ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯ ವಾಹನ ಸವಾರರಿಗೆ ದರದ ಏರಿಕೆ ಮತ್ತೊಂದು ಶಾಕ್ ಎದುರಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಸೆಪ್ಟೆಂಬರ್ 1 ರಿಂದ ದರ ಏರಿಕೆ ಮಾಡಿ, ವಾಹನ ಸವಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶಾಕ್ ನೀಡಿದೆ.
ಇಂದು ಮಧ್ಯರಾತ್ರಿಯಿಂದ 5 ರೂ. ದರ ಏರಿಕೆಯಾಗಲಿದೆ. ನೆಲಮಂಗಲ ದೇವಿಹಳ್ಳಿ ಎಕ್ಸ್ಪ್ರೆಸ್ ಪ್ರೈವೇಟ್ ಲಿಮಿಟೆಡ್ ಟೋಲ್‌ಗಳಲ್ಲಿ ಏರಿಕೆಯಾಗಿದ್ದು, ನೆಲಮಂಗಲ ಹಾಸನ ರಾಷ್ಟ್ರೀಯ ಹೆದ್ದಾರಿಯ ಟೋಲ್ ಮೂಲಕ ಸಂಚರಿಸುವ ವಾಹನ ಸವಾರರಿಗೆ ಬರೆ ಬಿದ್ದಿದೆ. ಇದನ್ನೂ ಓದಿ: ಮಹಾರಾಷ್ಟ್ರ | ಮತ್ತೊಬ್ಬಳನ್ನು ಮದುವೆಯಾಗುವ ಆಸೆಗೆ ಪ್ರೇಯಸಿಯನ್ನೇ ಕೊಂದ ಪ್ರಿಯಕರ
ದೊಡ್ಡಕರೇನಹಳ್ಳಿ ಟೋಲ್ ಹಾಗೂ ಕಾರಬೈಲು ಟೋಲ್ ಪ್ಲಾಜಾಗಳಲ್ಲಿ ದರ ಏರಿಕೆಯಾಗಿದೆ. ಏಕಮುಖ ಸಂಚಾರಕ್ಕೆ 5 ರೂ., ದ್ವಿಮುಖ ಸಂಚಾರಕ್ಕೆ 10 ರೂ. ದರ ಏರಿಕೆ ಮಾಡಲಾಗಿದೆ. ಇದನ್ನೂ ಓದಿ: ಸಿಕ್ಸ್ ಮೇಲೆ ಸಿಕ್ಸ್, ನೋಟ್‌ಬುಕ್ ಸ್ಟೈಲ್ ಸಂಭ್ರಮಾಚರಣೆ – ರಾಥಿಯನ್ನು ಬೆಂಡೆತ್ತಿ ಕಿಚಾಯಿಸಿದ ರಾಣಾ
ಕಾರು, ಜೀಪು, ವ್ಯಾನ್ ಹಾಗೂ ಲಘು ಮೋಟಾರ್ ವಾಹನಗಳಿಗೆ ಮೊದಲಿದ್ದ ದರವೇ ಇರಲಿದೆ. ಫಾಸ್ಟ್ಟ್ಯಾಗ್ ಇದ್ದರೆ ಏಕಮುಖ ಸಂಚಾರಕ್ಕೆ ಈಗಿನ ದರ 55 ರೂ., 60 ದಿನದ ಸಂಚಾರಕ್ಕೆ 85 ರೂ., ಫಾಸ್ಟ್ಟ್ಯಾಗ್ ರಹಿತ 110 ರೂ. ಇತ್ತು. ಈಗಿನ ದರ 120 ರೂ. ಆಗಿದೆ.
ಲಘು ವಾಣಿಜ್ಯ ಹಾಗೂ ಸರಕು ವಾಹನಗಳ ಏಕಮುಖ ಸಂಚಾರಕ್ಕೆ 100 ರೂ. ಹಾಗೂ ದಿನದ ಸಂಚಾರಕ್ಕೆ 155 ರೂ. ದರ ಏರಿಕೆ ಮಾಡಲಾಗಿದೆ. ಈ ದರ ಏರಿಕೆಯಿಂದ ವಾಹನ ಮಾಲೀಕರ ಜೇಬಿಗೆ ಕತ್ತರಿ ಬಿದ್ದಿದೆ. ಇದೀಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ವಾಹನ ಸವಾರರು ಆಕ್ರೋಶ ಹೊರಹಾಕಿದ್ದಾರೆ.