ರಶ್ಮಿಕಾ ಮಂದಣ್ಣಗೆ ತಮಿಳು ಹುಡುಗ ಬೇಕಂತೆ: ಮತ್ತೆ ಟ್ರೋಲ್ ಆದ ಕನ್ನಡತಿ

Public TV
2 Min Read

ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನೆನ್ನೆಯಷ್ಟೇ ತಮಿಳು ಸಿನಿಮಾದ ಮುಹೂರ್ತದಲ್ಲಿ ಭಾಗಿಯಾಗಿದ್ದರು. ದಳಪತಿ ವಿಜಯ್ ಅವರ ಹೊಸ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದು, ಈ ಸಿನಿಮಾದ ಮುಹೂರ್ತ ನಿನ್ನೆಯಷ್ಟೇ ನಡೆದಿದೆ. ಈ ಸಂದರ್ಭದಲ್ಲಿ ದಳಪತಿ ವಿಜಯ್ ಅವರಿಗೆ ದೃಷ್ಟಿ ತಗೆದು ಶಹಭಾಷ್ ಅನಿಸಿಕೊಂಡಿದ್ದ ರಶ್ಮಿಕಾ, ಅದೇ ಸಂದರ್ಭದಲ್ಲೇ ತಮ್ಮ ಮನದಾಳದ ಮಾತುಗಳನ್ನು ಆಚೆ ಹಾಕಿ ಟ್ರೋಲ್ ಆಗುತ್ತಿದ್ದಾರೆ. ಇದನ್ನೂ ಓದಿ : ಮತ್ತೆ ನಿರ್ದೇಶನದತ್ತ ಐಶಾನಿ ಶೆಟ್ಟಿ : ಬೋಲ್ಡ್ ಅಂಡ್ ಬ್ಯೂಟಿಫುಲ್ ಮಾತುಕತೆ

ಮದುವೆಯ ವಿಷಯದಲ್ಲಿ ಹೆಚ್ಚು ಸುದ್ದಿ ಆಗುವ ರಶ್ಮಿಕಾ, ಈ ಹಿಂದೆ ತಾವು ಯಾವ ರಾಜ್ಯದ ಸೊಸೆಯಾಗಿರಬೇಕು ಎಂದು ಹೇಳಿ ಕನ್ನಡಿಗರ ಕಂಗೆಣ್ಣಿಗೆ ಗುರಿಯಾಗಿದ್ದರು. ಇದೀಗ ಯಾವ ಹುಡುಗನನ್ನು ಲಗ್ನ ಮಾಡಿಕೊಳ್ಳಬೇಕು ಎಂದು ಹೇಳಿ ಮತ್ತೆ ಸುದ್ದಿಯಾಗಿದ್ದಾರೆ. ಸಿನಿಮಾ ಮುಹೂರ್ತದ ಸಂದರ್ಭದಲ್ಲಿ ತಾವು ತಮಿಳು ಹುಡುಗನನ್ನು ಮದುವೆ ಆಗಬೇಕೆಂದು ಬಯಸಿರುವೆ ಎಂದು ಹೇಳಿಕೆಕೊಟ್ಟಿದ್ದಾರೆ ಎನ್ನಲಾಗುತ್ತಿದ್ದು, ಈಗದು ಭಾರೀ ಚರ್ಚೆಗೆ ಕಾರಣವಾಗಿದೆ. ಇದನ್ನೂ ಓದಿ : ಮತ್ಸ್ಯಕನ್ಯೆ ಸ್ಟೈಲ್‍ನಲ್ಲಿ ಸೋನಾಕ್ಷಿ ಫುಲ್ ಮಿಂಚಿಂಗ್

ಈ ಹಿಂದೆ ತಮಗೆ ತಮಿಳು ಕಲ್ಚರ್ ತುಂಬಾ ಇಷ್ಟ. ಹಾಗಾಗಿ ತಮಿಳು ನಾಡಿನ ಸೊಸೆಯಾಗುತ್ತೇನೆ ಎಂದು ಹೇಳಿದ್ದರು. ಆಗಲೂ ಕೂಡ ಅವರ ಮಾತು ಇಷ್ಟೇ ಸದ್ದು ಮಾಡಿತ್ತು. ಕನ್ನಡ ಸಿನಿಮಾ ರಂಗದಿಂದ ಬೆಳೆದು, ಕರ್ನಾಟಕದಲ್ಲೇ ಹುಟ್ಟಿ ಈ ರೀತಿಯ ಮಾತುಗಳನ್ನು ನಾವು ಕೇಳುವುದಿಲ್ಲ ಎಂದು ಕನ್ನಡದ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದರೆ, ತಮಿಳು ಅಭಿಮಾನಿಗಳು ಅವರ ಮಾತುಗಳನ್ನು ಸ್ವಾಗತಿಸಿದ್ದಾರೆ. ಇದನ್ನೂ ಓದಿ: ಕೆಜಿಎಫ್ ಚಾಪ್ಟರ್ ಒಂದನ್ನೇ ನೋಡಿಲ್ಲ ಎಂದ ಉರ್ಫಿ – ಯಶ್ ಫ್ಯಾನ್ಸ್ ಫುಲ್ ಗರಂ

ಈ ನಡುವೆ ತೆಲುಗಿನ ಹುಡುಗನ ಜತೆ ರಶ್ಮಿಕಾ ಓಡಾಡುತ್ತಿರುವುದು ಕೂಡ ಚರ್ಚೆಯಾಗುತ್ತಿದೆ. ರಕ್ಷಿತ್ ಶೆಟ್ಟಿ ಜತೆಗಿನ ನಿಶ್ಚಿತಾರ್ಥ ಮುರಿದುಕೊಂಡ ನಂತರ ಹೆಚ್ಚು ಸುದ್ದಿಯಾಗಿದ್ದು ವಿಜಯ್ ದೇವರಕೊಂಡ ಜತೆ ರಶ್ಮಿಕಾ ತುಂಬಾ ಆತ್ಮೀಯರಾಗಿದ್ದಾರೆ ಎನ್ನುವುದು. ಹಲವು ಪಾರ್ಟಿಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದು ಕೂಡ ಈ ಸುದ್ದಿಗೆ ಹೆಚ್ಚು ಪುಷ್ಠಿ ಕೊಟ್ಟಿತ್ತು. ಹಾಗಾದರೆ, ತೆಲುಗಿನ ಹುಡುಗನನ್ನು ಬಿಟ್ಟು, ತಮಿಳು ಹುಡುಗನ ಕೈ ಹಿಡಿಯುತ್ತಾರಾ ರಶ್ಮಿಕಾ ಎನ್ನುವುದು ಸದ್ಯಕ್ಕಿರುವ ಪ್ರಶ್ನೆ.

Share This Article
Leave a Comment

Leave a Reply

Your email address will not be published. Required fields are marked *