ಮತ್ತೆ ಚಿನ್ನದ ದರ ಜಿಗಿತ – ಆಭರಣ ಪ್ರಿಯರಲ್ಲಿ ಕರಗಿದ ಮಂದಹಾಸ

1 Min Read

ನವದೆಹಲಿ: ವಾರ್ ಎಫೆಕ್ಟ್‌ನಿಂದ ಸಿಲಿಂಡರ್ ಅಭಾವ, ಬಂಕ್‌ಗಳಲ್ಲಿ ತೈಲ ಸಮಸ್ಯೆ ನಡುವೆ ಚಿನ್ನದ ದರ ಕುಸಿತ ಮಹಿಳೆಯರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿಸಿತ್ತು. ಇನ್ನೇನಿದ್ರೂ ಬಂಗಾರ ಬಲು ಹಗುರ ಅಂತಾ ರಿಲೀಫ್‌ನಲ್ಲಿದ್ದವರಿಗೆ ಇವತ್ತು ಮತ್ತೆ ಚಿನ್ನ ಶಾಕ್ ಕೊಟ್ಟಿದೆ.

ಹೌದು, ಯುದ್ಧದ ಪರಿಣಾಮ 10 ಗ್ರಾಂಗೆ ಮೂವತ್ತು ಸಾವಿರ ಚಿನ್ನದ ದರ ಇಳಿಕೆಯಾಗಿತ್ತು. ಆದರೆ ಇಂದು ಮತ್ತೆ ದರ ಜಿಗಿತ ಕಂಡಿದೆ. ಚಿನ್ನದ ದರ ಪ್ರತಿ ಗ್ರಾಂಗೆ 345 ರಿಂದ 376 ರೂ. ವರೆಗೆ ಏರಿಕೆ ಆಗಿದೆ. ಇದನ್ನೂ ಓದಿ: ಹೃದಯದಲ್ಲಿ ಬ್ಲಾಕೇಜ್‌ – ಸಚಿವ ಶಿವರಾಜ್ ತಂಗಡಗಿಗೆ ಯಶಸ್ವಿ ಸ್ಟಂಟ್ ಅಳವಡಿಕೆ

ಚಿನ್ನದ ದರ ಎಷ್ಟು ಏರಿಕೆ?
* 22 ಕ್ಯಾರೆಟ್ ಚಿನ್ನ
1 ಗ್ರಾಂ ಚಿನ್ನ- 13,445 ರೂ.
ಏರಿಕೆ – 345 ರೂ.

10 ಗ್ರಾಂ ಚಿನ್ನ- 1,34,450 ರೂ.
ಏರಿಕೆ – 3,450 ರೂ.

* 24 ಕ್ಯಾರೆಟ್ ಚಿನ್ನ
1 ಗ್ರಾಂ ಚಿನ್ನ- 14,467 ರೂ.
– ಏರಿಕೆ: 376 ರೂ.

10 ಗ್ರಾಂ ಚಿನ್ನ- 1,46,670 ರೂ.
ಏರಿಕೆ – 3,760 ರೂ.

ಒಟ್ಟಾರೆ ಯುದ್ಧ ಮುಗಿಯುವವರೆಗೆ ಚಿನ್ನದ ದರ ಇಳಿಮುಖವಾಗುವ ಬಗ್ಗೆ ಆರ್ಥಿಕ ತಜ್ಞರು ಲೆಕ್ಕಾಚಾರ ಮಾಡಿದ್ದರು. ಆದರೆ ಇವೆಲ್ಲವನ್ನು ಚಿನ್ನ ಬುಡಮೇಲು ಮಾಡಿದೆ. ಇನ್ನು ದರ ಇಳಿಕೆಯಾಗಲಿ ಅಂತಾ ಖರೀದಿಗಾಗಿ ಕಾದಿದ್ದವರಿಗೆ ಚಿನ್ನ ಭರ್ಜರಿ ಶಾಕ್ ನೀಡಿದೆ. ಇದನ್ನೂ ಓದಿ: ಹಾರ್ಮುಜ್‌ ಜಲಸಂಧಿ ಬಿಕ್ಕಟ್ಟು – ರಷ್ಯಾದಿಂದ ಮತ್ತೆ 6 ಕೋಟಿ ಬ್ಯಾರಲ್‌ ಕಚ್ಚಾ ತೈಲ ಖರೀದಿಸಿದ ಭಾರತ

Share This Article