ಪ್ರಿಯಕರನ ಮದ್ವೆಯಾಗೋಕೆ 6 ವರ್ಷದ ದಾಂಪತ್ಯಕ್ಕೆ ಕೊಳ್ಳಿ – ಪತಿ ಮನೆಯವರಿಂದ ಬೆದರಿಕೆ, ಪೊಲೀಸರ ಮೊರೆಹೋದ ನವಜೋಡಿ

1 Min Read

– 6 ತಿಂಗಳ ಗರ್ಭಿಣಿಯಾಗಿರುವ ಮಹಿಳೆ

ನೆಲಮಂಗಲ: ಪ್ರಿಯಕರನೊಂದಿಗೆ ಮದ್ವೆಯಾಗಲು 6 ವರ್ಷದ ದಾಂಪತ್ಯಕ್ಕೆ ಕೊಳ್ಳಿ ಇಟ್ಟು, ಇದೀಗ ಎರಡನೇ ಗಂಡನ ಮನೆಯವರಿಂದ ಬೆದರಿಕೆ ಬಂದಿದ್ದಕ್ಕೆ ನವ ದಂಪತಿ ಠಾಣೆ ಮೆಟ್ಟಿಲೇರಿದ್ದಾರೆ.

ನೆಲಮಂಗಲ ನಗರದ ಸುಭಾಷ್ ನಗರದ ನಿವಾಸಿ ವಿದ್ಯಾಶ್ರೀ ಹಾಗೂ ಅಭಿಷೇಕ್ ಕೈ ಹಿಡಿದ ನವಜೋಡಿಗಳು. ಇದನ್ನೂ ಓದಿ: ಅಮೆರಿಕ – ಇರಾನ್‌ ಮಧ್ಯೆ 2ನೇ ಹಂತದ ಮಾತುಕತೆಗೆ ಪ್ರಸ್ತಾಪ – ಮುಖಭಂಗ ತಪ್ಪಿಸಲು ಪಾಕ್‌ ಶತಪ್ರಯತ್ನ

ವಿದ್ಯಾಶ್ರೀಗೆ ಈಗಾಗಲೇ ಮದುವೆಯಾಗಿದ್ದು 6 ವರ್ಷಗಳಾಗಿವೆ. ಕೆಲಸ ಮಾಡುವ ವೇಳೆ ವಿದ್ಯಾಶ್ರೀಗೆ ಅಭಿಷೇಕ್ ಮೇಲೆ ಪ್ರೀತಿಯಾಗಿದ್ದು, 6 ವರ್ಷದ ದಾಂಪತ್ಯ ಜೀವನವನ್ನು ಕೊನೆಗೊಳಿಸಿ ಎಂಟು ತಿಂಗಳ ಹಿಂದೆ ಕರಿ ಕಾಟೇರಮ್ಮ ದೇವಾಲಯದಲ್ಲಿ ಇಬ್ಬರು ಮದುವೆಯಾಗಿದ್ದಾರೆ.

ವಿದ್ಯಾಶ್ರೀ ಈಗ ಆರು ತಿಂಗಳ ಗರ್ಭಿಣಿಯಾಗಿದ್ದು, ಪತಿ ಅಭಿಷೇಕ್ ತಂದೆ ಮುನಿಶಂಕರಯ್ಯ ಹಾಗೂ ತಾಯಿ ಆನಂದಮ್ಮ ಅವರು ಜಾತಿಯ ಹೆಸರಿನಲ್ಲಿ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ಕೊಲೆ ಬೆದರಿಕೆಯೂ ಹಾಕಿದ್ದಾರೆ. ಸದ್ಯ ಅಭಿಷೇಕ್ ಪೋಷಕರ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದಾರೆ. ಬೇರೆ ಜಾತಿ ಮಹಿಳೆಯನ್ನ ಮದುವೆಯಾಗಿದ್ದೀಯಾ ಅಂತ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ, ಯುವ ಜೋಡಿ ನೆಲಮಂಗಲ ಟೌನ್ ಪೊಲೀಸರ ಮೊರೆ ಹೋಗಿದ್ದಾರೆ.ಇದನ್ನೂ ಓದಿ:  ಹಾರ್ಮುಜ್‌ಗೆ ಬಂದ್ರೆ ಕತೆ ಮುಗಿಸಿಬಿಡ್ತೀನಿ – ದಿಗ್ಬಂಧನ ಮುರಿಯುವ ಯಾವ್ದೇ ಪ್ರಯತ್ನ ಬೇಡ: ಟ್ರಂಪ್‌ ಬಿಗ್‌ ವಾರ್ನಿಂಗ್‌

Share This Article