ಅಕ್ರಮ ತಡೆಯಲು ದೇಶಾದ್ಯಂತ 4,500 ಕಡೆ ದಾಳಿ – ಎಲ್‌ಪಿಜಿ ಉತ್ಪಾದನೆ ಶೇ.40 ರಷ್ಟು ಏರಿಕೆ: ಕೇಂದ್ರ ಸರ್ಕಾರ

2 Min Read

ನವದೆಹಲಿ: ದೇಶೀಯ ಪೂರೈಕೆಯನ್ನು ಹೆಚ್ಚಿಸಲು ಮತ್ತು ವಿತರಣೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡಲು ಎಲ್‌ಪಿಜಿ (LPG) ಉತ್ಪಾದನೆಯು ಶೇ. 40 ರಷ್ಟು ಹೆಚ್ಚಾಗಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಜಾತಾ ಶರ್ಮಾ ಹೇಳಿದ್ದಾರೆ.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೇಶಾದ್ಯಂತದ ಇರುವ ಸಂಸ್ಕರಣಾಗಾರಗಳು (Refineries) ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು ತಮ್ಮ ಅತ್ಯುನ್ನತ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಇಲ್ಲಿಯವರೆಗೆ ಸುಮಾರು 11,300 ಟನ್ ಎಲ್‌ಪಿಜಿಯನ್ನು ಗ್ರಾಹಕರಿಗೆ ಪೂರೈಸಲಾಗಿದೆ. ಪ್ರಮುಖ 15 ಭೌಗೋಳಿಕ ಪ್ರದೇಶಗಳಲ್ಲಿ ಸುಮಾರು 13,700 ಪೈಪ್ಡ್ ನೈಸರ್ಗಿಕ ಅನಿಲ (PNG) ಸಂಪರ್ಕಗಳನ್ನು ಒದಗಿಸಲಾಗಿದೆ. ಆನ್‌ಲೈನ್‌ ಎಲ್‌ಪಿಜಿ ಬುಕ್ಕಿಂಗ್‌ ಶೇ.93ಕ್ಕೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ಸಿಲಿಂಡರ್‌ಗಳ ಅಕ್ರಮ ಮಾರಾಟ ತಡೆಯಲು ಮತ್ತು ನ್ಯಾಯಯುತ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳು ಗುರುವಾರ ಭಾರತದಾದ್ಯಂತ ಸುಮಾರು 4,500 ದಾಳಿಗಳನ್ನು ನಡೆಸಿದ್ದಾರೆ ಎಂದು ಶರ್ಮಾ ಹೇಳಿದರು. ಇದನ್ನೂ ಓದಿ: ಜಾಗತಿಕ ತೈಲ, ಅನಿಲ ಬಿಕ್ಕಟ್ಟು; ಅಗತ್ಯ ಸರಕುಗಳ ಕಾಯ್ದೆಯ ಸೆಕ್ಷನ್ 3 ಜಾರಿಗೊಳಿಸಿದ ಸರ್ಕಾರ

ಸುಮಾರು 7,500 ಗ್ರಾಹಕರು ಎಲ್‌ಪಿಜಿಯಿಂದ ಪಿಎನ್‌ಜಿ ಸಂಪರ್ಕಕ್ಕೆ ಬದಲಾಯಿಸಿಕೊಂಡಿದ್ದಾರೆ. ದೃಢೀಕರಣ ಕೋಡ್ ಮೂಲಕವೇ ಸಿಲಿಂಡರ್‌ ವಿತರಣೆ ಮಾಡಲಾಗುತ್ತಿದೆ. ಪ್ಯಾನಿಕ್ ಬುಕಿಂಗ್‌ ಗಮನಾರ್ಹ ಇಳಿಕೆಯಾಗಿದೆ. ನಿನ್ನೆ ನಮಗೆ ಸುಮಾರು 55 ಲಕ್ಷ ರೀಫಿಲ್ ಬುಕ್ಕಿಂಗ್‌ ವಿನಂತಿಗಳು ಬಂದಿವೆ. ಎಲ್‌ಪಿಜಿ ಸಿಲಿಂಡರ್‌ಗಳ ವಿತರಣೆ ಸಾಮಾನ್ಯ ದಿನದಂತೆ ನಡೆಯುತ್ತಿದೆ ಎಂದು ತಿಳಿಸಿದರು.

ಶಿಪ್ಪಿಂಗ್ ಸಚಿವಾಲಯದ ವಿಶೇಷ ಕಾರ್ಯದರ್ಶಿ ರಾಜೇಶ್ ಸಿನ್ಹಾ, ಹಾರ್ಮುಜ್ ಜಲಸಂಧಿಯ (Hormuz Strait) ಪಶ್ಚಿಮದಲ್ಲಿರುವ ಎಲ್ಲಾ 22 ಹಡಗುಗಳು ಸುರಕ್ಷಿತವಾಗಿವೆ. ಕಳೆದ 24 ಗಂಟೆಗಳಲ್ಲಿ 25 ನಾವಿಕರು ಭಾರತಕ್ಕೆ ಮರಳಿದ್ದಾರೆ ಮತ್ತು ಯಾವುದೇ ಬಂದರುಗಳಲ್ಲಿ ಯಾವುದೇ ದಟ್ಟಣೆ ವರದಿಯಾಗಿಲ್ಲ ಎಂದು ಅವರು ಹೇಳಿದರು. ಇದನ್ನೂ ಓದಿ: ಇಸ್ರೇಲ್‌, ಅಮೆರಿಕಕ್ಕೆ ಎಚ್ಚರಿಕೆ ನೀಡಿದ ಕೆಲವೇ ಗಂಟೆಗಳಲ್ಲಿ ಇರಾನ್‌ ಟಾಪ್‌ ಕಮಾಂಡರ್‌ ಬಲಿ

ಕಳೆದ 24 ಗಂಟೆಗಳಲ್ಲಿ ಸಮುದ್ರದಲ್ಲಿ ಯಾವುದೇ ಅಹಿತಕರ ಘಟನೆಯ ವರದಿಯಾಗಿಲ್ಲ. ಪರ್ಷಿಯನ್ ಕೊಲ್ಲಿ ಪ್ರದೇಶದಲ್ಲಿರುವ ನಮ್ಮ ಎಲ್ಲಾ 22 ಹಡಗುಗಳು ಮತ್ತು 611 ಭಾರತೀಯ ನಾವಿಕರು ಸುರಕ್ಷಿತವಾಗಿದ್ದಾರೆ ಮತ್ತು ನಾವು ಅವರ ಮೇಲೆ ನಿರಂತರವಾಗಿ ನಿಗಾ ಇಡುತ್ತಿದ್ದೇವೆ ಎಂದು ಅವರು ತಿಳಿಸಿದರು.
Share This Article