ನವದೆಹಲಿ: ನಾಳೆ (ಮಾ.8) ನಡೆಯಲಿರುವ ಟಿ20 ವಿಶ್ವಕಪ್ ಫಿನಾಲೆ ಪಂದ್ಯದ ಹಿನ್ನೆಲೆ ನವದೆಹಲಿಯಿಂದ (Newdelhi) ಅಹಮದಾಬಾದ್‌ಗೆ (Ahmedabad) ವಿಶೇಷ ರೈಲು ಸಂಚರಿಸಲಿದೆ.
ಭಾರತೀಯ ರೈಲ್ವೆಯು, ಪ್ರಯಾಣಿಕರಿಗೆ ರೈಲುಗಳ ಲಭ್ಯತೆ ಹಾಗೂ ವಿಮಾನಗಳ ಟಿಕೆಟ್ ದರ ಹೆಚ್ಚಿರುವ ಹಿನ್ನೆಲೆ ಈ ನಿರ್ಧಾರ ಕೈಗೊಂಡಿದೆ. ಇಲಾಖೆಯ ಮಾಹಿತಿ ಪ್ರಕಾರ, ಈ ವಿಶೇಷ ರೈಲು ಇಂದು (ಮಾ.7) ರಾತ್ರಿ 11:45ರ ಸುಮಾರಿಗೆ ನವದೆಹಲಿಯಿಂದ ಹೊರಟು ನಾಳೆ (ಮಾ.8) ಮಧ್ಯಾಹ್ನ 2:30ರ ಸುಮಾರಿಗೆ ಸಬರಮತಿ ತಲುಪಲಿದೆ. ಈ ರೈಲು ದೆಹಲಿ ಕಂಟೋನ್ಮೆಂಟ್, ಗುರುಗ್ರಾಮ್ ಹಾಗೂ ಜೈಪುರ ಮೂಲಕ ಹಾದುಹೋಗಲಿದೆ. ಇದನ್ನೂ ಓದಿ: ನೆರೆ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸುತ್ತೇನೆ: ಇರಾನ್ ಅಧ್ಯಕ್ಷ ಮಸೌದ್
ಇನ್ನೂ ಈ ರೈಲಿನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುವ ದೃಷ್ಟಿಯಿಂದ 2nd ಎಸಿ, 3rd ಎಸಿ ಸೇರಿದಂತೆ ಒಟ್ಟು 19 ಕೋಚ್‌ಗಳನ್ನು ಹೊಂದಿದೆ.
ನಾಳೆ ಸಂಜೆ 7 ಗಂಟೆಗೆ ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಟಿ20 ವಿಶ್ವಕಪ್ ಫಿನಾಲೆ ಪಂದ್ಯ ನಡೆಯಲಿದ್ದು, ಭಾರತ ಹಾಗೂ ನ್ಯೂಜಿಲ್ಯಾಂಡ್ ಮುಖಾಮುಖಿಯಾಗಲಿವೆ.ಇದನ್ನೂ ಓದಿ: ಸಿಎಂ ಬಜೆಟ್ ಮಂಡನೆ ಬೆನ್ನಲ್ಲೇ ದೆಹಲಿಗೆ ತೆರಳಲಿದ್ದಾರೆ ಡಿಕೆಶಿ

