ಹರಿತವಾದ ಕಥೆಯ ಸುಳಿವಿನೊಂದಿಗೆ ಬಂತು ‘ಹರಿಕಥೆ ಅಲ್ಲ ಗಿರಿಕಥೆ’ ಟ್ರೈಲರ್!

Public TV
2 Min Read

ರಿಷಬ್ ಶೆಟ್ಟಿ, ನಾಯಕರಾಗಿ ನಟಿಸಿರುವ ‘ಹರಿಕಥೆ ಅಲ್ಲ ಗಿರಿಕಥೆ’ ಚಿತ್ರ ಈಗಾಗಲೇ ಹಲವಾರು ದಿಕ್ಕುಗಳಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ. ಸಂದೇಶ್ ಪ್ರೊಡಕ್ಷನ್ಸ್ ಬ್ಯಾನರ್‌ನಡಿಯಲ್ಲಿ ಸಂದೇಶ ಅವರು ನಿರ್ಮಾಣ ಮಾಡಿರುವ ಈ ಸಿನಿಮಾ ಜನರನ್ನು ಸೆಳೆದಿರುವುದೇ ತನ್ನೊಳಗೆ ಬಚ್ಚಿಟ್ಟುಕೊಂಡಿರುವ ಭಿನ್ನವಾದ ಕಥೆಯ ಸುಳಿವಿನಿಂದ. ಟ್ರೈಲರ್‌ನಲ್ಲಿ ಒಂದಷ್ಟು ವಿಶೇಷತೆಗಳು ಕಾಣಿಸಬಹುದೆಂಬ ಕಾರಣದಿಂದ ಅದರತ್ತ ಜನ ಆಸೆಯಿಟ್ಟು ಕಾದು ಕೂತಿದ್ದರು. ಕಡೆಗೂ ಇದೀಗ ಹರಿತವಾದ, ವಿಶೇಷವಾದ ಕಥೆಯ ಸುಳಿವಿನೊಂದಿಗೆ ‘ಹರಿಕಥೆ ಅಲ್ಲ ಗಿರಿಕಥೆ’ಯ ಟ್ರೈಲರ್ ಬಿಡುಗಡೆಗೊಂಡಿದೆ.

ಇದು ಮೂರು ‘ಗಿರಿ’ಗಳ ಸುತ್ತ ನಡೆಯೋ ಕಥಾನಕ ಎಂಬಂಥಾ ಸಣ್ಣ ಸುಳಿವನ್ನಷ್ಟೇ ಚಿತ್ರತಂಡ ಬಿಟ್ಟುಕೊಟ್ಟಿತ್ತು. ಹಾಗಾದರೆ ಈ ಗಿರಿ ಅಂದರೇನೆಂಬ ಹುಳವನ್ನು ಪ್ರತಿಯೊಬ್ಬರೂ ತಲೆಗೆ ಬಿಟ್ಟುಕೊಂಡಿದ್ದರು. ಇದೀಗ ಅದಕ್ಕೆ ಉತ್ತರ ಸಿಕ್ಕಿದೆ. ಈಗ ರಿಲೀಸ್ ಆಗಿರುವ ಟ್ರೈಲರ್ ಎಲ್ಲ ವಿಧದಲ್ಲಿಯೂ ನಿರೀಕ್ಷೆ ಮೂಡಿಸಿದೆ. ಇದನ್ನೂ ಓದಿ: ಯೂಟ್ಯೂಬ್ ನೋಡಿ ಕಳ್ಳತನ ಮಾಡಿದ ಆರೋಪಿ ಪೊಲೀಸರಿಗೆ ಸಿಕ್ಕಿಬಿದ್ದ 

ಇಲ್ಲಿ ರಿಷಬ್‌ ಶೆಟ್ಟಿ ನಿರ್ದೇಶಕನಾಗೋ ಕನಸು ಹೊತ್ತು ತಿರುಗಾಡುವ ಡೈರೆಕ್ಟರ್ ಗಿರಿ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆಂಬ ಸುಳಿವು ಸಿಕ್ಕಿದೆ. ಅದರ ಜೊತೆ ಜೊತೆಗೇ ಪ್ರಮೋದ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ ಮುಂತಾದವರ ಪಾತ್ರಗಳು ಕೂಡಾ ಸಣ್ಣಮಟ್ಟದಲ್ಲಿ ಸುಳಿವು ಬಿಟ್ಟುಕೊಟ್ಟಿವೆ. ಇದುವರೆಗೆ ಜಾಹೀರಾಗಿರುವ ವಿಚಾರಗಳಾಚೆಗೆ ಇಲ್ಲಿನ ಕಥೆ ಹಬ್ಬಿಕೊಂಡಿದೆ ಎಂಬ ಸ್ಪಷ್ಟ ನಂಬಿಕೆ ಮೂಡಿಸುವಲ್ಲಿಯೂ ಈ ಟ್ರೈಲರ್ ಯಶಸ್ಸು ಕಂಡಿದೆ.

ಇದುವರೆಗೂ ಸಿನಿಮಾ ಕನಸು ಹೊತ್ತು ಗಾಂಧಿನಗರದಲ್ಲಿ ಸುಳಿದಾಡುವವರ ಕಥೆಗಳು ಸಾಕಷ್ಟು ಕಾಣಿಸಿಕೊಂಡಿವೆ. ಆದರೆ ‘ಹರಿಕಥೆ ಅಲ್ಲ ಗಿರಿಕಥೆ’ಯಲ್ಲಿರೋದು ಡಿಫರೆಂಟಾದ ಕಥೆ ಎಂಬುದನ್ನು ನಿರ್ದೇಶಕದ್ವಯರು ನಿಖರವಾಗಿಯೇ ನಿರೂಪಿಸಿದ್ದಾರೆ. ಅದು ಈ ಟ್ರೈಲರ್‌ನ ನಿಜವಾದ ಪ್ಲಸ್ ಪಾಯಿಂಟ್.

ಈ ಮೂಲಕ ದೊಡ್ಡ ಚಾಲೆಂಜೊಂದರಲ್ಲಿ ಚಿತ್ರತಂಡ ಗೆದ್ದಂತಾಗಿದೆ. ಈ ಟ್ರೈಲರ್‍ಗೆ ಸಿಗುತ್ತಿರುವ ವ್ಯಾಪಕ ಮೆಚ್ಚುಗೆ ಮತ್ತು ಬೆಂಬಲಗಳೇ ಸಿನಿಮಾದ ಗೆಲುವನ್ನು ನಿಕ್ಕಿಯಾಗಿಸಿದೆ. ಇದು ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ. ನಿಖರವಾಗಿ ಹೇಳಬೇಕೆಂದರೆ ‘ಹರಿಕಥೆ ಅಲ್ಲ ಗಿರಿಕಥೆ’ಯ ಟ್ರೈಲರ್ ನಿಜಕ್ಕೂ ಪರಿಣಾಮಕಾರಿಯಾಗಿದೆ.

ಸಂದೇಶ್ ನಾಗರಾಜ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಚಿತ್ರ ‘ಹರಿಕಥೆ ಅಲ್ಲ ಗಿರಿಕಥೆ’. ಕರಣ್ ಅನಂತ್ ಮತ್ತು ಅನಿರುದ್ಧ ಮಹೇಶ್ ಈ ಸಿನಿಮಾದ ನಿರ್ದೇಶನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಇದು ಓರ್ವ ನಟನಾಗಿ ರಿಷಬ್ ಶೆಟ್ಟಿ ವೃತ್ತಿ ಬದುಕಿನ ಮಹತ್ವದ ಚಿತ್ರವಾಗೋದರಲ್ಲಿ ಯಾವ ಸಂದೇಹವೂ ಇಲ್ಲ. ಇದನ್ನೂ ಓದಿ:  ಕುವೆಂಪು, ಬಸವಣ್ಣಗೆ ಕುತ್ತು ಬಂದ ಮೇಲೆ ನಾವಿದ್ದು ಏನು ಮಾಡೋದು: ಹಂಸಲೇಖ 

ಈ ಚಿತ್ರ ಕೇವಲ ಕಥೆಯ ದಿಕ್ಕಿನಿಂದ ಮಾತ್ರವಲ್ಲದೇ ತಾಂತ್ರಿಕವಾಗಿಯೂ ಶ್ರೀಮಂತವಾಗಿದೆ. ಅದರ ಲಕ್ಷಣಗಳು ಈ ಟ್ರೈಲರ್‌ನಲ್ಲೂ ಕಾಣಿಸಿವೆ. ಇನ್ನುಳಿದಂತೆ ವಾಸುಕಿ ವೈಭವ್ ಸಂಗೀತ ನಿರ್ದೇಶನ ಈ ಚಿತ್ರಕ್ಕಿದೆ. ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ, ರಚನಾ ಇಂದರ್, ತಪಸ್ವಿನಿ, ಹೊನ್ನವಳ್ಳಿ ಕೃಷ್ಣ ಮುಂತಾದವರ ತಾರಾಗಣದಿಂದ ‘ಹರಿಕಥೆ ಅಲ್ಲ ಗಿರಿಕಥೆ’ ಮೈಕೈ ತುಂಬಿಕೊಂಡಿದೆ. ಈ ಸಿನಿಮಾ ಜೂನ್‌ 23ಕ್ಕೆ ರಿಲೀಸ್‌ ಆಗುತ್ತಿದ್ದು, ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *