ರೀ ಲಕ್ಷ್ಮಿ ವೆಂಕಟರಮಣ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

- Advertisement -

ಡಿಕೆಶಿ ಸಿಎಂ ಆಗಲೆಂದು ಹರಕೆ ಹೊತ್ತ ಕಾರ್ಯಕರ್ತರು ದೇವರಿಗೆ ಪ್ರಾರ್ಥನೆ ಸಲ್ಲಿಸಿ, ಈಡುಗಾಯಿ ಒಡೆದು ವಿಶೇಷ ಪೂಜೆ ನಡೆಸಿದ್ದಾರೆ.

- Advertisement -

 
ಬಾಗಲಕೋಟೆ ಜಿಲ್ಲಾ ಯುವ ಘಟಕದ ಅಧ್ಯಕ್ಷ ಕುಮಾರ್ ದಾನಕ್ಕನವರ್ ಅವರ ನೇತೃತ್ವದಲ್ಲಿ ಈ ಪೂಜೆ ನಡೆದಿದೆ. ದೇಗುಲದಲ್ಲಿ ಡಿಕೆಶಿ ಅವರ ಫೋಟೋ ಇಟ್ಟು ಅಭಿಷೇಕ ಮಾಡುವ ಮೂಲಕ ಡಿಕೆಶಿ ಸಿಎಂ ಆಗಲಿ ಎಂಬ ಸಂಕಲ್ಪ ವ್ಯಕ್ತಪಡಿಸಿದ ಕಾರ್ಯಕರ್ತರು, ದೇವಸ್ಥಾನದ ಮುಂಭಾಗದಲ್ಲಿ 1001 ತೆಂಗಿನಕಾಯಿ ಒಡೆದು ಹರಕೆ ಸಲ್ಲಿಸಿದರು

- Advertisement -

ಪಕ್ಷದ ಆಪ್ತ ಶಾಸಕರು, ಸಚಿವರಿಂದ ಲಾಬಿ ಸಾಗುತ್ತಿರುವ ನಡುವೆಯೇ ಈಗ ಕಾರ್ಯಕರ್ತರೇ ಅಖಾಡಕ್ಕೆ ಇಳಿದಿರುವುದು ಜಿಲ್ಲೆಯ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ.

Share This Article