ಗದಗ: ಕುಡಿಯುವ ನೀರಿನ ಬೋರ್‌ವೆಲ್ ಬಳಿ ಭೂಕುಸಿತದಿಂದ ಜನ ಆತಂಕಕ್ಕೆ ಒಳಗಾದ ಘಟನೆ ಗದಗದ (Gadag) ಅಂಬೇಡ್ಕರ್ ನಗರದಲ್ಲಿ ನಡೆದಿದೆ.
ಗದಗ-ಬೆಟಗೇರಿ ನಗರಸಭೆಗೆ ಸಂಬಂಧಿಸಿದ ಕುಡಿಯುವ ನೀರಿನ ಬೋರವೆಲ್ ಇದಾಗಿದೆ. ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ಭೂಕುಸಿತವಾಗಿದೆ ಎನ್ನಲಾಗುತ್ತಿದೆ. ಇದನ್ನು ಕಂಡು ಈ ಭಾಗದ ಜನರು ಆತಂಕಕ್ಕೆ ಒಳಗಾಗಿದ್ದಾರೆ. ಇದನ್ನೂ ಓದಿ: Bengaluru | ಪ್ರೇಯಸಿಯ ಹೊಸ ಲವ್ವರ್‌ಗೆ ಚಾಕು ಇರಿದ ಮಾಜಿ ಬಾಯ್‌ಫ್ರೆಂಡ್
ರಸ್ತೆಗೆ ಹೊಂದಿಕೊಂಡಿರುವ ಬೋರ್‌ವೆಲ್ ಆದ್ದರಿಂದ ಪ್ರತಿನಿತ್ಯ ಇದೇ ರಸ್ತೆ ಮೂಲಕ ನೂರಾರು ಜನ ಓಡಾಡುತ್ತಾರೆ. ಅಷ್ಟೇ ಅಲ್ಲ ಪಕ್ಕದಲ್ಲೇ ಅಂಗನವಾಡಿ ಕೇಂದ್ರ ಹಾಗೂ ಸಮೀಪದಲ್ಲೇ ಶಾಲೆ ಸಹ ಇದೆ. ಸುಮಾರು ಮೂರ್ನಾಲ್ಕು ಅಡಿ ಭೂಮಿ ಕುಸಿತವಾದ್ದರಿಂದ ಈ ಬಗ್ಗೆ ಸುರಕ್ಷತೆ ವಹಿಸುವಂತೆ ಗದಗ-ಬೆಟಗೇರಿ ನಗರಸಭೆಗೆ ಸ್ಥಳೀಯರು ಒತ್ತಾಯಿಸಿದ್ದಾರೆ.