ಕಾಲೇಜು ಗಲಾಟೆಯಲ್ಲಿ ಮಧ್ಯಪ್ರವೇಶಿಸಿದ ಎಬಿವಿಪಿ ಕಾರ್ಯಕರ್ತರಿಗೆ ಬೆವರಿಳಿಸಿದ ಎಸ್‍ಪಿ ಅಣ್ಣಾಮಲೈ

Public TV
1 Min Read
SP

ಚಿಕ್ಕಮಗಳೂರು: ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಆಡಳಿತ ಮಂಡಳಿಯ ನಡುವಿನ ಕಿತ್ತಾಟಕ್ಕೆ ಮಧ್ಯಸ್ಥಿಕೆ ವಹಿಸೋಕೆ ಬಂದ ಎಬಿವಿಪಿ ಹಾಗೂ ವಿವಿಧ ಸಂಘಟನೆ ಕಾರ್ಯಕರ್ತರಿಗೆ ಎಸ್‍ಪಿ ಅಣ್ಣಾಮಲೈ ಚಾರ್ಜ್ ತೆಗೆದುಕೊಂಡಿದ್ದಾರೆ.

ಎಸ್‍ಪಿ ಅಣ್ಣಾಮಲೈ ಅವರು ವಿದ್ಯಾರ್ಥಿಗಳು ಹಾಗೂ ಮ್ಯಾನೇಜ್‍ಮೆಂಟ್ ಜೊತೆ ಮಾತುಕತೆ ನಡೆಸುತ್ತಿದ್ದ ವೇಳೆ ಒಳಹೋಗಲು ಯತ್ನಿಸಿದ ಸಂಘಟನಾ ಕಾರ್ಯಕರ್ತರಿಗೆ, ಇದು ಕಾಲೇಜು. ನಿಮಗೆ ಅನುಮತಿ ಹಾಗೂ ದೂರು ಕೊಟ್ಟೋರು ಯಾರೆಂದು ಕಿಡಿಕಾರಿ ಸ್ವತಃ ಎಸ್ಪಿಯವರೇ ಕಾರ್ಯಕರ್ತರನ್ನು ಹೊರದೂಡಿದ್ದಾರೆ.

ಇದಕ್ಕೂ ಮುನ್ನ ಕಾಲೇಜಿನಲ್ಲಿ ಮೂಲಭೂತ ಸೌಕರ್ಯವಿಲ್ಲ, ಪ್ರಧ್ಯಾಪಕರೇ `ಐ ಲವ್ ಯು’ ಅಂತಾ ಮೆಸೇಜ್ ಮಾಡ್ತಾರೆ. ಹುಡುಗಿಯರನ್ನ ಮೈಕೈ ಮುಟ್ಟಿ ಮಾತನಾಡಿಸ್ತಾರೆ ಅಂತ ವಿದ್ಯಾರ್ಥಿಗಳು ಆಡಳಿತ ಮಂಡಳಿಯ ವಿರುದ್ಧ ತಿರುಗಿಬಿದ್ದಿದ್ರು.

Share This Article