ಬೆಂಗಳೂರು: ರಾಜ್ಯದಲ್ಲಿ ದ್ವಿಭಾಷಾ ಸೂತ್ರ ಜಾರಿ ಮಾಡೋ ಮೊದಲು ಸರ್ಕಾರ ತಜ್ಞರ ಸಮಿತಿ ರಚನೆ ಮಾಡಬೇಕು ಎಂದು ಎಬಿವಿಪಿ (ABVP) ಸರ್ಕಾರವನ್ನ ಆಗ್ರಹಿಸಿದೆ.
ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಎಬಿವಿಪಿ ಪ್ರಾಂತ ಕಾರ್ಯದರ್ಶಿ ಗೋಪಿ ರಂಗಸ್ವಾಮಿ, ದ್ವಿಭಾಷಾ ಭಾಷಾ ಸೂತ್ರ ಅನುಷ್ಠಾನ ಮಾಡಲು ಹೊರಟಿರುವ ಸರ್ಕಾರದ ನಿರ್ಧಾರವನ್ನು ನಾವು ವಿರೋಧ ಮಾಡ್ತೀವಿ. ದ್ವಿಭಾಷಾ ಸೂತ್ರ ತರುವ ಬಗ್ಗೆ ಸಾರ್ವಜನಿಕರ ಅಭಿಪ್ರಾಯ ಪಡೆಯಬೇಕಿತ್ತು. ಯಾವುದೇ ಚರ್ಚೆ ಮಾಡದೇ ನಿರ್ಧಾರ ಮಾಡಿದೆ. ನಿನ್ನೆ ತೃತೀಯ ಭಾಷೆ ಪರೀಕ್ಷೆ ನಡೆದಿದೆ. ಸರ್ಕಾರದ ನಿರ್ಧಾರದಿಂದ ಬೇಕಾಬಿಟ್ಟಿ ಎಕ್ಸಾಂ ಬರೆದಿದ್ದಾರೆ. ದ್ವಿಭಾಷಾ ಸೂತ್ರ ತರಬೇಕಾದ್ರೆ ತಜ್ಞರ ಅಭಿಪ್ರಾಯ ಪಡೆದು ಮಾಡಬೇಕು. ತ್ರಿಭಾಷಾ ಸೂತ್ರ ಒಲೈಕೆಗಾಗಿ ಬಂದಿದ್ದಲ್ಲ. ಏಕಾಏಕಿ ದ್ವಿಭಾಷಾ ನೀತಿ ತರೋದು ಸರಿಯಲ್ಲ ಎಂದು ಕಿಡಿಕಾರಿದರು. ಇದನ್ನೂ ಓದಿ: West Bengal SIR | 60 ಲಕ್ಷ ಆಕ್ಷೇಪಣೆಗಳಲ್ಲಿ 47 ಲಕ್ಷ ಅರ್ಜಿ ಇತ್ಯರ್ಥ – ಸುಪ್ರೀಂಗೆ ಹೈಕೋರ್ಟ್ ವರದಿ
ದ್ವಿಭಾಷಾ ನೀತಿ ಅಧ್ಯಯನಕ್ಕೆ ಮೊದಲು ಸರ್ಕಾರ ಸಮಿತಿ ರಚನೆ ಮಾಡಬೇಕು. ಸಮಿತಿ ವರದಿ ಪಡೆದು ಸರ್ಕಾರ ಮುಂದಿನ ಕ್ರಮ ತೆಗೆದುಕೊಳ್ಳಬೇಕು. ಕನ್ನಡಕ್ಕೆ ಮೊದಲ ಆದ್ಯತೆ ಕೊಡಬೇಕು. ಇದಕ್ಕೆ ಎಬಿವಿಪಿ ವಿರೋಧ ಮಾಡಲ್ಲ. ಹಿಂದಿ ತೆಗೆದು ಕನ್ನಡ ಉಳಿಸ್ತೀವಿ ಅಂತ ಹೋದ್ರೆ ವಿದ್ಯಾರ್ಥಿಗಳಿಗೆ ಅನ್ಯಾಯ ಆಗುತ್ತದೆ. ಹೀಗಾಗಿ ಸರ್ಕಾರ ಅಧ್ಯಯನ ಮಾಡಿ, ದ್ವಿಭಾಷಾ ಸೂತ್ರದ ಬಗ್ಗೆ ನಿರ್ಧಾರ ಆಗಬೇಕು ಎಂದು ಒತ್ತಾಯಿಸಿದರು.
ದ್ವಿಭಾಷಾ ಸೂತ್ರ ಏಕಾಏಕಿ ಜಾರಿ ಮಾಡಬಾರದು. ಇದಕ್ಕಾಗಿ ಒಂದು ಸಮಿತಿ ರಚನೆ ಮಾಡಬೇಕು. ವಿದ್ಯಾರ್ಥಿಗಳು, ತಜ್ಞರು, ಪೋಷಕರ ಅಭಿಪ್ರಾಯ ಪಡೆಯಬೇಕು. ಸಮಿತಿಯ ವರದಿ ಅನ್ವಯ ದ್ವಿಭಾಷಾ ಸೂತ್ರ ಜಾರಿ ಮಾಡಲಿ ಎಂದರು.ಇದನ್ನೂ ಓದಿ: ಅಕ್ರಮಗಳಿಗೆ ಬ್ರೇಕ್ ಹಾಕದೇ ಕರ್ತವ್ಯ ಲೋಪ – ಮುನಿರಾಬಾದ್ ಪಿಎಸ್‌ಐ ಅಮಾನತು

