ಮೈಸೂರು | ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮನೆ ಹೊಕ್ಕಿದ್ದ ಚಿರತೆ ಸೆರೆ

1 Min Read

– ಮಂಚದ ಮೇಲೆ ವೃದ್ದೆ – ಕೆಳಗೆ ಮಲಗಿದ್ದ ಚಿರತೆ
– ಸರಗೂರಿನಲ್ಲಿ ಹುಲಿ ಪ್ರತ್ಯಕ್ಷ, ಆತಂಕ

ಮೈಸೂರು: ಇಲ್ಲಿನ ಚಾಮುಂಡಿ ಬೆಟ್ಟದ (Chamundi Hill) ತಪ್ಪಲಿನಲ್ಲಿರುವ ಸಿದ್ದಾರ್ಥ ಬಡಾವಣೆಯ ಸುರೇಶ್ ಎಂಬುವವರ ನಿವಾಸಕ್ಕೆ ಎಂಟ್ರಿ ಕೊಟ್ಟಿದ್ದ ಚಿರತೆಯನ್ನ ರಕ್ಷಣೆ ಮಾಡಲಾಗಿದೆ.

ಸಮಯಪ್ರಜ್ಞೆ ಧೈರ್ಯದಿಂದ ಮನೆಯಲ್ಲಿದ್ದ ಅತ್ತೆ ಶೈಲಜಾ (90) ಅವರ ಕೊಠಡಿಗೆ ಹೋಗಿದೆ. ಸಮಯಪ್ರಜ್ಞೆಯಿಂದ ಅವರನ್ನು ಸುಜಾತ ರಕ್ಷಣೆ ಮಾಡಿದ್ದಾರೆ. ಸುದ್ದಿ ತಿಳಿದು ಆಗಮಿಸಿದ ಅರಣ್ಯ ಇಲಾಖೆ (Forest Department) ಅಧಿಕಾರಿಗಳು ಅರವಳಿಕೆ ಚುಚ್ಚು ಮದ್ದು ನೀಡಿ ಚಿರತೆ ಸೆರೆ ಹಿಡಿದಿದ್ದಾರೆ.

ಮನೆ ಹೊಕ್ಕಿದ್ದ ಚಿರತೆ (Leopard), ವೃದ್ಧೆ ಮಲಗಿದ್ದ ಮಂಚದ ಕೆಳಗೇ ಮಲಗಿತ್ತು. ಸುಮಾರು ಮೂವರು 2 ಗಂಟೆ ಮೂವರು ಚಿರತೆಯೊಂದಿಗೆ ಒಂದೇ ಕೊಠಡಿಯಲ್ಲಿ ಕಳೆದಿದ್ದರು.

ಮತ್ತೊಂದೆಡೆ ಸರಗೂರು ತಾಲೂಕಿನ ಹಾದನೂರು ಗ್ರಾಮದ ಹೊರ ವಲಯದಲ್ಲಿ ಹುಲಿ ಕಾಣಿಸಿಕೊಂಡಿದ್ದು, ಗ್ರಾಮದ ಜನರು ಆತಂಕಕ್ಕೆ ಒಳಗಾಗಿದ್ದಾರೆ.

ಅಧಿಕಾರಿಗಳನ್ನೇ ಅಟ್ಟಾಡಿಸಿದ ಕರಡಿ
ತುಮಕೂರಿನ ಕೊರಟಗೆರೆ ತಾಲೂಕಿನ ಗೌಡನಗೆರೆ ಗ್ರಾಮದಲ್ಲಿ ರೇಬಿಸ್ ಸೋಂಕಿತ ಕರಡಿ ರಂಪಾಟಕ್ಕೆ ಅರಣ್ಯಾಧಿಕಾರಿಗಳೇ ಬೆಚ್ಚಿಬಿದ್ದಿದ್ದಾರೆ. ಹುಚ್ಚು ಕರಡಿಯ ಮಾಹಿತಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಅರಣ್ಯ ಅಧಿಕಾರಿಗಳನ್ನೇ ಕರಡಿ ಅಟ್ಟಾಡಿಸಿದೆ. ವಾಹನದಲ್ಲೇ ಕುಳಿತ ಅಧಿಕಾರಿಗಳು ಬಚಾವ್ ಆಗಿದ್ದಾರೆ. ಬಳಿಕ ಅರವಳಿಕೆ ನೀಡಿ ಹುಚ್ಚು ಕರಡಿಯನ್ನ ಸೆರೆ ಹಿಡಿದಿದ್ದಾರೆ.

ರಾಮನಗರ ಚನ್ನಪಟ್ಟಣ ತಾಲೂಕಿನ ಬಿ.ವಿ. ಹಳ್ಳಿಯಲ್ಲಿ ರಾತ್ರಿವೇಳೆ ಮನೆ ಬಾಗಿಲಿಗೇ ಕಾಡಾನೆಗಳನ್ನು ಬಂದಿರೋದನ್ನು ನೋಡಿ ಮನೆ ಮಾಲೀಕ ಬೆಚ್ಚಿಬಿದ್ದಿದ್ದಾರೆ.

Share This Article