ಇಲ್ಲಿ ಅಧಿವೇಶನ ಇದ್ದಾಗಲೆಲ್ಲ ರಾಹುಲ್ ವಿದೇಶದಲ್ಲೇ ಹೆಚ್ಚಿರ್ತಾರೆ: ಜೋಶಿ ಟೀಕೆ

2 Min Read

– ಪ್ರಧಾನಿ ವಿದೇಶ ಪ್ರವಾಸ ಬಗ್ಗೆ ತಗಾದೆ ತೆಗೆಯುವ ವಿಪಕ್ಷ ನಾಯಕರಿಗೆ ಜೋಶಿ ಖಡಕ್ ಚಾಟಿ

ನವದೆಹಲಿ: ಲೋಕಸಭೆ ವಿರೋಧ ಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ಸಂಸತ್ ಅಧಿವೇಶನ ಇದ್ದಾಗಲೆಲ್ಲ ಹೆಚ್ಚು ಕಾಲ ವಿದೇಶದಲ್ಲೇ ಇರುತ್ತಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ಕಾಂಗ್ರೆಸ್ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ಪ್ರಧಾನಿ ಮೋದಿ (Narendra Modi) ವಿದೇಶ ಪ್ರವಾಸ ಬಗ್ಗೆ ತಗಾದೆ ತೆಗೆಯುತ್ತಿರುವ ಕಾಂಗ್ರೆಸ್ (Congress) ನಾಯಕರ ಆರೋಪಕ್ಕೆ ತುಸು ಖಡಕ್ ಆಗಿಯೇ ಪ್ರತಿಕ್ರಿಯೆ ನೀಡಿದ ಜೋಶಿ, ರಾಹುಲ್ ಗಾಂಧಿ ಸಂಸತ್ ಅಧಿವೇಶನ ನಡೆಯುತ್ತಿರುವಾಗಲೇ ಏಕೆ ಹೆಚ್ಚು ಸಮಯ ವಿದೇಶ ಪ್ರವಾಸ ಕೈಗೊಳ್ಳುತ್ತಾರೆ ಎಂದು ತರಾಟೆಗೆ ತೆಗೆದುಕೊಂಡರು. ಇದನ್ನೂ ಓದಿ: 30 ವರ್ಷದ ಅನುಭವ ಇದೆ, ನಿಮ್ಮಿಷ್ಟದಂತೆ ಸಂಸತ್ತು ನಡೆಯಲ್ಲ – ರಾಹುಲ್‌ ಸವಾಲ್‌ಗೆ ಅಮಿತ್‌ ಶಾ ಕೌಂಟರ್

ಸಂಸತ್ ಅಧಿವೇಶನ ನಡೆಯುತ್ತಿರುವಾಗ ರಾಹುಲ್ ಗಾಂಧಿ ಹೆಚ್ಚಾಗಿ ವಿದೇಶದಲ್ಲಿಯೇ ಇರುತ್ತಾರೆ. ಬಳಿಕ ಸಂಸತ್ತಿನಲ್ಲಿ ತಮಗೆ ಮಾತನಾಡಲು ಅವಕಾಶವೇ ಸಿಗಲಿಲ್ಲ ಎಂಬ ವೃಥಾ ಆರೋಪ ಮಾಡುತ್ತಾರೆ ಎಂದು ಟೀಕಿಸಿದರು. ಇದನ್ನೂ ಓದಿ: ಹಿರಿಯ ಪೊಲೀಸ್ ಅಧಿಕಾರಿ ಅಲೋಕ್ ಕುಮಾರ್ ಡಿಜಿಪಿಯಾಗಿ ಮುಂಬಡ್ತಿ

ವಾಸ್ತವದಲ್ಲಿ ರಾಹುಲ್ ಗಾಂಧಿ ಸಂಸತ್ ಅಧಿವೇಶನಕ್ಕೆ ಆಗಾಗ್ಗೆ ಗೈರಾಗುತ್ತಲೇ ಇರುತ್ತಾರೆ. ಅವರೊಬ್ಬ ಅರೆಕಾಲಿಕ ಮತ್ತು ಬೇಜವಾಬ್ದಾರಿ ರಾಜಕೀಯ ನಾಯಕರು. ವಿಪಕ್ಷ ನಾಯಕನ ಸ್ಥಾನದಲ್ಲಿದ್ದು ಸ್ವಲ್ಪವೂ ಗಂಭೀರತೆಯೇ ಇಲ್ಲದ ರಾಜಕಾರಣಿ ಎಂದು ಪ್ರತ್ಯಾರೋಪ ಮಾಡಿದರು. ಇದನ್ನೂ ಓದಿ: ಸೀಲ್ ಡೌನ್ ಆಗಿದ್ದ ಜಾಲಿವುಡ್ ಸ್ಟುಡಿಯೋ ಮತ್ತೆ ಓಪನ್ – ಸದ್ದಿಲ್ಲದೇ ಅನುಮತಿ ಕೊಟ್ಟ ಮಾಲಿನ್ಯ ನಿಯಂತ್ರಣ ಮಂಡಳಿ

ಸಂಸತ್ತಿನ ಚಳಿಗಾಲದ ಅಧಿವೇಶನ ಮಧ್ಯೆ ರಾಹುಲ್ ಗಾಂಧಿ ಜರ್ಮನಿ ಭೇಟಿ ಕೈಗೊಳ್ಳುತ್ತಾರೆ. ಬಿಹಾರ ಚುನಾವಣೆ ವೇಳೆಯೂ ವಿದೇಶದಲ್ಲಿದ್ದರು. ಇದೀಗ ಬಿಜೆಪಿ-ಚುನಾವಣಾ ಆಯೋಗ ಒಪ್ಪಂದ ಮಾಡಿಕೊಂಡಿದೆ ಎಂಬ ವೃಥಾ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್, ಸೋತಾಗಲೆಲ್ಲ ಇವಿಎಂ ಮತ್ತು ಚುನಾವಣಾ ಆಯೋಗವನ್ನು ದೂಷಿಸುವ ಅಭ್ಯಾಸ ಬೆಳೆಸಿಕೊಂಡು ಬಿಟ್ಟಿದೆ ಎಂದು ದೂರಿದರು. ಇದನ್ನೂ ಓದಿ: ಅಗ್ರಸ್ಥಾನಕ್ಕೆ ದಿಗ್ಗಜರ ನಡುವೆ ಪೈಪೋಟಿ – 2ನೇ ಸ್ಥಾನಕ್ಕೆ ಜಿಗಿದ ಕೊಹ್ಲಿ, ಟಾಪ್‌-5ನಲ್ಲಿ ಮೂವರು ಭಾರತೀಯರು

ಜಾರ್ಖಂಡ್‌ನಲ್ಲಿ ಇಂಡಿ ಮೈತ್ರಿಕೂಟ ಗೆದ್ದಾಗ ಮತ್ತು ತೆಲಂಗಾಣದಲ್ಲಿ ಕಾಂಗ್ರೆಸ್ ಗೆದ್ದಾಗ ಏನು ಹೇಳಿದ್ದೀರಿ? ಬಿಹಾರದಲ್ಲಿ ಸೋತಾಗ, ಕರ್ನಾಟಕದ ಕೆಲ ಕ್ಷೇತ್ರಗಳಲ್ಲಿ ಸೋತಾಗ ಏನು ಹೇಳುತ್ತಿದ್ದೀರಿ? ಸ್ವಲ್ಪ ಪರಿಜ್ಞಾನ ಉಳ್ಳವರಾಗಿ ಮಾತನಾಡಿ ಎಂದು ಕಾಂಗ್ರೆಸ್ ನಾಯಕರಿಗೆ ಚಾಟಿ ಬೀಸಿದರು. ಇದನ್ನೂ ಓದಿ: ಮತ್ಯಾವ ಧಾರ್ಮಿಕ ಕೇಂದ್ರಗಳ ಮೇಲೆ ಷಡ್ಯಂತ್ರ ನಡೆಯದಂತೆ ತಡೆಯಬೇಕಿದೆ: ಧರ್ಮಸ್ಥಳ ದೇವಸ್ಥಾನ ಮನವಿ

ಕಾಂಗ್ರೆಸ್ ಸೋತಾಗ ಇವಿಎಂ ಮತ್ತು ಚುನಾವಣಾ ಆಯೋಗವನ್ನು ದೂಷಿಸುತ್ತದೆ. ಗೆಲುವಾದಾಗ ಬೇರೆಯದ್ದೇ ಪ್ರತಿಕ್ರಿಯೆ ನೀಡುತ್ತದೆ. ಹೀಗೆ ಸೋತಾಗೊಂದು, ಗೆದ್ದಾಗೊಂದು ಭಿನ್ನ ವಿಭಿನ್ನ ಹೇಳಿಕೆ ನೀಡುವುದು ಸರಿಯಲ್ಲ ಎಂದು ಹರಿಹಾಯ್ದರು. ಇದನ್ನೂ ಓದಿ: ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಠ 1 ವರ್ಷ, ಗರಿಷ್ಠ 7 ವರ್ಷ ಜೈಲು – ವಿಧಾನಸಭೆಯಲ್ಲಿ ವಿಧೇಯಕ ಮಂಡನೆ

Share This Article