ಬೆಂಗಳೂರು: ತರಬೇತಿ ನಿರತ ಗಗನಸಖಿಯೊಬ್ಬರ(Air Hostess) ಮೇಲೆ ರಸ್ತೆಯಲ್ಲೇ ಅನುಚಿತವಾಗಿ ವರ್ತಿಸಿ, ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಬಾಗಲೂರು ಪೊಲೀಸರು(Bagaluru Police) ಬಂಧಿಸಿದ್ದಾರೆ.
ಬಂಧಿತನನ್ನು ಚಂದ್ರಶೇಖರ್ ಎಂದು ಗುರುತಿಸಲಾಗಿದೆ. ಬಂಧಿತ ಚಂದ್ರಶೇಖರ್ ಮತ್ತು ಸಂತ್ರಸ್ತ ಯುವತಿ ಇಬ್ಬರೂ ಪರಿಚಯಸ್ಥರಾಗಿದ್ದು, ಒಂದೇ ಏರಿಯಾದಲ್ಲಿ ವಾಸವಾಗಿದ್ದರು. ಆರಂಭದಲ್ಲಿ ಇಬ್ಬರ ನಡುವೆ ಸ್ನೇಹವಿತ್ತು. ಆದರೆ ಇತ್ತೀಚೆಗೆ ಆರೋಪಿ ಚಂದ್ರಶೇಖರ್ ಯುವತಿಯನ್ನು ಪ್ರೀತಿಸುವಂತೆ ಪೀಡಿಸಲು ಆರಂಭಿಸಿದ್ದ ಎನ್ನಲಾಗಿದೆ. ಯುವಕನ ವರ್ತನೆಯಿಂದ ಬೇಸತ್ತಿದ್ದ ಯುವತಿ ಆತನನ್ನು ಸಂಪೂರ್ಣವಾಗಿ ದೂರ ಮಾಡಲು ಮುಂದಾಗಿದ್ದಳು. ಇದನ್ನೂ ಓದಿ: ಬಂಗಾಳದಲ್ಲಿ ಬಿಜೆಪಿಗೆ ಗೆಲುವಿನ ಮುನ್ಸೂಚನೆ – ದೊಡ್ಡ ಚಿಂತೆಯ ವಿಷಯ ಎಂದ ಬಾಂಗ್ಲಾ ಸಂಸದ
ಇಷ್ಟಕ್ಕೇ ನಿಲ್ಲದ ಈತ, ಇತ್ತೀಚೆಗೆ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಸಾರ್ವಜನಿಕವಾಗಿಯೇ ಬ್ಯಾಡ್ ಟಚ್ (ಅನುಚಿತ ಸ್ಪರ್ಶ) ಮಾಡಿ ವಿಕೃತಿ ಮೆರೆದಿದ್ದ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಕೆರೆಯಲ್ಲಿ ಮುಳುಗುತ್ತಿದ್ದ ಮಕ್ಕಳನ್ನು ರಕ್ಷಿಸಲು ಹೋಗಿ ತಾಯಿ ಸಾವು

