ಟೆಹ್ರಾನ್: ಹಾರ್ಮುಜ್ ಜಲಸಂಧಿಯಲ್ಲಿ (Strait of Hormuz) ಹಾದುಹೋಗುತ್ತಿದ್ದ 2 ಭಾರತೀಯ ಟ್ಯಾಂಕರ್‌ಗಳ (Indian Tanker) ಮೇಲೆ ಗುಂಡಿನ ದಾಳಿ ನಡೆದ ಬೆನ್ನಲ್ಲೇ ಭಾರತವು ದೇಶದಲ್ಲಿರುವ ಇರಾನ್ ರಾಯಭಾರಿಗೆ ಸಮನ್ಸ್ ನೀಡಿದೆ.
#WATCH | Delhi: Ambassador of Iran to India, Dr. Mohammad Fathali leaves from the Ministry of External Affairs (MEA). More details awaited. pic.twitter.com/01AlP4KBlR
— ANI (@ANI) April 18, 2026
ಹಾರ್ಮುಜ್ ಜಲಸಂಧಿ ಮೂಲಕ ಹಾದುಹೋಗುತ್ತಿದ್ದ ವೇಳೆ ಕ್ವೆಶ್ಮ್ ಮತ್ತು ಲಾರಕ್ ದ್ವೀಪಗಳ ನಡುವಿನ ಸಮುದ್ರದಲ್ಲಿ ಗುಂಡಿನ ದಾಳಿ (Gunfire) ನಡೆದಿದೆ. ದಾಳಿ ಬಳಿಕ ತೈಲ ಟ್ಯಾಂಕರ್‌ಗಳು ಅಲ್ಲಿಂದ ವಾಪಸ್ ಆಗಿವೆ ಎಂದು ವರದಿಯಾಗಿದೆ. ಇದನ್ನೂ ಓದಿ: ಭಾರತದ ಎರಡು ತೈಲ ಟ್ಯಾಂಕರ್ ಮೇಲೆ ಇರಾನ್ ಗುಂಡಿನ ದಾಳಿ
ವರದಿಗಳ ಪ್ರಕಾರ, ಹಾರ್ಮುಜ್ ಜಲಸಂಧಿಯಲ್ಲಿ ವಿಶ್ವದ ಎಲ್ಲಾ ರಾಷ್ಟ್ರಗಳ ಹಡಗುಗಳ ಸಂಚಾರಕ್ಕೆ ಮುಕ್ತ ಅವಕಾಶ ನೀಡಿದ ಬಳಿಕ ಸುಮಾರು 9 ಭಾರತೀಯ ಹಡಗುಗಳು ಜಲಸಂಧಿ ಮೂಲಕ ಹಾದುಹೋಗಿವೆ.
ಇಂದು ಕೂಡ ಜಲಸಂಧಿ ದಾಟುತ್ತಿದ್ದ ಹಡಗುಗಳ ಮೇಲೆ ಯಾವುದೇ ಸೂಚನೆ ನೀಡದೇ ಗುಂಡಿನ ದಾಳಿ ನಡೆದಿದೆ. ಈ ಘಟನೆಗೆ ಸಂಬಂಧಿಸಿದಂತೆ ಭಾರತವು ಇರಾನ್ ರಾಯಭಾರಿ ಮೊಹಮ್ಮದ್ ಫಥಾಲಿ ಅವರಿಗೆ ಸಮನ್ಸ್ ನೀಡಿದೆ. ಜೊತೆಗೆ ರಾಯಭಾರ ಕಚೇರಿಯಲ್ಲಿ ಔಪಚಾರಿಕ ಪ್ರತಿಭಟನೆ ದಾಖಲಿಸಿದೆ. ಇದನ್ನೂ ಓದಿ: ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್ – ಧನ್ಯವಾದ ಹೇಳಿದ ಟ್ರಂಪ್
ಸರ್ಕಾರಿ ಮೂಲಗಳ ಪ್ರಕಾರ, ಹಾರ್ಮುಜ್‌ನಲ್ಲಿ ಭಾರತೀಯ ಒಡೆತನದ ಹಡಗಿನ ಮೇಲೆ ದಾಳಿ ಮಾಡಲಾಗಿದೆ. ಅದೃಷ್ಟವಶಾತ್, ದಾಳಿಯಲ್ಲಿ ಯಾವುದೇ ಸಿಬ್ಬಂದಿ ಗಾಯಗೊಂಡಿಲ್ಲ, ಸಾವು-ನೋವು ಸಂಭವಿಸಿಲ್ಲ. ಜೊತೆಗೆ ಹಡಗಿಗೆ ಯಾವುದೇ ಹಾನಿಯಾಗಿಲ್ಲ. ಶಿಪ್ಪಿಂಗ್ ಮಹಾನಿರ್ದೇಶಕರು ಪರಿಸ್ಥಿತಿಯನ್ನ ಮೇಲ್ವಿಚಾರಣೆ ಮಾಡುತ್ತಿದ್ದಾರೆ. ಹಡಗಿನ ಸಿಬ್ಬಂದಿಯ ಸುರಕ್ಷತೆಯನ್ನೂ ಖಚಿತಪಡಿಸಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಭಾರತೀಯ ಧ್ವಜ ಹೊಂದಿರುವ ಇತರ ಹಡಗುಗಳ ಸುರಕ್ಷತೆಗೆ ವಿಶೇಷ ಒತ್ತು ನೀಡಲಾಗುತ್ತಿದೆ ಎಂದು ತಿಳಿಸಿವೆ.
ಈ ದಾಳಿ ನಿರ್ದಿಷ್ಟವಾಗಿ ಗುರಿಯಾಗಿಸಿ ನಡೆಸಿಲ್ಲ, ಆಕಸ್ಮಿಕವಾಗಿ ಆಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ವರದಿಗಳು ಹಡಗು ಕಂಪನಿಗಳು ಮತ್ತು ವಿಮಾದಾರರಲ್ಲಿ ತೀವ್ರ ಕಳವಳ ಹೆಚ್ಚಿಸಿವೆ. ಇದನ್ನೂ ಓದಿ: ಪತ್ನಿಗೆ ಗುಂಡಿಕ್ಕಿ ಕೊಂದು, ತಾನೂ ಆತ್ಮಹತ್ಯೆ ಮಾಡಿಕೊಂಡ ವರ್ಜೀನಿಯಾ ಮಾಜಿ ಗವರ್ನರ್
ಇನ್ನೂ ಒಮಾನ್ ಕರಾವಳಿಯಿಂದ ಸುಮಾರು 20 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಘಟನೆ ನಡೆದಿರುವುದಾಗಿ ಯುಎಸ್ ಮಾಧ್ಯಮ ವರದಿ ಮಾಡಿದೆ. ಇರಾನ್‌ನ ಐಜಿಸಿಆರ್‌ನ ಎರಡು ಗನ್‌ಬೋಟ್‌ಗಳು ಹಡಗಿನ ಬಳಿಗೆ ಬಂದು ಗುಂಡು ಹಾರಿಸಿವೆ ಎಂದು ಟ್ಯಾಂಕರ್‌ನ ಕ್ಯಾಪ್ಟನ್ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ತಿಳಿಸಿದ್ದಾರೆ.



