ಇಸ್ಲಾಮಾಬಾದ್: ಇರಾನ್-ಅಮೆರಿಕ (Iran-USA) ನಡುವೆ ಘೋಷಣೆಯಾಗಿದ್ದ ಕದನ ವಿರಾಮ(Ceasefire) ಅಂತ್ಯಕ್ಕೆ ಕೌಂಟ್‌ಡೌನ್ ಶುರುವಾಗಿದೆ. ಕದನ ವಿರಾಮ ಕೊನೆಯಾಗಲು ಮೂರು ದಿನ ಮಾತ್ರ ಬಾಕಿ ಉಳಿದಿವೆ. ಮೊದಲ ಸುತ್ತಿನ ಮಾತುಕತೆ ಮುರಿದು ಬಿದ್ದ ಬಳಿಕ ಸೋಮವಾರ ಎರಡನೇ ಸುತ್ತಿನ ಮಾತುಕತೆ ನಡೆಯಲಿದೆ.
2ನೇ ಸುತ್ತಿನ ಮಾತುಕತೆ ನಡೆಯುತ್ತೊ ಇಲ್ವೋ ಎಂಬ ಗೊಂದಲಕ್ಕೆ ಟ್ರಂಪ್ (Donald Trump) ಬ್ರೇಕ್ ಹಾಕಿದ್ದಾರೆ. 2ನೇ ಸುತ್ತಿನ ಮಾತುಕತೆಯೂ ಇಸ್ಲಾಮಾಬಾದ್‌ನಲ್ಲೇ(Islamabad) ನಡೆಯಲಿದೆ. ನಾಳೆ ರಾತ್ರಿ ಅಮೆರಿಕದ ಪ್ರತಿನಿಧಿಗಳು ಇಸ್ಲಾಮಾಬಾದ್‌ಗೆ ತೆರಳಲಿದ್ದಾರೆ ಅಂತ ಟ್ರಂಪ್(Donald Trump) ಟ್ರುಥ್ ಸೋಷಿಯಲ್‌ನಲ್ಲಿ ಮಾಹಿತಿ ನೀಡಿದ್ದಾರೆ.
ಈ ಮಾತುಕತೆಗೆ ಉಪಾಧ್ಯಕ್ಷ ಜೆಡಿ ವ್ಯಾನ್ಸ್ (JD Vance) ಭಾಗಿಯಾಗುತ್ತಿಲ್ಲ. ಇರಾನ್ ಮೇಲೆ ಮತ್ತಷ್ಟು ವ್ಯಾಘ್ರಗೊಂಡಿರುವ ಟ್ರಂಪ್, 2ನೇ ಸುತ್ತಿನ ಮಾತುಕತೆಯಲ್ಲಿ ಒಪ್ಪಂದಕ್ಕೆ ಬರದಿದ್ದರೆ ಇರಾನ್ ಅನ್ನು ಸಂಪೂರ್ಣವಾಗಿ ನಾಶಪಡಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ. ಇದನ್ನೂ ಓದಿ: ಅಮೆರಿಕದ ವಿರುದ್ಧ ಮುನೀರ್ ಡಬಲ್‌ಗೇಮ್ – ಟ್ರಂಪ್‌ಗೆ ಗುಪ್ತಚರ ಸಂಸ್ಥೆಯಿಂದ ಎಚ್ಚರಿಕೆ


