ರಾಹುಲ್‌ ವಿದೇಶದಿಂದ ಬಂದ ನಂತರ ಅಧಿಕಾರ ಹಂಚಿಕೆ

1 Min Read

ಬೆಂಗಳೂರು: ರಾಹುಲ್ ಗಾಂಧಿ (Rahul Gandhi) ವಿದೇಶದಿಂದ ಬಂದ ನಂತರ ಅಧಿಕಾರ ಹಂಚಿಕೆ ಮಾತುಕತೆ ಅಂತಿಮಗೊಳ್ಳುವ ಸಾಧ್ಯತೆಯಿದೆ.

- Advertisement -

ನಿನ್ನೆ ಸಿಎಂ ಸಿದ್ದರಾಮಯ್ಯ (Siddaramaiah) ಜೊತೆ ಒನ್‌ ಟಿ ಒನ್‌ ಸಭೆ ನಡೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಇಂದು ಡಿಸಿಎಂ ಡಿಕೆ ಶಿವಕುಮಾರ್‌ ಜೊತೆ ಸಭೆ ನಡೆಸಿದರು.

- Advertisement -

ಇಬ್ಬರ ಜೊತೆಗಿನ ಸಭೆಯ ಬಳಿಕ ದೆಹಲಿಯಲ್ಲಿ ಹೈಕಮಾಂಡ್‌ ಮಟ್ಟದ ಸಭೆ ನಡೆಯಲಿದೆ. ರಾಹುಲ್ ಗಾಂಧಿ ವಿದೇಶದಿಂದ ಬಂದ ತಕ್ಷಣ ನವೆಂಬರ್ ಅಂತ್ಯ ಅಥವಾ ಡಿಸೆಂಬರ್ ಮೊದಲ ವಾರದಲ್ಲಿ ಸಭೆ ನಡೆಯುವ ಸಾಧ್ಯತೆ. ಈ ಸಭೆಯಲ್ಲಿ ಅಧಿಕಾರ ಹಂಚಿಕೆಯ ಬಗ್ಗೆ ಹೈಕಮಾಂಡ್‌ ನಾಯರು ಸ್ಪಷ್ಟವಾದ ನಿರ್ಧಾರ ತೆಗೆದಕೊಳ್ಳಲಿದ್ದಾರೆ.

- Advertisement -

Share This Article