ಇಸ್ರೇಲ್‌ – ಅಮೆರಿಕ Vs ಇರಾನ್‌ ಯುದ್ಧಕ್ಕೆ ಯೆಮನ್‌ ಎಂಟ್ರಿ – ಇಸ್ರೇಲ್‌ ಮೇಲೆ ಫಸ್ಟ್‌ ಟೈಂ ಮಿಸೈಲ್‌ ದಾಳಿ

2 Min Read

– ಕೆಂಪು ಸಮುದ್ರದಲ್ಲಿ ಆಟಟೋಪ ಪ್ರದರ್ಶಿಸದಂತೆ ಅಮೆರಿಕಕ್ಕೆ ಹೌತಿ ಗುಂಪು ಎಚ್ಚರಿಕೆ

ಜೇರುಸಲೇಂ: ಇಸ್ರೇಲ್-ಇರಾನ್ ಯುದ್ಧ (Iran Israel War) ಶುರುವಾಗಿ ಒಂದು ತಿಂಗಳು ಸಮೀಪಿಸುತ್ತಿದ್ದು, ಈ ಯುದ್ಧಕ್ಕೆ ಇದೀಗ ಯೆಮನ್‌ ಕೂಡ ಎಂಟ್ರಿಯಾಗಿದೆ. ಇದೇ ಮೊದಲ ಬಾರಿಗೆ ಯೆಮೆನ್‌ನಿಂದ ಇಸ್ರೇಲ್ ಮೇಲೆ ಕ್ಷಿಪಣಿ (Yemen Missile fire) ದಾಳಿ ನಡೆದಿದೆ.

ಯೆಮನ್‌ ಮಿಸೈಲ್‌ ದಾಳಿಯನ್ನ (Missile Strike) ಇಸ್ರೇಲ್‌ ಖಚಿತಪಡಿಸಿದೆ. ಯೆಮನ್‌ ಕ್ಷಿಪಣಿಯನ್ನ ನಾಶಪಡಿಸಿದ್ದೇವೆ. ನಮ್ಮ ಕಡೆ ಯಾವುದೇ ಯಾವುದೇ ಸಾವುನೋವು ಆಗಿಲ್ಲ ಎಂದು ಇರಾನ್‌ ಸೇನೆ ಹೇಳಿದೆ. ಇದನ್ನೂ ಓದಿ: ಆಕ್ರಮಿಸಿಕೊಳ್ತೇನೆ, ಇಲ್ಲವೇ ಸ್ವತಂತ್ರಗೊಳಿಸುತ್ತೇನೆ – ವೆನೆಜುವೆಲಾ, ಇರಾನ್‌ ಬಳಿಕ ಮತ್ತೊಂದು ದೇಶದ ಮೇಲೆ ಟ್ರಂಪ್‌ ಕಣ್ಣು

ಇರಾನ್ ಬೆಂಬಲಿಸಿ ಇತ್ತೀಚೆಗೆ ಯೆಮೆನ್‌ನಲ್ಲಿರುವ ಹೌತಿ (Houthi) ಬಂಡುಕೋರ ಸಂಘಟನೆ ಇಸ್ರೇಲ್ ಹಾಗೂ ಅಮೆರಿಕಕ್ಕೆ ಎಚ್ಚರಿಕೆ ನೀಡಿತ್ತು. ಇಸ್ರೇಲ್ ಅನ್ನು ಬೆಂಬಲಿಸಿ ಮತ್ತೆ ಯಾರಾದರೂ ಮುಂದುವರೆದರೆ ನಮ್ಮ ಬೆರಳುಗಳು ಬಂದೂಕಿನ ಟ್ರಿಗರ್‌ಗಳ ಮೇಲೆಯೇ ಇವೆ ಎಂದು ಹುತಿ ಕಮಾಂಡರ್ ಇತ್ತೀಚೆಗೆ ಎಚ್ಚರಿಸಿದ್ದ ಬೆನ್ನಲ್ಲೇ ಯೆಮೆನ್‌ನಿಂದ ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಆಗಿದೆ

ಇಸ್ರೇಲ್, ಅಮೆರಿಕ ಪಡೆಗಳು ಇರಾನ್ ಮೇಲೆ ದಾಳಿ ಮಾಡಲು ಕೆಂಪು ಸಮುದ್ರದಲ್ಲಿ ಆಟಾಟೋಪ ಪ್ರದರ್ಶಿಸಿದರೇ ತಕ್ಕ ಶಾಸ್ತಿ ಮಾಡುತ್ತೇವೆ ಎಂದು ಹೌತಿಗಳು ಎಚ್ಚರಿಸಿದ್ದಾರೆ. ಯೆಮೆನ್‌ನಲ್ಲಿ ಅಲ್ಪಸಂಖ್ಯಾತರು ಎನಿಸಿಕೊಂಡಿರುವ ಶಿಯಾ ಪಂಗಡದ ಉಪ ಪಂಗಡವಾಗಿರುವ ಹೌತಿಗಳಿಗೆ ಇರಾನ್ ಸಂಪೂರ್ಣ ಬೆಂಬಲ ನೀಡುತ್ತಿದೆ. ಇದನ್ನೂ ಓದಿ: ಈಗ ಚೀನಾ ಹಡಗುಗಳಿಗೂ ಶಾಕ್‌ – ಅನುಮತಿ ನೀಡದ ಇರಾನ್‌

ಇನ್ನೊಂದೆಡೆ ಹೌತಿ ಸೇನೆಯ ನಾಯಕರೊಬ್ಬರು ಇಸ್ರೇಲ್‌-ಅಮೆರಿಕ ಮಾಡುತ್ತಿರುವ ಯುದ್ಧ ಇಡೀ ಮುಸ್ಲಿಂ ರಾಷ್ಟ್ರಗಳ ವಿರುದ್ಧ. ಇದು ಇಸ್ಲಾಂ ವಿರುದ್ಧದ ಯುದ್ಧ. ಏಕತೆ, ನಮ್ಮ ಅಸ್ಮಿತೆಯ ವಿರುದ್ಧ ಎಂದು ಗುಡುಗಿರುವ ವಿಡಿಯೊಗಳು ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ಹರಿದಾಡುತ್ತಿವೆ.

ಸದ್ಯ ಇರಾನ್-ಇಸ್ರೇಲ್ ಸಂಘರ್ಷದಲ್ಲಿ ಅಧಿಕೃತವಾಗಿ ಹೌತಿಗಳು ಮಧ್ಯಪ್ರವೇಶಿಸಿದಂತಾಗಿದೆ. ಇದರಿಂದಾಗಿ ಕೆಂಪು ಸಮುದ್ರದಲ್ಲೂ ಕೆಂಪು ಬಾವುಟಗಳು ಹಾರುವಂತಾಗಿದೆ. ಇದನ್ನೂ ಓದಿ: `ಆಪರೇಷನ್ ಟ್ರೂ ಪ್ರಾಮಿಸ್-4′ – ಕದನ ವಿರಾಮ ಮಾತುಕತೆ ನಡುವೆ ಹೊಸ ದಾಳಿ ಆರಂಭಿಸಿದ ಇರಾನ್

Share This Article