ಏ.1 ರಿಂದ ಟೋಲ್ ಪ್ಲಾಜಾಗಳಲ್ಲಿ ನಗದು ಪಾವತಿ ಇಲ್ಲ?

1 Min Read

– ಡಿಜಿಟಲ್‌ ಪಾವತಿ ವ್ಯವಸ್ಥೆ ಜಾರಿ, ಸಂಚಾರ ದಟ್ಟಣೆ ಕಡಿಮೆ ಮಾಡಲು ಕ್ರಮ

- Advertisement -

ನವದೆಹಲಿ: ಏಪ್ರಿಲ್‌ 1 ರಿಂದ ದೇಶಾದ್ಯಂತ ಟೋಲ್‌ ಪ್ಲಾಜಾಗಳಲ್ಲಿ (Toll Plaza) ನಗದು ವಹಿವಾಟನ್ನು ಸ್ಥಗಿತಗೊಳಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಚಿಂತನೆ ನಡೆಸಿದೆ.

- Advertisement -

ಸಂಪೂರ್ಣ ಡಿಜಿಟಲ್ ಪಾವತಿ ವ್ಯವಸ್ಥೆ ಜಾರಿಗೆ ತರಲು ಕ್ರಮ ವಹಿಸಲಾಗಿದೆ. ಹೊಸ ನಿಯಮ ಜಾರಿಯಾದಲ್ಲಿ ಫಾಸ್ಟ್ ಟ್ಯಾಗ್ ಅಥವಾ ಯುಪಿಐ ಮೂಲಕ ಮಾತ್ರ ಟೋಲ್ ಪಾವತಿ ಮಾಡಬೇಕಾಗುತ್ತದೆ. ಇದನ್ನೂ ಓದಿ: ಎಐ ಶೃಂಗದಲ್ಲಿ ಶರ್ಟ್‌ ಬಿಚ್ಚಿ ಪ್ರತಿಭಟನೆ – ಯುವ ಕಾಂಗ್ರೆಸ್‌ ಕಾರ್ಯಕರ್ತರಿಗೆ ಕಾಲಿನಿಂದ ಒದ್ದ ವೀಕ್ಷಕರು

- Advertisement -

- Advertisement -

ಸದ್ಯ ಟೋಲ್‌ನಲ್ಲಿ ನಗದು ಪಾವತಿಗೆ ಅವಕಾಶ ಇದೆ. ಹೊಸ ನಿಯಮ ಜಾರಿಯಾದರೆ ಸಂಪೂರ್ಣ ಡಿಜಿಟಲ್ ಆಗಲಿದೆ. ಫಾಸ್ಟ್ ಟ್ಯಾಗ್ ಇಲ್ಲದಿದ್ದರೆ ಯುಪಿಐ ಮೂಲಕ 1.25% ಪಟ್ಟು ಹೆಚ್ಚು ಟೋಲ್ ಭರಿಸಬೇಕು. ದಟ್ಟಣೆ ಕಡಿಮೆ ಮಾಡಲು, ಪಾರದರ್ಶಕ ವ್ಯವಸ್ಥೆ ಜಾರಿಗೆ ಹೊಸ ಕ್ರಮ ಕೈಗೊಳ್ಳಲಾಗಿದೆ.

ಈ ಕ್ರಮವು ಶುಲ್ಕ ಪ್ಲಾಜಾಗಳಲ್ಲಿ ದಟ್ಟಣೆಯನ್ನು ಕಡಿಮೆ ಮಾಡುತ್ತದೆ. ಟೋಲ್ ವಹಿವಾಟುಗಳಲ್ಲಿ ಹೆಚ್ಚಿನ ಸ್ಥಿರತೆ ಮತ್ತು ಪಾರದರ್ಶಕತೆಯನ್ನು ತರುವ ಮೂಲಕ ಹೆದ್ದಾರಿ ಬಳಕೆದಾರರಿಗೆ ಸುಗಮ ಪ್ರಯಾಣಕ್ಕೆ ಅನುವು ಮಾಡಿಕೊಡುತ್ತದೆ ಎಂದು ಪ್ರಾಧಿಕಾರ ತಿಳಿಸಿದೆ. ಇದನ್ನೂ ಓದಿ: ಮ್ಯಾಕ್ರನ್ ಹೊಗಳಿದ ಬೆನ್ನಲ್ಲೇ ಯುಪಿಐ ಪರಿಚಯಿಸಿದ್ದೇ ನಾವು ಎಂದ ಕಾಂಗ್ರೆಸ್‌

Share This Article