– ಪ್ರಾಯಶ್ಚಿತಕ್ಕಾಗಿ ದರ್ಗಾ ಮೊರೆ ಹೋಗಿದ್ದ ಆರೋಪಿ
ಬೆಂಗಳೂರು: ನಗರದ ಡಿ.ಜೆ ಹಳ್ಳಿ (DJ Halli) ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನ ಕೊಲೆ ಮಾಡಿ ಪರಾರಿಯಾಗಿದ್ದ ಭಾವಿ ಪತಿ ಸೈಯದ್ ಶಬೀಲ್ ಅಜ್ಮೀರ್‌ನಲ್ಲಿ (Ajmer) ಸಿಕ್ಕಿಬಿದ್ದಿದ್ದಾನೆ.
ಮದುವೆಯಾಗಿಬೇಕಿದ್ದ ಯುವತಿ ಮೇಲಿನ ಅನುಮಾನದಿಂದ ಆಕೆಯನ್ನ ಕೊಂದಿದ್ದ. ಮಾರ್ಚ್ 17 ರಂದು ಆಕೆಯನ್ನು ಭೇಟಿ ಮಾಡುವ ನೆಪದಲ್ಲಿ ಕರೆದು, ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಮತ್ತು ಕುತ್ತಿಗೆ ಕೊಯ್ದು ಹತ್ಯೆ ಮಾಡಿ ಪರಾರಿಯಾಗಿದ್ದ.
ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಡಿಜೆ ಹಳ್ಳಿ ಪೊಲೀಸರು ತೀವ್ರ ಶೋಧ ನಡೆಸಿದ್ದರು. ಅಂತಿಮವಾಗಿ ಹಂತಕ ಶಬೀಲ್ ರಾಜಸ್ಥಾನದ ಅಜ್ಮೀರ್ ದರ್ಗಾ (Ajmer Dargah) ಬಳಿ ತಗಲಾಕ್ಕೊಂಡಿದ್ದಾನೆ. ಇದನ್ನೂ ಓದಿ: ರನ್ಯಾ ರಾವ್ ಕೇಸ್ – 50 ಕೆಜಿ ಗೋಲ್ಡ್ ಸಾಗಣೆಗೆ ಉಗಾಂಡ ವ್ಯಕ್ತಿ ಜೊತೆ ಡೀಲಿಂಗ್
ಅಪ್ರಾಪ್ತೆಯನ್ನ ಕೊಲೆಗೈದಿದ್ದ ಹಂತಕ ಪಶ್ಚಾತ್ತಾಪಕ್ಕಾಗಿ ಅಜ್ಮೀರ್ ದರ್ಗಾಕ್ಕೆ ಹೋಗಿದ್ದ ಎಂದು ತಿಳಿದುಬಂದಿದೆ. ದರ್ಗಾದಲ್ಲಿ ಪ್ರಾರ್ಥನೆ ಮಾಡಿ ಬರುವಾಗಲೇ ಸಿಕ್ಕಿಬಿದ್ದಿದ್ದಾನೆ. ಸದ್ಯ ಶಬೀಲ್‌ನನ್ನ ಬಂಧಿಸಿರುವ ಡಿ.ಜೆ ಹಳ್ಳಿ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಇದನ್ನೂ ಓದಿ: ದಾವಣಗೆರೆಯಲ್ಲಿ ʻಕೈʼಗೆ ಬಂಡಾಯದ ಬಿಸಿ – ಸಾಮೂಹಿಕ ನಾಮಪತ್ರ ಸಲ್ಲಿಕೆಗೆ ಮುಸ್ಲಿಂ ಮುಖಂಡರ ನಿರ್ಧಾರ


