ಯಾದಗಿರಿ | ಅಪಾಯ ಮಟ್ಟ ಮೀರಿದ ಯರಗೋಳ ಕೆರೆ – ಸೇತುವೆ ದಾಟುತ್ತಿದ್ದ ಹಸು ನೀರುಪಾಲು

Public TV
1 Min Read

ಯಾದಗಿರಿ: ಧಾರಾಕಾರ ಮಳೆಯಾದ ಹಿನ್ನೆಲೆ ಜಿಲ್ಲೆಯ ಯರಗೋಳ ತಾಲೂಕಿನಲ್ಲಿರುವ ಕೆರೆಯೊಂದು ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ಈ ವೇಳೆ ಸೇತುವೆ ದಾಟುತ್ತಿದ್ದ ಹಸುವೊಂದು ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋದ ಘಟನೆ ಯರಗೋಳ ತಾಲೂಕಿನಲ್ಲಿ ನಡೆದಿದೆ.

ಯರಗೋಳ ತಾಲೂಕಿನಲ್ಲಿರುವ ಕೆರೆಯೊಂದು ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಈ ವೇಳೆ ಸೇತುವೆ ದಾಟುತ್ತಿದ್ದ ಹಸುವೊಂದು ಕಾಲು ಜಾರಿ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದೆ. ಈಜಿಕೊಂಡು ದಡ ಸೇರಲು ಹರಸಾಹಸಪಡುತ್ತಿದ್ದ ಹಸುವನ್ನು ನೋಡಿದ ಗ್ರಾಮಸ್ಥರು ರಕ್ಷಣೆ ಮಾಡಿದ್ದಾರೆ.ಇದನ್ನೂ ಓದಿ: ತಾಂತ್ರಿಕ ದೋಷ ಬಗೆಹರಿಸಲು ಇಂಜಿನಿಯರ್‌ಗಳ ಜೊತೆ‌ 50 ನಿಮಿಷ ಚರ್ಚಿಸಿದ ಪೈಲಟ್ – ಆದ್ರೂ ನೆಲಕ್ಕಪ್ಪಳಿಸಿದ ಫೈಟರ್‌ ಜೆಟ್‌!

ಇನ್ನೂ ಮಳೆ ಪ್ರಮಾಣ ಹೆಚ್ಚಾದ ಹಿನ್ನೆಲೆ ಯರಗೋಳ ಗ್ರಾಮದಲ್ಲಿನ 10ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ.

Share This Article