ಚಿಕ್ಕಬಳ್ಳಾಪುರ: ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋದ ತಾಯಿ ಸಾವನ್ನಪ್ಪಿರುವ ದಾರುಣ ಘಟನೆ ಚಿಂತಾಮಣಿ ತಾಲೂಕಿನ ಮುರಗಮಲ್ಲ ಕೆರೆಯಲ್ಲಿ (Murugamalla Dargah Lake) ನಡೆದಿದೆ.
ಬೆಂಗಳೂರಿನ (Bengaluru) ಬನಶಂಕರಿ ಮೂಲದ ತಬುಸುಮ್ ಖಾನ್ (24) ಮೃತ ದುರ್ದೈವಿ. ಮುರುಗಮಲ್ಲಾದ ದರ್ಗಾಗೆ ಬಂದಿದ್ದ ಕುಟುಂಬಸ್ಥರು ಕೆರೆ ಬಳಿ ನೀರಿನಲ್ಲಿ ಆಟವಾಡುತ್ತಿದ್ದರು. ತಾಯಿ ಬಟ್ಟೆಯನ್ನು ತರಲು ಹೋದಾಗ ಮಕ್ಕಳು ಕೆರೆಗೆ ಹೋಗಿದ್ದು ಮುಳುಗಿದ್ದಾರೆ. ಇದನ್ನ ಕಂಡ ತಾಯಿ ಕೂಡಲೇ ಕೆರೆಗೆ ದುಮುಕಿದ್ದಾರೆ. ಈಜು ಬರದ ಕಾರಣ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: ಕೆರೆಯಲ್ಲಿ ಮುಳುಗಿ ಮಾವ-ಅಳಿಯ ಸಾವು
ಅದೃಷ್ಟವಶಾತ್ ಅಲ್ಲೇ ಇದ್ದ ತಂದೆ ಹಾಗೂ ಸಂಬಂಧಿ ಯುವಕರು ಮಕ್ಕಳನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಮಕ್ಕಳನ್ನ ರಕ್ಷಣೆ ಮಾಡಿದರೂ ಪತ್ನಿಯನ್ನು ಉಳಿಸಿಕೊಳ್ಳಲು ಆಗಲಿಲ್ಲ ಎಂದು ಗಂಡ ಕಣ್ಣೀರಿಟ್ಟಿದ್ದಾನೆ. ಇದನ್ನೂ ಓದಿ: ನದಿಯಲ್ಲಿ ಸ್ನಾನ ಮಾಡಲು ಹೋಗಿ ನೀರಿನಲ್ಲಿ ಮುಳುಗಿ ವ್ಯಕ್ತಿ ಸಾವು

