ಕರಾಚಿಯ ಶಾಪಿಂಗ್ ಮಾಲ್‌ ಧಗಧಗ – 14 ಮಂದಿ ಸಾವು, 60 ಕ್ಕೂ ಹೆಚ್ಚು ಜನ ನಾಪತ್ತೆ!

1 Min Read

– 33 ಗಂಟೆ ಕಳೆದರೂ ಮುಗಿದಿಲ್ಲ ಕಾರ್ಯಾಚರಣೆ

ಇಸ್ಲಾಮಾಬಾದ್‌: ಸುಮಾರು 1,200 ಮಳಿಗೆಗಳನ್ನು ಹೊಂದಿದ್ದ ಕರಾಚಿಯ ಗುಲ್ ಪ್ಲಾಜಾ (Gul Plaza Mall) ಶಾಪಿಂಗ್‌ ಮಾಲ್‌ನಲ್ಲಿ ಭಾರೀ ಅಗ್ನಿ ಅವಗಢ (Karachi Fire) ಸಂಭವಿಸಿದೆ. ಘಟನೆಯಲ್ಲಿ 14 ಮಂದಿ ಸಾವನ್ನಪ್ಪಿದ್ದು, 60 ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.

ಫುಲ್ಬಾಲ್‌ ಮೈದಾನಕ್ಕಿಂತಲೂ ಹೆಚ್ಚಿನ ವಿಸ್ತೀರ್ಣ ಹೊಂದಿರುವ ಮಾಲ್‌ನ (Mall) ಬಹುತೇಕ ಭಾಗಗಳು ಸುಟ್ಟುಹೋಗಿದೆ. ಹೀಗಾಗಿ ಕಟ್ಟಡ ಯಾವುದೇ ಕ್ಷಣದಲ್ಲೂ ಕುಸಿದು ಬೀಳುವ ಸಾಧ್ಯತೆಗಳಿವೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಸ್ಪೇನ್‌ನಲ್ಲಿ 2 ಹೈಸ್ಪೀಡ್‌ ರೈಲುಗಳ ನಡುವೆ ಡಿಕ್ಕಿ; 21 ಮಂದಿ ಸಾವು, 70ಕ್ಕೂ ಹೆಚ್ಚು ಜನರಿಗೆ ಗಾಯ

ರಕ್ಷಣೆಗೆ ಧಾವಿಸಿರುವ ಅಗ್ನಿಶಾಮಕ ಸಿಬ್ಬಂದಿ ಕಳೆದ 33 ಗಂಟೆಗಳಿಂದ ಕಾರ್ಯಾಚರಣೆ ನಡೆಸುತ್ತಿದೆ. ದುರಂತದಲ್ಲಿ 60ಕ್ಕೂ ಹೆಚ್ಚು ಮಂದಿ ಕಾಣೆಯಾಗಿದ್ದು, ಸುಮಾರು 70 ಜನ ಕಟ್ಟಡದಲ್ಲೇ ಸಿಲುಕಿದ್ದಾರೆ. ಶಾಪಿಂಗ್‌ ಮಾಲ್‌ನ ಮತ್ತೊಂದು ಬದಿಯು ಬೆಂಕಿಯ ಕೆನ್ನಾಲಿಗೆಗೆ ಸುಟ್ಟುಹೋಗಿದ್ದು, ಯಾವುದೇ ಕ್ಷಣದಲ್ಲೂ ಕುಸಿಯುವ ಸಾಧ್ಯತೆಯಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ. ಮಾಲ್‌ ಕಳೆದುಕೊಂಡ ಮಾಲೀಕರು ಕಣ್ಣೀರಿಟ್ಟಿದ್ದಾರೆ, 20 ವರ್ಷಗಳ ಕಠಿಣ ಪರಿಶ್ರಮ ಎಲ್ಲವೂ ವ್ಯರ್ಥವಾಗಿದೆ ಎಂದು ಗೋಳಾಡಿದ್ದಾರೆ.

ಇನ್ನೂ ಪೊಲೀಸ್‌ ಮುಖ್ಯಸ್ಥರಾದ ಜಾವೇದ್‌ ಆಲಂ ಓಧೋ ಮಾತಮಾಡಿ, ಈವರೆಗೆ 14 ಮಂದಿ ಸಾವನ್ನಪ್ಪಿದ್ದಾರೆ, ಗಾಯಗೊಂಡಿದ್ದ 18 ಜನರನ್ನ ಆಸ್ಪತ್ರೆಗೆ ದಾಖಲಿಸಲಾಗಿದೆ. ರಕ್ಷಣಾ ತಂಡಗಳು ಇನ್ನೂ ಕಾರ್ಯಾಚರಣೆ ನಡೆಸುತ್ತಿವೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಗುಲಾಬಿ ಬಣ್ಣಕ್ಕೆ ತಿರುಗಿದ ಬರ್ಮಿಂಗ್‌ಹ್ಯಾಮ್ ಆಕಾಶ – ಈ ಅಚ್ಚರಿ ಹಿಂದಿನ ಕಾರಣವೇನು?

Share This Article