ಶೆಫಾಲಿ ಸಾವಿನ ಬೆನ್ನಲ್ಲೇ ಪುನೀತ್ ಸಾವಿನ ಬಗ್ಗೆ ಚರ್ಚೆ

Public TV
1 Min Read

ಬಾಲಿವುಡ್‌ನ ನಟಿ ಹಾಗೂ ಬಿಗ್ ಬಾಸ್ ಖ್ಯಾತಿಯ ಶೆಫಾಲಿ ಜರಿವಾಲಾ (Shefali Jariwala) ಸಾವಿನ ಪ್ರಕರಣವು, ಕನ್ನಡದ ಪುನೀತ್ (Puneeth Rajkumar) ಸೇರಿದಂತೆ ಇಬ್ಬರ ನಟರ ಸಾವಿನ ಕುರಿತು ಚರ್ಚೆಗೆ ದಾರಿ ಮಾಡಿಕೊಟ್ಟಿದೆ. ನಿನ್ನೆಯಷ್ಟೇ ಶೆಫಾಲಿ ಹೃದಯಾಘಾತಕ್ಕೆ ಬಿಲಿಯಾಗಿದ್ದರು. ಸಡನ್ನಾಗಿ ಆದ ಸಾವಿಗೆ ಬಾಲಿವುಡ್ ಕಂಬನಿ ಮಿಡಿದಿದೆ. ಜೊತೆಗೆ ಈಕೆ ನಟಿಸಿದ್ದ ಆ ಇಬ್ಬರು ಕಲಾವಿದರಿಗೂ ಹೃದಯಾಘಾತ ಆಗಿರುವ ಬಗ್ಗೆ ಮಾತಾಡುವಂತಾಗಿದೆ.

14 ವರ್ಷಗಳ ಹಿಂದೆ ಮಾದೇಶ ನಿರ್ದೇಶನದ ಹುಡುಗರು ಸಿನಿಮಾದಲ್ಲಿ ಶೆಫಾಲಿ ಕಾಣಿಸಿಕೊಂಡಿದ್ದರು. ಯೋಗರಾಜ್ ಭಟ್ ಸಾಹಿತ್ಯದಲ್ಲಿ, ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದ ಪಂಕಜಾ ಹಾಡಿಗೆ ಈಕೆ ನೃತ್ಯ ಮಾಡಿದ್ದರು. ಪುನೀತ್ ರಾಜ್ ಕುಮಾರ್, ಶ್ರೀನಗರ ಕಿಟ್ಟಿ ಹಾಗೂ ಯೋಗಿ ಈ ಹಾಡಿಗೆ ಹೆಜ್ಜೆ ಹಾಕಿದ್ದರು. ಪುನೀತ್ ರಾಜ್ ಕುಮಾರ್ ಕೂಡ ಹೃದಯಾಘಾತದಿಂದಲೇ (Heart Attack) ನಿಧನರಾಗಿದ್ದರು.

ಶೆಫಾಲಿ ಜೊತೆ ಬಿಗ್ ಬಾಸ್ ಮನೆಗೆ ಪ್ರವೇಶ ಮಾಡಿದ್ದ, ಬಾಲಿವುಡ್ ನಟ ಸಿದ್ದಾರ್ಥ ಶುಕ್ಲಾ ಕೂಡ ಹೃದಯಾಘಾತದಲ್ಲೇ ಪ್ರಾಣಬಿಟ್ಟವರು. ಹಿಂದಿ ಬಿಗ್ ಬಾಸ್ ನಲ್ಲಿ ಶುಕ್ಲಾ ಮತ್ತು ಶೆಫಾಲಿ ಜೊತೆಯಾಗಿದ್ದರು. ಈ ಇಬ್ಬರೂ ಡೇಟ್ ಮಾಡುತ್ತಿದ್ದರು ಅಂತ ಸುದ್ದಿನೂ ಆಗಿತ್ತು. ಪರೋಕ್ಷವಾಗಿ ಶೆಫಾಲಿ ಕೂಡ ಒಪ್ಪಿಕೊಂಡಿದ್ದರು. ಈಗ ಈ ಮೂವರು ಹೃದಯಾಘಾತಕ್ಕೆ ಬಲಿಯಾಗಿದ್ದು, ಕಾಕತಾಳೀಯವಾದರೂ, ವಿಪರ್ಯಾಸ.

Share This Article