ಗೆಲುವು ತಂದುಕೊಟ್ಟ ನೋಬಾಲ್ – ರೋಹಿತ್ ಹೇಳಿದ್ದೇನು?

Public TV
2 Min Read
collage 8

ಬೆಂಗಳೂರು: ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಅವುಗಳನ್ನು ಪಕ್ಕಕಿಟ್ಟು ನೋಡುವುದಾದರೆ ಅಂಪೈರ್ ನಿರ್ಧಾರ ಕ್ರೀಡಾಸ್ಫೂರ್ತಿಯ ಮೇಲೆ ಪರಿಣಾಮ ಉಂಟು ಮಾಡುತ್ತದೆ ಎಂದು ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದ್ದಾರೆ.

ಪಂದ್ಯದ ಬಳಿಕ ಮಾತನಾಡಿದ ರೋಹಿತ್, ಅಂಪೈರ್ ತೀರ್ಮಾನ ಪಂದ್ಯದ ಗತಿಯನ್ನೇ ಬದಲಿಸುವ ನಿರ್ಧಾರ ಆಗುತ್ತಿತ್ತು. ಅಭಿಮಾನಿಗಳಲ್ಲಿ ಕ್ರಿಕೆಟ್ ಬಗ್ಗೆ ಮತ್ತಷ್ಟು ಅಸಕ್ತಿ ಮೂಡಿಸಲು ಇಂತಹ ತಪ್ಪುಗಳನ್ನು ಕಡಿಮೆ ಮಾಡಬೇಕು. ನಾವು ಮೈದಾನದಲ್ಲಿ ತಪ್ಪು ಮಾಡಿದರೆ ಅಲ್ಲೆ ಬೆಲೆ ನೀಡಬೇಕಾಗುತ್ತದೆ. ಇಂತಹ ತಪ್ಪುಗಳು ಕೇವಲ ಪಂದ್ಯದ ಮೇಲಷ್ಟೇ ಅಲ್ಲದೇ, ಇಡೀ ಟೂರ್ನಿಯ ಫಲಿತಾಂಶದ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಅಂಪೈರ್ ಇಂತಹ ತಪ್ಪು ಮಾಡಿದರೆ ಏನಾಗುತ್ತದೆ? ಈ ಬಗ್ಗೆ ಬಿಸಿಸಿಐ ನಿರ್ಧಾರ ಮಾಡಬೇಕಿದೆ ಎಂದರು.

ಟೂರ್ನಿಯಲ್ಲಿ ನಾವು ಮೊದಲ ಗೆಲುವು ಪಡೆದಿದ್ದು ಸಂತಸ ತಂದಿದ್ದು, ಬುಮ್ರಾ ಉತ್ತಮ ಬೌಲಿಂಗ್ ದಾಳಿ ನಡೆಸಿದರು. ಪಂದ್ಯದ ಮುಖ್ಯ ಹಂತದಲ್ಲಿ ಕೊಹ್ಲಿ ವಿಕೆಟ್ ಪಡೆದದ್ದು ತಿರುವು ನೀಡಿತ್ತು. ಅಲ್ಲದೇ ಲಸಿತ್ ಮಾಲಿಂಗ ಬೌಲಿಂಗ್ ಕೂಡ ಉತ್ತಮವಾಗಿತ್ತು. ವಿಶ್ವಕಪ್ ದೃಷ್ಟಿಯಿಂದಲೂ ಟೂರ್ನಿ ಅವರಿಗೆ ಪ್ರಮುಖವಾಗಿದೆ ಎಂದರು. ಪಂದ್ಯದಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸಿದ ಬುಮ್ರಾ ಅಂತಿಮ ಎರಡು ಓವರಿನಲ್ಲಿ ನೀಡಿದ್ದು ಕೇವಲ 6 ರನ್ ಮಾತ್ರ. ಒಟ್ಟಾರೆ 4 ಓವರ್ ಬೌಲ್ ಮಾಡಿದ ಬುಮ್ರಾ 20 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಮಿಂಚಿದರು.

ಕೊನೆಯ ಎಸೆತದಲ್ಲಿ ಆರ್ ಸಿಬಿಗೆ 7 ರನ್‍ಗಳ ಅವಶ್ಯಕತೆ ಇತ್ತು. ಕೊನೆಯ ಓವರನ್ನು ಮುಂಬೈ ತಂಡದ ಆಟಗಾರ ಲಸಿತ್ ಮಾಲಿಂಗ ಬೌಲಿಂಗ್ ಮಾಡಿದ್ದಾಗ ಶಿವಂ ದುಬೆ ಕ್ರೀಸ್ ನಲ್ಲಿದ್ದರು. ಕೊನೆಯ ಎಸೆತದಲ್ಲಿ ಶಿವಂ ದುಬೆ ಯಾವುದೇ ರನ್ ಪಡೆಯಲಿಲ್ಲ. ಆದರೆ ರಿಪ್ಲೈ ನೋಡಿದ್ದಾಗ ಲಸಿತ್ ಅವರ ಕಾಲು ಕ್ರೀಸ್‍ಗಿಂತ ಮುಂದೆ ಇತ್ತು. ಅಂದರೆ ನೋ ಬಾಲ್ ಆಗಿತ್ತು. ಆದರೆ ಅದನ್ನು ಅಂಪೈರ್ ಗಮನಿಸಲಿಲ್ಲ. ಅಂಪೈರ್ ನೋ ಬಾಲ್ ಎಂದು ಪರಿಗಣಿಸಿದ್ದರೆ ಕೊನೆಯ ಎಸೆತದಲ್ಲಿ 6 ರನ್ ಬೇಕಿತ್ತು. ಕೊನೆಯ ಎಸೆತವನ್ನು ಸಿಕ್ಸರ್ ಗೆ ಅಟ್ಟಿದ್ದರೆ ಪಂದ್ಯವನ್ನು ಆರ್ ಸಿಬಿ ಗೆದ್ದುಕೊಳ್ಳುತಿತ್ತು.

Share This Article