– ಇಲ್ಲಿ ಕಾಳ್ಗಿಚ್ಚು ಸಾಮಾನ್ಯ ಎಂದ ಡಿಸಿ!
ರಾಯ್ಪುರ್: ಇಂದು ಸಂಜೆ ವೇಳೆಗೆ ಛತ್ತೀಸ್‌ಗಢದ (Chhattisgarh) ಜಶ್‌ಪುರದ ಅರಣ್ಯ ವಲಯದಲ್ಲಿ ಮರಕ್ಕೆ ಖಾಸಗಿ ವಿಮಾನ (Private Plane) ಡಿಕ್ಕಿಯಾಗಿ ಪತನಗೊಂಡಿದೆ (Plane Crash) ಎಂಬುದು ಸುಳ್ಳು ಸುದ್ದಿ ಎಂದು ಅಲ್ಲಿನ ಸರ್ಕಾರ ಘೋಷಿಸಿದೆ. ಆ ಭಾಗದಲ್ಲಿ ಯಾವುದೇ ವಿಮಾನ ಅಪಘಾತ ಸಂಭವಿಸಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವಾಲಯ ಕೂಡ ಸ್ಪಷ್ಟಪಡಿಸಿದೆ.
VIDEO | Jashpur, Chhattisgarh: Collector Rohit Vyas inspects the Narayanpur hills after reports of smoke.
He clarifies, “Some media channels had reported a plane crash in the Narayanpur hills. Our entire team is on the spot, and drone surveillance is also underway. No evidence… pic.twitter.com/cvt8z2ZiWg
— Press Trust of India (@PTI_News) April 20, 2026
ವಿಮಾನ ಪತನಗೊಂಡಿದೆ ಎಂದು ಹಂಚಿಕೊಳ್ಳಲಾದ ವಿಡಿಯೋ ಹಾಗೂ ವರದಿಗಳ ನಂತರ ನಾರಾಯಣಪುರದ ಬೆಟ್ಟಗಳಲ್ಲಿ ಜಿಲ್ಲಾಧಿಕಾರಿ ರೋಹಿತ್ ವ್ಯಾಸ್ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿ, ನಮ್ಮ ರಕ್ಷಣಾ ತಂಡವು ವಿಮಾನ ಪತನಗೊಂಡಿದೆ ಎನ್ನಲಾದ ಸ್ಥಳದಲ್ಲಿ ಬೀಡುಬಿಟ್ಟಿದೆ. ಡ್ರೋನ್ ಮೂಲಕ ಪರಿಶೀಲನೆ ಕೂಡ ನಡೆಯುತ್ತಿದೆ. ವಿಮಾನ ಅಪಘಾತದ ಯಾವುದೇ ಪುರಾವೆಗಳು ಅಲ್ಲಿ ಕಂಡುಬಂದಿಲ್ಲ. ಈ ಬಗ್ಗೆ ತನಿಖೆ ಇನ್ನೂ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಮರಕ್ಕೆ ಡಿಕ್ಕಿಯಾಗಿ ಖಾಸಗಿ ವಿಮಾನ ಪತನ
ವಿಮಾನ ಕೆಳಗೆ ಹಾರಿದ್ದನ್ನು ಗ್ರಾಮಸ್ಥರು ನೋಡಿದ್ದಾರೆ. ಇನ್ನೂ ಈ ಭಾಗದಲ್ಲಿ ಕಾಳ್ಗಿಚ್ಚು ತುಂಬಾ ಸಾಮಾನ್ಯವಾಗಿದೆ. ಬಹುಶಃ ಅಂತಹ ಹೊಗೆ ಅದಾಗಿದ್ದರೂ ಆಗಿರಬಹುದು. ನಮಗೆ ವಿಮಾನ ಅವಘಡದ ಯಾವುದೇ ಕುರುಹುಗಳು ಸಿಕ್ಕಿಲ್ಲ ಎಂದಿದ್ದಾರೆ.
ಜಾರ್ಖಂಡ್ ಮತ್ತು ಒಡಿಶಾ ಎರಡೂ ರಾಜ್ಯಗಳ ವಾಯು ಸಂಚಾರ ನಿಯಂತ್ರಕರೊಂದಿಗೆ ನಾವು ಮಾತನಾಡಿದ್ದೇವೆ. ತಮ್ಮ ನಿಯಂತ್ರಣ ವ್ಯವಸ್ಥೆಯಲ್ಲಿ ಯಾವುದೇ ವಿಮಾನವು ಸಂಪರ್ಕ ಕಡಿತಗೊಳ್ಳುವ ರೀತಿಯಲ್ಲಿ ಆ ಪ್ರದೇಶದಲ್ಲಿ ಹಾರಾಡುತ್ತಿಲ್ಲ ಎಂದು ಜಾರ್ಖಂಡ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಒಡಿಶಾದ ಅಧಿಕಾರಿಗಳು ಕೂಡ ಅಂತಹ ಯಾವುದೇ ವಿಮಾನದ ಸಂಪರ್ಕ ಕಡಿತಗೊಂಡಿಲ್ಲ ಎಂದು ಎಂದು ಮಾಹಿತಿ ನೀಡಿದ್ದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ವಿಜಯಪುರದ ಮಂಗಳೂರಿನಲ್ಲಿ ಖಾಸಗಿ ವಿಮಾನ ಪತನ

