ತಿರುಚಿದ ವಿಡಿಯೋ ಎಂದ ಡಿಜಿಪಿ – ಭೇಟಿಗೆ ಅನುಮತಿ ನೀಡದ ಪರಮೇಶ್ವರ್‌

1 Min Read

ಬೆಂಗಳೂರು: ಇದು ತಿರುಚಿದ ವಿಡಿಯೋ ಎಂದು ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್‌ (Ramachandra Rao) ಹೇಳಿದ್ದಾರೆ.

- Advertisement -

ಮಹಿಳೆಯರ ಜೊತೆಗಿನ ರಾಸಲೀಲೆ ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಅವರು ಇಂದು ಗೃಹ ಸಚಿವ ಪರಮೇಶ್ವರ್‌ (Parameshwar) ಅವರ ಭೇಟಿಗೆ ಆಗಮಿಸಿದರು. ಈ ವೇಳೆ ಅವರು ಮಾಧ್ಯಮಗಳ ಜೊತೆ ಮಾತನಾಡಿ ಇದು ಸುಳ್ಳು ವಿಡಿಯೋ ಎಂದರು.

- Advertisement -

ಇದು ತಿರುಚಿತ ವಿಡಿಯೋ ಆಗಿದ್ದು, ಈ ರೀತಿಯ ಯಾವುದೇ ಘಟನೆ ನಡೆದಿಲ್ಲ. ಇದರ ಬಗ್ಗೆ ವಕೀಲರ ಜೊತೆ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು. ಇದನ್ನೂ ಓದಿ:  ರಾಮಚಂದ್ರ ರಾವ್ ರಾಸಲೀಲೆ ಕೇಸ್‌ – ಗೃಹ ಇಲಾಖೆಗೆ ವರದಿ ನೀಡಲು ಸಿಎಂ ಸೂಚನೆ

- Advertisement -

 

ವಿಡಿಯೋ ಪ್ರಕರಣದ ಬಗ್ಗೆ ಸ್ಪಷ್ಟನೆ ನೀಡಲು ರಾಮಚಂದ್ರ ರಾವ್‌ ಇಂದು ಪರಮೇಶ್ವರ್‌ ಕಚೇರಿಗೆ ಆಗಮಿಸಿದ್ದರು. ಮನೆ ಒಳಗೆ ರಾಮಚಂದ್ರ ರಾವ್‌ ಹೋಗುವ ಮುನ್ನವೇ ಪರಮೇಶ್ವರ್ ಅವರು ಭೇಟಿಗೆ ನಿರಾಕರಿಸಿದರು. ಸಿಬ್ಬಂದಿ ಮೂಲಕ ಭೇಟಿ ಆಗುವುದಿಲ್ಲ ಎಂದು ಪರಮೇಶ್ವರ್ ತಿಳಿಸಿದ್ದರು. ಹೀಗಾಗಿ 5 ನಿಮಿಷದಲ್ಲೇ ರಾಮಚಂದ್ರ ರಾವ್‌ ಪರಮೇಶ್ವರ್‌ ಕಚೇರಿಯಿಂದ ತೆರಳಿದರು. ಇದನ್ನೂ ಓದಿ: ಕಚೇರಿಯಲ್ಲೇ ಡಿಜಿಪಿ ರಾಮಚಂದ್ರ ರಾವ್‌ ರಾಸಲೀಲೆ – ವಿಡಿಯೋ ವೈರಲ್‌

- Advertisement -

Share This Article