ಕಳೆದ 11 ಸೀಸನ್‌ಗಳಿಂದಲೂ ಬಿಗ್‌ಬಾಸ್ ಕನ್ನಡ ಕಾರ್ಯಕ್ರಮ ಕಿಚ್ಚ ಸುದೀಪ್ ನಿರೂಪಣೆಯಲ್ಲೇ ಬಂದಿದೆ. ಕಳೆದ ಸೀಸನ್‌ನಲ್ಲಿ ನಿರೂಪಣೆ ಮಾಡುತ್ತಿರುವಾಗಲೇ ಅಮ್ಮನನ್ನ ಕಳೆದುಕೊಂಡಿದ್ದರು ಕಿಚ್ಚ. ಅಮ್ಮನಿಲ್ಲದ ನೋವಲ್ಲಿ ಕಾರ್ಯಕ್ರಮವನ್ನೂ ಬಿಟ್ಟುಬಿಡುವ ಯೋಚನೆ ಮಾಡಿದ್ದ ಕಿಚ್ಚ ಕೊನೆಗೆ ಅಮ್ಮ ಇಷ್ಟಪಡುತ್ತಿದ್ದ ಏಕೈಕ ಕಾರ್ಯಕ್ರಮ ಬಿಗ್‌ಬಾಸ್ ಅನ್ನೋದು ಅರಿವಾಗಿ ಬಳಿಕ ವಾಪಸ್ ವೇದಿಕೆ ಹತ್ತಿದ್ದರು. ಇದೀಗ ಬಿಗ್‌ಬಾಸ್ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್ ದಿನವೇ ಅಮ್ಮನ ಆಶೀರ್ವಾದ ಕಿಚ್ಚ ಸುದೀಪ್‌ಗೆ ಸಿಕ್ಕಿದೆ.ಇದನ್ನೂ ಓದಿ: ಬಿಗ್‌ಬಾಸ್ ಮನೆಯಲ್ಲಿ ವಿವಾದಿತ ಸ್ಪರ್ಧಿಗಳು!
ಮಗ ಸುದೀಪ್ ಮನೆಯಿಂದ ಕೆಲಸಕ್ಕೆ ಹೊರಡುವಾಗ ಎರಡು ಬಗೆಯ ದೇವರ ಪ್ರಸಾದವನ್ನ ತಿಲಕವಾಗಿ ಇಡುತ್ತಿದ್ದರು. ಜೊತೆಗೆ ಮಗನಿಗಾಗಿ ಶಾಲು ಕೊಟ್ಟು ಕಳಿಸುತ್ತಿದ್ದರು. ಅದನ್ನೇ ಬಿಗ್‌ಬಾಸ್ ವೇದಿಕೆಯಲ್ಲಿ ತೋರಿಸಲಾಗಿದೆ. ಬಿಗ್‌ಬಾಸ್ ಹಾಲಿ ಸೀಸನ್‌ನ ನಿರೂಪಣೆ ಪ್ರಾರಂಭಿಸಿ ಕಂಟೆಸ್ಟಂಟ್‌ಗಳನ್ನ ಕರೆಯೋಕೂ ಮುನ್ನ ಬಿಗ್‌ಬಾಸ್ ಕಡೆಯಿಂದ ಸುದೀಪ್‌ಗೆ ಅಮ್ಮನ ನೆನಪು ಮಾಡಿಕೊಡಲಾಗಿದೆ.
ಪುಟ್ಟದೆರಡು ಬೆಳ್ಳಿಡಬ್ಬದಲ್ಲಿ ಸಾಯಿಬಾಬಾ ವಿಭೂತಿ ಹಾಗೂ ಆಂಜನೇಯನ ಸಿಂಧೂರ ಪ್ರಸಾದವನ್ನ ಮನೆಯಿಂದ ಕೊಟ್ಟು ಕಳಿಸಲಾಗಿದೆ. ಇದು ಸುದೀಪ್‌ಗಾಗಿ ಅಮ್ಮ ಕೊಡುತ್ತಿದ್ದ ಸಾಂಪ್ರದಾಯಿಕ, ದೈವಿಕ ಶಕ್ತಿ ಅನ್ನೋದು ತಿಳಿದುಬಂದಿದೆ. ಜೊತೆಗೆ ಶಾಲ್‌ನ್ನೂ ಕೊಡುತ್ತಿದ್ದರಂತೆ. ಅನಿರೀಕ್ಷಿತವಾಗಿ ಮನೆಯಿಂದ ಬಿಗ್‌ಬಾಸ್ ವೇದಿಕೆಗೆ ಬಂದ ಅಮ್ಮನ ಆಶೀರ್ವಾದವನ್ನ ಕಂಡು ಸುದೀಪ್ ದಂಗಾದ್ರು. ಬಳಿಕ ವೇದಿಕೆಯಲ್ಲೇ ಅಮ್ಮನ ಆಶೀರ್ವಾದವೆಂದು ಭಾವಿಸಿ ಎರಡು ಡಬ್ಬದಲ್ಲಿರುವ ಪ್ರಸಾದ ಪಡೆದುಕೊಂಡು ಶಾಲ್‌ನ್ನೂ ತಮ್ಮ ಬಳಿ ಇಟ್ಟುಕೊಂಡು ಅದರ ವಿಶೇಷತೆಯನ್ನ ಅವರೇ ಬಹಿರಂಗಪಡಿಸಿದ್ದಾರೆ. ಬಳಿಕ ಅಮ್ಮನ ನೆನಪಲ್ಲಿ ಸುದೀಪ್ ಕ್ಷಣಕಾಲ ಭಾವುಕರಾದ್ರು. ಸ್ವಲ್ಪ ಸಾವರಿಸಿಕೊಂಡು ಎಂದಿನಂತೆ ಲವಲವಿಕೆಯಿಂದ ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ. ಈ ಅಪರೂಪದ ಘಟನೆಗೆ ಬಿಗ್‌ಬಾಸ್ ಸೀಸನ್ 12ರ ಗ್ರ್ಯಾಂಡ್ ಓಪನಿಂಗ್ ದಿನ ನಡೆದಿದೆ.ಇದನ್ನೂ ಓದಿ: ಸಿಂಪಲ್ ಸುನಿ ಗತವೈಭದ ಟೀಸರ್ ರಿಲೀಸ್