ಹಸೆಮಣೆ ಏರಬೇಕಿದ್ದ ಮದುಮಗ ಮಸಣಕ್ಕೆ – ಜಿಮ್‌ ಮಾಲೀಕನನ್ನು ಇರಿದು ಕೊಂದ ತಂದೆ

Public TV
1 Min Read

ನವದೆಹಲಿ: ಮದುವೆಗೆ ಕೆಲವೇ ಗಂಟೆಗಳು ಇರುವ ಹೊತ್ತಲ್ಲೇ ಜಿಮ್‌ ಮಾಲೀಕನೊಬ್ಬನನ್ನು (Delhi Gym Owner) ಇರಿದು ಕೊಂದಿರುವ ಘಟನೆ ದಕ್ಷಿಣ ದೆಹಲಿಯಲ್ಲಿ ನಡೆದಿದೆ.

ಗೌರವ್ ಸಿಂಘಾಲ್ (29) ಎಂಬಾತನನ್ನು ಆತನ ತಂದೆ ರಂಗಲಾಲ್ ಹತ್ಯೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ರಂಗಲಾಲ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ. ಗೌರವ್‌ ತನ್ನ ಮದುವೆಯ ಮೆರವಣಿಗೆಗೆ ಹೊರಟಿದ್ದ. ಈ ವೇಳೆ ಆತನ ತಂದೆಯೇ ಚೂಪಾದ ಆಯುಧ ಬಳಸಿ ಕೊಂದಿದ್ದಾನೆ. ಇದನ್ನೂ ಓದಿ: ನಟಿ ಲಕ್ಷ್ಮಿ ಮೇಲೆ ಆಕ್ಸಿಡೆಂಟ್ ಮಾಡಿ ಯುವತಿ ಜೊತೆ ರಂಪಾಟ ಮಾಡಿದ ಆರೋಪ

ಗೌತಮ್‌ ಜಿಮ್ ನಡೆಸುತ್ತಿದ್ದ. ದೇವ್ಲಿ ಎಕ್ಸ್‌ಟೆನ್ಶನ್‌ನಲ್ಲಿರುವ ಮನೆಯಲ್ಲೇ ಆತನ ಎದೆಗೆ 15 ಬಾರಿ ಇರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪುತ್ರ ಗೌರವ್ ಪ್ರತಿದಿನ ತನಗೆ ಅವಮಾನ ಮಾಡುತ್ತಿದ್ದರಿಂದ ಕೋಪಗೊಂಡು ಕೊಲೆ ಮಾಡಿರುವುದಾಗಿ ರಂಗಲಾಲ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮದುವೆ ಮೆರವಣಿಗೆ ಮಾಡಲು ಮದುಮಗನಿಗಾಗಿ ಜನರು ಕಾಯುತ್ತಿದ್ದರು. ಆದರೆ ಗೌರವ್‌ ಬರಲಿಲ್ಲ. ಅನುಮಾನಗೊಂಡು ಅತಿಥಿಗಳು ಹುಡುಕಾಟ ನಡೆಸಿದ್ದಾರೆ. ಆದರೆ ಪಾರ್ಕ್‌ವೊಂದರಲ್ಲಿ ಆತನ ಮೃತದೇಹ ಪತ್ತೆಯಾಗಿದೆ. ಸಂಭ್ರಮದ ಮನೆಯಲ್ಲಿ ಶೋಕದ ವಾತಾವರಣ ಮಡುಗಟ್ಟಿತ್ತು. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬಾಂಬ್‌ ಸ್ಫೋಟ, ಓರ್ವ ವಶಕ್ಕೆ – ಏನಿದು ಐಸಿಸ್‌ ಬಳ್ಳಾರಿ ಮಾಡ್ಯೂಲ್‌?

Share This Article