ಬೆಂಗಳೂರು: ರಾಜ್ಯ ಸರ್ಕಾರ ವಿದ್ಯುತ್ ದರ (Electricity Rate) ಏರಿಕೆ ಮಾಡಿ ರಾಜ್ಯದ ಜನರಿಗೆ ಶಾಕ್ ಕೊಟ್ಟಿದೆ. ಒಂದು ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ (KERC) ಆದೇಶ ಹೊರಡಿಸಿದೆ.
ನೂತನ ದರ ಮೇ ತಿಂಗಳಿನಿಂದ ಅನ್ವಯ ಆಗಲಿದೆ. 2024-25 ಆರ್ಥಿಕ ವರ್ಷದಲ್ಲಿ 34,084 ಕೋಟಿ ಕೆಇಆರ್‌ಸಿ ಆದಾಯ ನಿರೀಕ್ಷೆ ಮಾಡಿತ್ತು. ಆದ್ರೆ 32,019 ಕೋಟಿಯಷ್ಟೇ ಆದಾಯ ಬಂದಿದೆ. ಹೀಗಾಗಿ 2,068 ಕೋಟಿ ಹಣದ ಕೊರತೆಯನ್ನ ಗ್ರಾಹಕರಿಂದ ಸಂಗ್ರಹಿಸಲು ಕೆಇಆರ್‌ಸಿ ಆದೇಶ ಮಾಡಿದೆ. ಇದನ್ನೂ ಓದಿ: ಸಾಲ ಪಡೆದಿದ್ದ ಹಣ ಮರಳಿ ಕೊಡದಿದ್ದಕ್ಕೆ ಸ್ವಂತ ಅಕ್ಕ, ಭಾವನಿಂದ ತಂಗಿ-ಮೈದುನನ ಕಿಡ್ನ್ಯಾಪ್
ಒಂದು ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಿ ಆದೇಶಿಸಿದೆ. ಎಸ್ಕಾಂ ದರ ಹೆಚ್ಚಿಸುವಂತೆ ಸರ್ಕಾರಕ್ಕೆ ಕೆಇಆರ್‌ಸಿ ಮನವಿ ಮಾಡಿತ್ತು. ಇದನ್ನೂ ಓದಿ: ವಿಶ್ವದ ಎಲ್ಲಾ ರಾಷ್ಟ್ರಗಳಿಗೆ ಹಾರ್ಮುಜ್ ಜಲಸಂಧಿ ಓಪನ್ – ಧನ್ಯವಾದ ಹೇಳಿದ ಟ್ರಂಪ್

