ಶಿರಸಿಯ ಅಂಧ ವಿದ್ಯಾರ್ಥಿನಿಗೆ ಸಿಕ್ತು ನ್ಯಾಯ – 84% ಅಂಕ ತೆಗೆದ್ರೂ ಫೇಲ್ ಮಾಡಿದ್ದ ಬೋರ್ಡ್

1 Min Read

– ಹೊಸ ಮಾರ್ಕ್ಸ್‌ಕಾರ್ಡ್‌ನಲ್ಲಿ ವಿದ್ಯಾರ್ಥಿನಿ ಲೀಸಾ ಟಾಪರ್; 625ಕ್ಕೆ 603 ಅಂಕ

- Advertisement -

ಕಾರವಾರ: ಎಸ್‌ಎಸ್‌ಎಲ್‌ಸಿ (SSLC)ಯ ಎಲ್ಲಾ ಪರೀಕ್ಷೆಗೂ ಹಾಜರಾಗಿದ್ದರೂ, ಪರೀಕ್ಷಾ ಪ್ರಾಧಿಕಾರದ ಎಡವಟ್ಟಿನಿಂದ ಫೇಲ್‌ ಆಗಿದ್ದ ಅಂಧ ವಿದ್ಯಾರ್ಥಿನಿ ಲೀಸಾ ಈಗ ಟಾಪರ್‌ ಆಗಿದ್ದಾರೆ.

- Advertisement -

ಪರೀಕ್ಷೆಗೆ ಹಾಜರಾಗಿದ್ದರೂ, ಸಮಾಜ ವಿಜ್ಞಾನ ಪರೀಕ್ಷೆಗೆ ಹಾಜರಾಗಿಲ್ಲ ಎಂದು ಶಿರಸಿ ನಗರದ ಇಂದಿರಾ ನಗರದ ಯುನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್‌ ಅವರನ್ನು ಫೇಲ್ ಮಾಡಿದ ಕುರಿತು ‘ಪಬ್ಲಿಕ್ ಟಿವಿ’ ವರದಿ ಬಿತ್ತರಿಸಿತ್ತು. ಇದರ ಬೆನ್ನಲ್ಲೇ ಇದೀಗ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಪ್ರಾಧಿಕಾರವು ತನ್ನ ತಪ್ಪನ್ನು ತಿದ್ದಿಕೊಂಡು ಸಮಾಜ ವಿಜ್ಞಾನಕ್ಕೆ 97 ಅಂಕ ನೀಡಿದೆ. ಇದೀಗ ಅಂಧ ವಿದ್ಯಾರ್ಥಿನಿ ಲೀಸಾ 625 ಕ್ಕೆ 603 ಅಂಕ ಗಳಿಸಿ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಇದನ್ನೂ ಓದಿ: ಪರೀಕ್ಷೆಗೆ ಹಾಜರಾಗಿದ್ರೂ ಗೈರು – ಅಂಧ ವಿದ್ಯಾರ್ಥಿನಿ ಫೇಲ್‌

- Advertisement -

ಇಂದಿರಾ ನಗರದ ಯುನಿಯನ್ ಉರ್ದು ಪ್ರೌಢಶಾಲೆಯಲ್ಲಿ SSLC ಪರೀಕ್ಷೆ ಬರೆದಿರುವ ಲೀಸಾ ಖಾನಮ್ ಅಂಧ ವಿದ್ಯಾರ್ಥಿನಿಯಾದ್ದರಿಂದ ವಿಷಯ ವಿನಾಯ್ತಿ ಇದ್ದು, ಅದರಂತೆ ಗಣಿತ ಮತ್ತು ವಿಜ್ಞಾನ ವಿಷಯದ ಬದಲು ಪೊಲಟಿಕಲ್ ಸೈನ್ಸ್ ಮತ್ತು ಎಕನಾಮಿಕ್ಸ್ ವಿಷಯದಲ್ಲಿ ಪರೀಕ್ಷೆ ಬರೆಯಲು ಅನುಮತಿ ನೀಡಲಾಗಿತ್ತು. ಇದರಂತೆ ಈಕೆ ಎಲ್ಲಾ ಪರೀಕ್ಷೆಗೆ ಹಾಜರಾಗಿ ಬರೆದಿದ್ದರು. ಆದರೆ, ಸೋಷಿಯಲ್ ಸೈನ್ಸ್ ಪರೀಕ್ಷೆಗೆ ಹಾಜರಾಗಿದ್ದರೂ ಗೈರು ಎಂದು ನಮೂದಿಸಲಾಗಿತ್ತು. ಇದರಿಂದ ಕನ್ನಡ -100, ಇಂಗ್ಲಿಷ್ -92, ಎಕನಾಮಿಕ್ಸ್ -98, ಪೊಲಿಟಿಕಲ್ ಸೈನ್ಸ್ -92. ಒಟ್ಟು -526 ಅಂಕ ಗಳಿಸಿ 84.16 % ಪಡೆದಿರುವ ಅಂಧ ವಿದ್ಯಾರ್ಥಿನಿ ಫೇಲ್ ಆಗಿದ್ದರು.

- Advertisement -

ಈ ಕುರಿತು ‘ಪಬ್ಲಿಕ್ ಟಿವಿ’ ವರದಿ ಪ್ರಸಾರ ಮಾಡುವ ಮೂಲಕ ಪರೀಕ್ಷಾ ಪ್ರಾಧಿಕಾರದ ತಪ್ಪನ್ನು ಎತ್ತಿ ಹಿಡಿದಿತ್ತು. ತನ್ನ ತಪ್ಪನ್ನು ತಿದ್ದಿಕೊಂಡ ಪರೀಕ್ಷಾ ಪ್ರಾಧಿಕಾರ ಆಕೆಯನ್ನು ಪಾಸ್ ಮಾಡಿದೆ. ಇದರಿಂದ ಲೀಸಾ ಹಾಗೂ ಆಕೆಯ ಕುಟುಂಬ ಸಂತೋಷಗೊಂಡಿದ್ದು, ಪಬ್ಲಿಕ್ ಟಿವಿಗೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: SSLC Result 2026 | ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಪ್ರಥಮ – 7 ವಿದ್ಯಾರ್ಥಿಗಳಿಗೆ 625ಕ್ಕೆ 625 ಅಂಕ

Share This Article