ಬೆಂಗಳೂರು: ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಗೃಹಿಣಿ (Housewife) ಶವ ಪತ್ತೆಯಾಗಿರುವ ಘಟನೆ ನೆಲಮಂಗಲ (Nelamangala) ತಾಲೂಕಿನ ಮೋಟಗಾನಹಳ್ಳಿ (Motaganahalli) ಗ್ರಾಮದಲ್ಲಿ ನಡೆದಿದೆ.
ಜೀವಿತಾ (35) ಮೃತ ಗೃಹಿಣಿ. ಮನೆಯ ಕೋಣೆಯ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಜೀವಿತಾ ಶವ ಪತ್ತೆಯಾಗಿದೆ. ಆರು ವರ್ಷಗಳ ಹಿಂದೆ ವಿನಯ್ ಕುಮಾರ್ ಎಂಬವರ ಜೊತೆಗೆ ಜೀವಿತಾ ಮದುವೆಯಾಗಿದ್ದರು. ವಿನಯ್ ಕುಮಾರ್‌ಗೆ ಮೊದಲ ಹೆಂಡತಿ ಇಲ್ಲದ ಕಾರಣ ಕುಟುಂಬಸ್ಥರು ಎರಡನೇ ಮದುವೆ ಮಾಡಿದ್ದರು. ಇಬ್ಬರ ಸಂಬಂಧಕ್ಕೆ ಒಂದೂವರೆ ವರ್ಷದ ಒಂದು ಮಗು ಇದೆ. ಇದನ್ನೂ ಓದಿ: ಪಾಕ್ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ ಮೋದಿಗೆ ಟ್ರಂಪ್ ಕರೆ – 40 ನಿಮಿಷ ಮಾತುಕತೆ
ಜೀವಿತಾ ಕುಟುಂಬಸ್ಥರು ಗಂಡನ ಕಿರುಕುಳ ಆರೋಪ ಹೊರಿಸಿದ್ದಾರೆ. ಪ್ರತಿನಿತ್ಯ ಇಲ್ಲಸಲ್ಲದ ಆರೋಪ ಹೊರಿಸಿ ಇಬ್ಬರ ನಡುವೆ ಗಲಾಟೆ ನಡೆಯುತ್ತಿತ್ತು ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸದ್ಯ ಜೀವಿತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ನೆಲಮಂಗಲ ಶವಾಗಾರಕ್ಕೆ ರವಾನಿಸಲಾಗಿದೆ. ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಇದನ್ನೂ ಓದಿ: ಪಶುವೈದ್ಯೆ ಕೊಂದಿದ್ದ ನೀರಾನೆ ಬಹು ಅಂಗಾಂಗ ಸೋಂಕಿನಿಂದ ಸಾವು

