ಪತ್ನಿಗೆ ಹಲವರ ಜೊತೆ ಅನೈತಿಕ ಸಂಬಂಧ, ವಿಡಿಯೋ ವೈರಲ್‌ – 19 ಪುಟ ಡೆತ್‌ನೋಟ್‌ ಬರೆದಿಟ್ಟು ಟೆಕ್ಕಿ ಆತ್ಮಹತ್ಯೆ

1 Min Read

– ಮಹಿಳೆ, ಪ್ರಿಯಕರ ಅರೆಸ್ಟ್

ಹೈದರಾಬಾದ್‌: ಸಾಫ್ಟ್‌ವೇರ್ ಎಂಜಿನಿಯರ್ (Techie) ಒಬ್ಬರು ತನ್ನ ಪತ್ನಿ (Wife) ಮೂವರು ಪುರುಷರೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಆರೋಪಿಸಿ ಸರೋವರಕ್ಕೆ ಹಾರಿ ಆತ್ಮಹತ್ಯೆಗೆ ಶರಣಾದ ಘಟನೆ ಹೈದರಾಬಾದ್‌ನಲ್ಲಿ (Hyderabad) ನಡೆದಿದೆ. ಆತ್ಮಹತ್ಯೆಗೂ ಮುನ್ನ ಅವರು 19 ಪುಟಗಳ ಡೆತ್‌ ನೋಟ್‌ ಬರೆದಿಟ್ಟಿದ್ದಾರೆ.

ಆತ್ಮಹತ್ಯೆಗೆ ಶರಣಾದ ಟೆಕ್ಕಿಯನ್ನು ಸೀತಾರಾಮ್ (36) ಎಂದು ಗುರುತಿಸಲಾಗಿದೆ. ಅವರು ಡೆತ್‌ನೋಟ್‌ನಲ್ಲಿ ಪತ್ನಿ ರೇಣುಕಾಗೆ (30) ಮೂವರು ಪುರುಷರೊಂದಿಗೆ ಸಂಬಂಧವಿದೆ ಎಂದು ಆರೋಪಿಸಿದ್ದಾರೆ. ಕಳೆದ ಒಂದೂವರೆ ವರ್ಷಗಳಿಂದ ಮೂವರು ಪುರುಷರೊಂದಿಗೆ ಸಂಬಂಧ ಹೊಂದಿದ್ದಾಳೆ ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾದ ಗಂಡನಿಗೆ ಸುಪಾರಿ ಕೊಟ್ಟು ಹತ್ಯೆ – 7 ವರ್ಷಗಳ ಬಳಿಕ ಬಯಲಾಯ್ತು ಕೊಲೆ ರಹಸ್ಯ

ರಮಣ ಎಂಬಾತ ಪತ್ನಿ ರೇಣುಕಾಳ ಜೊತೆಗಿದ್ದ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದ. ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ನೋಡಿದ ನಂತರ ಈ ವಿಚಾರ ನನ್ನ ಅರಿವಿಗೆ ಬಂತು. ಇದರಿಂದ ಮನಸ್ಸಿಗೆ ತುಂಬಾ ನೋವಾಗಿದೆ. ವ್ಯಕ್ತಿಗಳಲ್ಲಿ ಒಬ್ಬರು ನಾನು ಇಲ್ಲದಿದ್ದಾಗ ನನ್ನ ಮನೆಗೆ ಹಲವು ಬಾರಿ ಭೇಟಿ ನೀಡಿದ್ದರು ಎಂದು ಬರೆದಿದ್ದಾರೆ.

ನಾನು ನನ್ನ ಹೆಂಡತಿಯನ್ನು ಚೆನ್ನಾಗಿ ನೋಡಿಕೊಂಡಿದ್ದೇನೆ ಆದರೆ ಅವಳು ಹೀಗೆ ನಡೆದುಕೊಂಡಿದ್ದರಿಂದ ನನಗೆ ತೀವ್ರ ನೋವಾಗಿದೆ ಎಂದು ಬರೆದಿಟ್ಟು ಹುಸೇನ್ ಸಾಗರ್ ಸರೋವರಕ್ಕೆ ಹಾರಿ ಸಾವನ್ನಪ್ಪಿದ್ದಾರೆ.

ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ರೇಣುಕಾ ಮತ್ತು ಶಂಶಾಬಾದ್‌ನ ರೆಸ್ಟೋರೆಂಟ್ ನಿರ್ವಾಹಕ ಎಂ. ರಮಣ ರೆಡ್ಡಿಯನ್ನು (35) ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಅನೈತಿಕ ಸಂಬಂಧಕ್ಕೆ ಅಡ್ಡಿ – ಪ್ರೇಯಸಿಯ ಪತಿಯ ಹತ್ಯೆ

Share This Article