ಕೇಂದ್ರ ಸಾಹಿತ್ಯ ಅಕಾಡೆಮಿಯ ಪುಸ್ತಕ ಪ್ರಶಸ್ತಿಗೆ ಡಿ.ಎಸ್.ನಾಗಭೂಷಣರ ʻಗಾಂಧಿ ಕಥನʼ ಕೃತಿ ಆಯ್ಕೆ

Public TV
1 Min Read

ನವದೆಹಲಿ: ಕೇಂದ್ರ ಸಾಹಿತ್ಯ ಅಕಾಡೆಮಿ ವಿವಿಧ ಪ್ರಾಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಘೋಷಿಸಿದೆ. ಕನ್ನಡದ ಪ್ರಮುಖ ಲೇಖಕರಾದ ಡಿ.ಎಸ್.ನಾಗಭೂಷಣ ಅವರ ‘ಗಾಂಧಿ ಕಥನ’ ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.

‘ಬಾಲ ಪುರಸ್ಕಾರ’ಕ್ಕೆ ಬಸುಬೇವಿನಗಿಡದ ಅವರ ‘ ಓಡಿ ಹೋದ ಹುಡುಗ’ ಮಕ್ಕಳ ಕಾದಂಬರಿ ಆಯ್ಕೆಯಾಗಿದೆ. ಅಕಾಡೆಮಿಯು ನೀಡುವ ‘ಯುವ ಪುರಸ್ಕಾರ’ಕ್ಕೆ ಎಚ್.ಲಕ್ಷೀನಾರಾಯಣ ಸ್ವಾಮಿ ಅವರ ‘ತೊಗಲ ಚೀಲದ ಕರ್ಣ ‘ ಮಹಾ ಕಾವ್ಯವು ಆಯ್ಕೆಯಾಗಿದೆ. ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರೂ. ಹಾಗೂ ಸನ್ಮಾನ ಒಳಗೊಂಡಿದ್ದರೆ. ಯುವ ಹಾಗೂ ಬಾಲ ಪುರಸ್ಕಾರಗಳು 50 ಸಾವಿರ ರೂ. ಸನ್ಮಾನ ಒಳಗೊಂಡಿರುತ್ತವೆ. ಇದನ್ನೂ ಓದಿ: ಕುಡಿಯುವ ನೀರು ಸದ್ಬಳಕೆಗೆ ಕ್ರಮ: ಗೋವಿಂದ ಕಾರಜೋಳ

ಯುವ ಸಾಹಿತ್ಯ ಪ್ರಶಸ್ತಿಯ ಜ್ಯೂರಿಗಳಾಗಿ ಕಮಲಾ ಹಂಪನಾ, ಜಗದೀಶ್ ಕೊಪ್ಪ ಹಾಗೂ ವಿಜಯಕುಮಾರಿ ಕೆಲಸ ನಿರ್ವಹಿಸಿದ್ದರೆ, ಬಾಲ ಸಾಹಿತ್ಯ ಪ್ರಶಸ್ತಿಗೆ ಟಿ.ಪಿ.ಅಶೋಕ, ಮಾಲತಿ ಪಟ್ಟಣಶೆಟ್ಟಿ ಹಾಗೂ ಎಸ್.ದಿವಾಕರ ಅವರು ಜ್ಯೂರಿಗಳಾಗಿದ್ದರು. ಪ್ರಮುಖ ಕೃತಿ ಆಯ್ಕೆಯ ಜ್ಯೂರಿಗಳಾಗಿ ಬೊಳುವಾರ್ ಮಹಮ್ಮದ್ ಕುಂಯಿ, ಅಮರೇಶ ನುಗಡೋಣಿ ಹಾಗೂ ಸಬೀಹಾ ಭೂಮಿಗೌಡ ಅವರಿದ್ದರು.‌

ಪುಸ್ತಕ ಆಯ್ಕೆ ಪ್ರಕ್ರಿಯೆಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕರಾದ ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆಯಿತು. ಪ್ರಶಸ್ತಿಗಳನ್ನು ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿ ವಿಜೇತರನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ ಅವರು ಅಭಿನಂದಿಸಿದ್ದಾರೆ. ಇದನ್ನೂ ಓದಿ: ಗಾಂಧಿ ನಿಂದಿಸಿ, ನಾಥೂರಾಮ್ ಗೋಡ್ಸೆ ಹೊಗಳಿದ ಹಿಂದೂ ಧಾರ್ಮಿಕ ಮುಖಂಡ ಅರೆಸ್ಟ್

Share This Article
Leave a Comment

Leave a Reply

Your email address will not be published. Required fields are marked *