ಬೆಂಗಳೂರು: ಜನರನ್ನ ಸೇರಿಸಿ ರ‍್ಯಾಲಿ ಮಾಡುವ ವಿಚಾರದಲ್ಲಿ ರಾಜಕಾರಣಿಗಳು ಎಚ್ಚರಿಕೆಯಿಂದ ಇರಬೇಕು ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.
ತಮಿಳುನಾಡು ಕಾಲ್ತುಳಿತದ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶನಿವಾರ (ಸೆ.27) ರಾತ್ರಿ ತಮಿಳುನಾಡಿನಲ್ಲಿ ನಡೆದ ದುರಂತ ನಮಗೆಲ್ಲ ದುಖಃ ತಂದಿದೆ. ಮಕ್ಕಳು, ತಾಯಂದಿರು ಸಾವನ್ನಪ್ಪಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳು ಎಚ್ಚರಿಕೆಯಿಂದಿರಬೇಕು. ಎಚ್ಚರಿಕೆ ಇಟ್ಟು ಕೆಲಸ ಮಾಡಬೇಕು. ದೇಶವೇ ದಿಗ್ಬ್ರಮೆಗೊಂಡಿದೆ. ಸಾವನ್ನಪ್ಪಿದವರ ಕುಟುಂಬಕ್ಕೆ ದೇವರು ದುಃಖ ಭರಿಸುವ ಶಕ್ತಿ ನೀಡಲಿ ಎಂದಿದ್ದಾರೆ.ಇದನ್ನೂ ಓದಿ: ಕಲ್ಯಾಣ ಕರ್ನಾಟಕದ ಮಳೆ ಅವಾಂತರ – ಪ್ರಕೃತಿಯ ನಿಯಮ ಎಂದ ಡಿಕೆಶಿ
ನಾವು ಈಗಾಗಲೇ ಜನಸಂದಣಿ ಬಿಲ್ ತಂದಿದ್ದೇವೆ. ನಾನೇ ಇದನ್ನು ಮೊದಲಿಗೆ ಮೂವ್ ಮಾಡಿದ್ದೆ. ಹೆಚ್.ಕೆ ಪಾಟೀಲ್ ಅವರಿಗೆ ಸರ್ಕಾರ ಸೂಚನೆ ನೀಡಿತ್ತು. ಮುಂದೆ ಈ ರೀತಿಯ ತೊಂದರೆ ಆಗಬಾರದು ಅಂತ ಮಾಡಿದ್ದೇವೆ.ನಮ್ಮಲ್ಲಿ ಸ್ಟೇಡಿಯಂನಲ್ಲಿ ಘಟನೆ ಆಗಿತ್ತು. ಅದಾದ ಮೇಲೆ ನಾವು ಎಚ್ಚರಿಕೆ ವಹಿಸಿದ್ದೇವೆ ಎಂದು ತಿಳಿಸಿದ್ದಾರೆ.