ಹೊಸ ಚಿತ್ರ ಘೋಷಿಸಿದ ರವಿ ಮೋಹನ್ – `ಬ್ರೋಕೋಡ್’ ಮೂಲಕ ನಿರ್ಮಾಣ ರಂಗಕ್ಕಿಳಿದ ತಮಿಳು ನಟ

Public TV
2 Min Read

ಮಿಳು ಚಿತ್ರರಂಗದ ಪ್ರತಿಭಾನ್ವಿತ ನಟ ರವಿ ಮೋಹನ್ (Ravi Mohan) ಹೊಸ ಸಿನಿಮಾ ಘೋಷಣೆ ಮಾಡಿದ್ದಾರೆ. ಬ್ರೋಕೋಡ್ (Bro Code) ಎಂಬ ಚಿತ್ರ ಅನೌನ್ಸ್ ಮಾಡಿರುವ ಅವರೀಗ, ನಿರ್ಮಾಣದ ಜವಾಬ್ದಾರಿ ಕೂಡ ಹೊತ್ತುಕೊಂಡಿದ್ದಾರೆ.

ಇತ್ತೀಚೆಗಷ್ಟೇ ತಮ್ಮದೇ ನಿರ್ಮಾಣ ಸಂಸ್ಥೆ ಬಗ್ಗೆ ಮಾಹಿತಿ ನೀಡಿದ್ದ ರವಿ ಮೋಹನ್, ಆ ಸಂಸ್ಥೆಯ ಚೊಚ್ಚಲ ಚಿತ್ರ ಯಾವುದು ಎಂಬ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ರವಿ ಮೋಹನ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಬ್ರೋಕೋಡ್‌ಗೆ ಅವರೇ ನಾಯಕ ನಟನಾಗಿ ಕಾಣಿಸಿಕೊಳ್ಳಲಿದ್ದಾರೆ. ಇದನ್ನೂ ಓದಿ: ನಾಳೆ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ ಬಾಹ್ಯಾಕಾಶ ಯಾತ್ರೆ

ಡಿಕ್ಕಿಲೂನಾ ಮತ್ತು ವಡಕ್ಕುಪಟ್ಟಿ ರಾಮಸಾಮಿ ಚಿತ್ರದ ನಿರ್ದೇಶಕ ಕಾರ್ತಿಕ್ ಯೋಗಿ `ಬ್ರೋಕೋಡ್’ ಸಿನಿಮಾಗೆ ಆಕ್ಷನ್ ಕಟ್ ಹೇಳಲಿದ್ದಾರೆ. ರವಿ ಮೋಹನ್ ಜೊತೆಗೆ ಎಸ್.ಜೆ ಸೂರ್ಯ ಹಾಗೂ ನಾಲ್ವರು ಪ್ರಮುಖ ನಟಿಯರು ಈ ಚಿತ್ರದಲ್ಲಿ ಅಭಿನಯಿಸಲಿದ್ದಾರೆ. ಆ ನಾಲ್ವರು ನಟಿಯರು ಯಾರೆಂದು ಚಿತ್ರತಂಡ ಇನ್ನೂ ರಿವೀಲ್ ಮಾಡಿಲ್ಲ. ಪೊರ್ ತೋಝಿಲ್ ಚಿತ್ರದ ಮೂಲಕ ಹೆಸರುವಾಸಿಯಾದ ಕಲೈಸೆಲ್ವನ್ ಶಿವಾಜಿ ಅವರ ಛಾಯಾಗ್ರಹಣ ಈ ಚಿತ್ರಕ್ಕೆ ಇರಲಿದೆ. ಇದನ್ನೂ ಓದಿ: ಕಮಲ್‌ ಹಾಸನ್‌ಗೆ ಮತ್ತೆ ಶಾಕ್‌ – ತುರ್ತು ವಿಚಾರಣೆ ನಡೆಸಲ್ಲ ಎಂದ ಸುಪ್ರೀಂ ಕೋರ್ಟ್‌

ಅನಿಮಲ್ ಮತ್ತು ಅರ್ಜುನ್ ರೆಡ್ಡಿಯಂತಹ ಹಿಟ್ ಸಾಂಗ್‌ಗಳ ಸಂಗೀತ ನಿರ್ದೇಶಕ ಹರ್ಷವರ್ಧನ್ ಮ್ಯೂಸಿಕ್, ಪ್ರದೀಪ್ ಇ. ರಾಘವ್ ಸಂಕಲನ, ಎ. ರಾಜೇಶ್ ಕಲಾ ನಿರ್ದೇಶನದಲ್ಲಿ `ಬ್ರೋಕೋಡ್’ ಸಿನಿಮಾ ಮೂಡಿಬರಲಿದೆ. ಇದೊಂದು ಪಕ್ಕ ಫ್ಯಾಮಿಲಿ ಎಂಟರ್‌ಟೈನಿಂಗ್ ಜೊತೆಗೆ ಕಾಮಿಡಿ ಜಾನರ್ ಕಥೆಯನ್ನು ಒಳಗೊಂಡಿದೆ. ಇದನ್ನೂ ಓದಿ: ಸಿದ್ದು ಸಂಪುಟಕ್ಕೆ ನಡೆಯುತ್ತಾ ಮೇಜರ್‌ ಸರ್ಜರಿ? – 10 ಸಚಿವರಿಗೆ ಕೊಕ್‌ ಸಾಧ್ಯತೆ

`ಬ್ರೋಕೋಡ್’ ಸಿನಿಮಾದ ಕುರಿತು ಮಾತನಾಡಿದ ನಿರ್ದೇಶಕ ಕಾರ್ತಿಕ್ ಯೋಗಿ, ನಾನು ರವಿ ಮೋಹನ್ ಅವರಿಗೆ ಕಥೆಯನ್ನು ಹೇಳಿದಾಗ, ಅವರು ಅದನ್ನು ಸಂಪೂರ್ಣವಾಗಿ ಆನಂದಿಸಿದರು. ಅಲ್ಲದೇ ತಕ್ಷಣವೇ ಅದನ್ನು ನಿರ್ಮಿಸಲು ಮುಂದೆ ಬಂದರು ಎಂದು ಹೇಳಿದ್ದಾರೆ. ಇದನ್ನೂ ಓದಿ: Nelamangala | 2 ಸ್ಕೂಲ್ ಬಸ್‌ಗಳ ನಡುವೆ ಅಪಘಾತ – ಮಕ್ಕಳಿಗೆ ಸಣ್ಣಪುಟ್ಟ ಗಾಯ

ಈ ಸಿನಿಮಾದ ಚಿತ್ರೀಕರಣವು ಸೆಪ್ಟೆಂಬರ್‌ನಲ್ಲಿ ಪ್ರಾರಂಭವಾಗಲಿದೆ. ಇನ್ನೂ, ರವಿ ಮೋಹನ್ ಅವರು ಸುಧಾ ಕೊಂಗರ ನಿರ್ದೇಶನದ ಪರಾಶಕ್ತಿ ಮತ್ತು ಗಣೇಶ್ ಕೆ.ಬಾಬು ನಿರ್ದೇಶನದ ಕರಾಟೆ ಬಾಬು ಚಿತ್ರಗಳಲ್ಲಿಯೂ ನಟಿಸುತ್ತಿದ್ದಾರೆ. ಇದೀಗ ಅವರು ಮತ್ತೊಂದು ಸಿನಿಮಾ ಘೋಷಣೆ ಮಾಡಿರುವುದು ಅವರ ಫ್ಯಾನ್ಸ್‌ಗೆ ಖುಷಿ ಕೊಟ್ಟಿದೆ.

Share This Article