ಡೀಲ್ ಮುಗಿಯುವ ಮುನ್ನವೇ ಟ್ವಿಟ್ಟರ್ ಚೀಫ್ ಎಂದು ಘೋಷಿಸಿಕೊಂಡ ಮಸ್ಕ್

Public TV
2 Min Read

ವಾಷಿಂಗ್ಟನ್: ಟೆಸ್ಲಾ (Tesla) ಮುಖ್ಯಸ್ಥ ಎಲಾನ್ ಮಸ್ಕ್ (Elon Musk), 44 ಶತಕೋಟಿ ಡಾಲರ್ ಮೊತ್ತದ ಟ್ವೀಟ್ ಖರೀದಿ ಪ್ರಕ್ರಿಯೆ ಮುಗಿಯುವ ಮೊದಲೇ ತಮ್ಮನ್ನು ತಾವು ಟ್ವಿಟರ್ (Twitter) ಮುಖ್ಯಸ್ಥ ಎಂದು ಘೋಷಿಸಿಕೊಂಡಿದ್ದು, ಟ್ವಿಟ್ಟರ್ ಬಯೋ ಬದಲಿಸಿದ್ದಾರೆ.

ಟೆಸ್ಲಾ ಕಂಪನಿಯ ಸಿಇಒ (CEO) ಎಲಾನ್ ಮಸ್ಕ್ ಸ್ಯಾನ್‌ಫ್ರಾನ್ಸಿಸ್ಕೊ (San Francisco) ನಗರದಲ್ಲಿರುವ ಟ್ವಿಟರ್ ಕಂಪನಿಯ ಕೇಂದ್ರ ಕಚೇರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ತಮ್ಮ ಕೈ ಕೈತೊಳೆಯುವ ಸಿಂಕ್ ಒಂದನ್ನು ಹಿಡಿದುಕೊಂಡು ಕಚೇರಿಗೆ ತಂದರು. ಟ್ವಿಟ್ಟರ್ (Twitter) ಕಚೇರಿಗೆ ಹೋಗುತ್ತಿದ್ದೇನೆ. ಅದು ನನ್ನೊಂದಿಗೆ ಬೆರೆತುಕೊಳ್ಳಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: 3.36 ಲಕ್ಷ ಕೋಟಿಗೆ ಟ್ವಿಟ್ಟರ್‌ ಡೀಲ್‌ ಮಾಡಿದ ಎಲಾನ್‌ ಮಸ್ಕ್‌

_Elon Musk

ಮಸ್ಕ್ ಭೇಟಿಗೂ ಮುನ್ನ ಟ್ವಿಟ್ಟರ್‌ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ, ಲೆಸ್ಲಿ ಬರ್‌ಲೆಂಡ್ ಎಲ್ಲ ಸಿಬ್ಬಂದಿಗೂ ಕಳಿಸಿದ್ದ ಇಮೇಲ್‌ನಲ್ಲಿ ವಹಿವಾಟು ಪ್ರಕ್ರಿಯೆ ಪೂರ್ಣಗೊಳ್ಳುವ ಮೊದಲೇ ಟ್ವಿಟ್ಟರ್‌ನ ಸ್ಯಾನ್‌ಫ್ರಾನ್ಸಿಸ್ಕೊ ಕಚೇರಿಗೆ ಮಸ್ಕ್ ಬರಲಿದ್ದಾರೆ ಎಂದು ಹೇಳಿದ್ದರು. ಟ್ವಿಟ್ಟರ್ ಖರೀದಿ ಪ್ರಕ್ರಿಯೆಯು ಕಳೆದ ಏಪ್ರಿಲ್ ತಿಂಗಳಿಂದ ಚರ್ಚೆಯಲ್ಲಿದೆ. ಹಲವು ನಾಟಕೀಯ ಬೆಳವಣಿಗೆಗಳೂ ನಡೆದವು. ನಕಲಿ ಖಾತೆಗಳು ನಿಯಂತ್ರಣಕ್ಕೆ ಸಿಗುತ್ತಿಲ್ಲ, ನಕಲಿ ಖಾತೆಗಳ ಸಂಖ್ಯೆಯ ಬಗ್ಗೆ ಟ್ವಿಟರ್‌ನ ಉನ್ನತ ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿ ಮಸ್ಕ್ ಖರೀದಿ ಪ್ರಕ್ರಿಯೆಯಿಂದ ಹಿಂದೆ ಸರಿಯುವುದಾಗಿ ಘೋಷಿಸಿದ್ದರು.

ಇದನ್ನು ವಿರೋಧಿಸಿ ಟ್ವಿಟ್ಟರ್‌ ಮಸ್ಕ್ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಿತ್ತು. ಖರೀದಿ ಒಪ್ಪಂದ ಉಲ್ಲಂಘಿಸಲು ಮಸ್ಕ್ ನಕಲಿ ಖಾತೆಗಳ ನೆಪ ಹೇಳುತ್ತಿದ್ದಾರೆ ಎಂದು ಟ್ವಿಟರ್ ಆರೋಪಿಸಿತ್ತು. ಇದನ್ನೂ ಓದಿ: ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ – 10 ಕೋಟಿಗೆ ಬೇಡಿಕೆ ಇಟ್ಟಿತ್ತಾ ಮಹಿಳೆ ಆ್ಯಂಡ್ ಟೀಂ?

ಪ್ರಕರಣದ ವಿಚಾರಣೆಯನ್ನು ನ್ಯಾಯಾಧೀಶರು ಅಕ್ಟೋಬರ್ 28ಕ್ಕೆ ಮುಂದೂಡಿ, ಅಷ್ಟರಲ್ಲಿ ವಹಿವಾಟು ಅಂತಿಮ ಘಟ್ಟಕ್ಕೆ ಬರಬೇಕು ಎಂದಿದ್ದರು. ಟ್ವಿಟರ್ ಖರೀದಿ ಪ್ರಕ್ರಿಯೆ ಪೂರ್ಣಗೊಳಿಸಲು ಮಸ್ಕ್ ಅವರಿಗೆ ಇನ್ನು ಕೇವಲ ಒಂದು ದಿನದ ಅವಕಾಶವಿದೆ ಎಂದು ಹೇಳಿತ್ತು. ಹಾಗಾಗಿ ಮಸ್ಕ್ ಟ್ವಿಟ್ಟರ್ ಕಚೇರಿಗೆ ಭೇಟಿ ನೀಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ಮಸ್ಕ್ ಟ್ವಿಟ್ಟರ್ ಮುಖ್ಯಸ್ಥರಾಗುತ್ತಿದ್ದಂತೆ ಸುಮಾರು ಒಂದು ಸಾವಿರ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯಲಾಗುವುದು ಎಂದು ಹೇಳಿದ್ದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *