ತಿರುವನಂತಪುರಂ: ಸೋಮವಾರ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶಗಳು ಹೊರಬೀಳಲಿದೆ. ಫಲಿತಾಂಶ ಹೊರಬೀಳುತ್ತಿದ್ದಂತೆ ವಿಜಯೋತ್ಸವ ಆಚರಣೆಗೆ ವಿವಿಧ ಪಕ್ಷಗಳು ಭರದ ಸಿದ್ಧತೆ ನಡೆಸುತ್ತಿದೆ. ಕೇರಳದಲ್ಲೂ (Kerala) ಕಾರ್ಯಕರ್ತರು ಪಕ್ಷದ ಗೆಲುವನ್ನು ಸಂಭ್ರಮಿಸಲು ಬಿರಿಯಾನಿ, ಲಡ್ಡು ತಯಾರಿಕೆಯಲ್ಲಿ ತೊಡಗಿದ್ದಾರೆ.
ಮಲಪ್ಪುರಂ (Malappuram) ಜಿಲ್ಲೆಯ ಪಾಂಡಿಕ್ಕಾಡ್‌ನಲ್ಲಿ (Pandikkad), ಕಾಂಗ್ರೆಸ್ (Congress) ಮತ್ತು ಯುಡಿಎಫ್ (UDF) ಕಾರ್ಯಕರ್ತರು ಗೆಲುವಿನ ನಿರೀಕ್ಷೆಯಲ್ಲಿದ್ದು, ಸಂಭ್ರಮಾಚರಣೆಗಾಗಿ ಸುಮಾರು 5,000 ಜನರಿಗೆ ಬಿರಿಯಾನಿ (Biryani) ವಿತರಿಸಲು ಸಿದ್ಧತೆಗಳನ್ನು ಕೈಗೊಂಡಿದ್ದಾರೆ. ಬಿರಿಯಾನಿ ತಯಾರಿಕೆ ಮತ್ತು ವಿತರಣೆಗಾಗಿ ಪಟ್ಟಣದಲ್ಲಿ ದೊಡ್ಡ ದೊಡ್ಡ ಟೆಂಟ್ ಹಾಕಲಾಗಿದೆ. ಊಟದ ಜೊತೆಗೆ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಸಹ ಆಯೋಜಿಸಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಮೇ 4 ರಂದು ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ – ಎಣಿಕೆ ಕೇಂದ್ರಗಳ ಸುತ್ತ 3 ಹಂತದ ಭದ್ರತೆ, ಹೇಗಿದೆ ಕೊನೇ ಕ್ಷಣದ ಸಿದ್ಧತೆ?
ರಾಜ್ಯದಲ್ಲಿ 10 ವರ್ಷಗಳ ಎಲ್‌ಡಿಎಫ್ ಆಳ್ವಿಕೆಯ ಅಂತ್ಯವನ್ನು ಸಂಭ್ರಮಿಸುತ್ತೇವೆ. ಈ ಸಂಭ್ರಮಾಚರಣೆಗೆ ಸಿಪಿಎಂ ಕಾರ್ಯಕರ್ತರು ಸೇರಿದಂತೆ ಎಲ್ಲರನ್ನೂ ಸ್ವಾಗತಿಸುತ್ತೇವೆ ಎಂದು ಕಾಂಗ್ರೆಸ್ ಕಾರ್ಯಕರ್ತರೊಬ್ಬರು ಹೇಳಿದ್ದಾರೆ. ಇದನ್ನೂ ಓದಿ: ವಿಧಿಯಾಟಕ್ಕೆ ಸೆಡ್ಡು ಹೊಡೆದ ಛಲಗಾರ್ತಿ – ಜಯಶ್ರೀ ಕನಸಿನ ಬಿಲ್ಲಿಗೆ ಪಬ್ಲಿಕ್ ಟಿವಿ ಆಸರೆ!
ಕೊಚ್ಚಿಯಲ್ಲಿ ಬಿಜೆಪಿ (BJP) ಕಾರ್ಯಕರ್ತರು ಸಂಭ್ರಮಾಚರಣೆಗೆ ಸಿದ್ಧತೆ ನಡೆಸುತ್ತಿದ್ದು, ಲಡ್ಡುಗಳನ್ನು (Laddu) ತಯಾರಿಸಿ ಕೊಡುವಂತೆ ಬೇಡಿಕೆ ಸಲ್ಲಿಸಿದ್ದಾರೆ. ಪ್ರಸ್ತುತ ಕೇರಳ ವಿಧಾನಸಭೆಯಲ್ಲಿ ಬಿಜೆಪಿ ಮತ್ತು ಎನ್‌ಡಿಎ ಮಿತ್ರ ಪಕ್ಷಗಳು ಶಾಸಕರಿಲ್ಲ. ಆದರೆ, ನಾಯಕರು ಈ ಬಾರಿ ತಮ್ಮ ಪಕ್ಷ ಖಾತೆ ತೆರೆಯಲಿದೆ ಎಂಬ ವಿಶ್ವಾಸದಲ್ಲಿದ್ದಾರೆ. ಗೆಲುವಿನ ನಿರೀಕ್ಷೆಯಿರುವ ಅಭ್ಯರ್ಥಿಗಳ ಪೋಸ್ಟರ್‌ಗಳನ್ನೂ ಸಿದ್ಧಪಡಿಸಲಾಗಿದೆ. ಇದನ್ನೂ ಓದಿ: Exclusive | ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್‌ಗೆ ನನ್ನ ಸಾಮರ್ಥ್ಯ ಗೊತ್ತಿದೆ: ಪರಮೇಶ್ವರ್

