ರನ್ಯಾ ರಾವ್ ಕೇಸ್ – 50 ಕೆಜಿ ಗೋಲ್ಡ್ ಸಾಗಣೆಗೆ ಉಗಾಂಡ ವ್ಯಕ್ತಿ ಜೊತೆ ಡೀಲಿಂಗ್

1 Min Read

ಬೆಂಗಳೂರು: ರನ್ಯಾ ರಾವ್ (Ranya Rao) ಚಿನ್ನ ಕಳ್ಳಸಾಗಣೆ (Gold Smuggling) ಪ್ರಕರಣ ಸಂಬಂಧ 50 ಕೆಜಿ ಚಿನ್ನ ಸಾಗಣೆಗೆ ಉಗಾಂಡ (Uganda) ಮೂಲದ ಏಜೆಂಟ್ ಜೊತೆ ರನ್ಯಾ ರಾವ್ ಸಂಪರ್ಕದಲ್ಲಿದ್ದ ವಿಚಾರ ಇದೀಗ ಬೆಳಕಿಗೆ ಬಂದಿದೆ.

ಸುಮಾರು 102.55 ಕೋಟಿ ರೂ. ಮೌಲ್ಯದ ಚಿನ್ನವನ್ನು ಅಕ್ರಮವಾಗಿ ಭಾರತಕ್ಕೆ ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಬುಧವಾರ ನ್ಯಾಯಾಲಯಕ್ಕೆ ಸುದೀರ್ಘ ಚಾರ್ಜ್‌ಶೀಟ್ ಸಲ್ಲಿಸಿದೆ. ಇದರಲ್ಲಿ ಉಗಾಂಡಾ ಮೂಲದ ಏಜೆಂಟರೊಂದಿಗೆ ನಟಿ ನಡೆಸಿದ್ದ ಡೀಲಿಂಗ್ ಬಗ್ಗೆ ಆಘಾತಕಾರಿ ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ‌ ಮಧ್ಯಪ್ರಾಚ್ಯ ಬಿಕ್ಕಟ್ಟು – ಭಾರತದಲ್ಲಿ ಇಂಧನ, ತೈಲ ಪೂರೈಕೆ ಪರಿಶೀಲಿಸಲು ಮೋದಿ ಅಧ್ಯಕ್ಷತೆಯಲ್ಲಿ ಹೈವೋಲ್ಟೇಜ್‌ ಸಭೆ

ತನಿಖಾ ವರದಿಗಳ ಪ್ರಕಾರ, ರನ್ಯಾ ರಾವ್ ಕೇವಲ ದುಬೈನಿಂದ ಮಾತ್ರವಲ್ಲದೆ, ಆಫ್ರಿಕನ್ ರಾಷ್ಟ್ರಗಳಿಂದಲೂ ಚಿನ್ನ ಪಡೆಯಲು ಸಂಚು ರೂಪಿಸಿದ್ದರು. ಇದಕ್ಕಾಗಿ ಅವರು ಉಗಾಂಡಾ ಮೂಲದ ಏಜೆಂಟ್ ಜೊತೆ ನಿರಂತರ ಸಂಪರ್ಕದಲ್ಲಿದ್ದರು ಎನ್ನಲಾಗಿದೆ. ಆರಂಭದಲ್ಲಿ 5 ಕೆಜಿ ಚಿನ್ನವನ್ನು ಪ್ರಾಯೋಗಿಕವಾಗಿ ಸಾಗಿಸಲು ಯತ್ನಿಸಿದ್ದ ಈ ತಂಡ, ನಂತರ ಬರೋಬ್ಬರಿ 50 ಕೆಜಿ ಚಿನ್ನದ ಸಾಗಣೆಗೆ ಉಗಾಂಡಾ ಏಜೆಂಟ್ ಜೊತೆ ಡೀಲಿಂಗ್ ಕುದುರಿಸಿತ್ತು. ಇದಕ್ಕಾಗಿ ದುಬೈನಲ್ಲಿ ‘ವೀರಾ ಡೈಮಂಡ್ಸ್ ಟ್ರೇಡಿಂಗ್’ ಎಂಬ ಹೆಸರಿನ ಕಂಪನಿಯನ್ನು ಕೂಡ ತೆರೆಯಲಾಗಿತ್ತು. ಇದನ್ನೂ ಓದಿ: ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಗ್ರಾ.ಪಂ ಸಿಬ್ಬಂದಿ ಸಾವು

ಚಿನ್ನ ಖರೀದಿಗಾಗಿ ಅಡ್ವಾನ್ಸ್ ಆಗಿ 33 ಲಕ್ಷ ರೂ. ಪಾವತಿಸಲಾಗಿತ್ತು. ಜನವರಿ 2024ರಲ್ಲಿ ರಾಜು ಎಂಬಾತ ಚಿನ್ನ ತರಲು ಉಗಾಂಡಾದ ಕಂಪಾಲಕ್ಕೆ ತೆರಳಿದ್ದಾಗ, ಏಜೆಂಟ್ ಹೆಚ್ಚುವರಿಯಾಗಿ 1.7 ಕೋಟಿ ರೂ. ಬೇಡಿಕೆಯಿಟ್ಟಿದ್ದ ಎನ್ನಲಾಗಿದೆ. ರನ್ಯಾ ರಾವ್ ದುಬೈ ಮೂಲದ ವ್ಯಕ್ತಿಯ ಮೂಲಕ ಈ ಹಣ ನೀಡುವುದಾಗಿ ಒಪ್ಪಿಕೊಂಡಿದ್ದರೂ, ಕೊನೆಗೆ ತಾವು ವಂಚನೆಗೆ ಒಳಗಾಗಿದ್ದೇವೆ ಎಂದು ತಿಳಿದು ಅಲ್ಲಿನ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದರು ಎಂಬ ಅಂಶ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದನ್ನೂ ಓದಿ:  ರಾಜ್ಯದಲ್ಲಿ ಮುಂದುವರಿದ ʻಗ್ಯಾಸ್ ಟ್ರಬಲ್‌ʼ – ಮಾಂಸಹಾರಿ ಹೋಟೆಲ್, ರೆಸ್ಟೋರೆಂಟ್‌ಗಳು ಬಂದ್

Share This Article