CRPF ನನ್ನ ಮೇಲೆ ಜೈಲಿನಲ್ಲಿ ಹಲ್ಲೆ ನಡೆಸಿದೆ – ಸುಕೇಶ್ ಚಂದ್ರಶೇಖರ್ ಆರೋಪ

Public TV
2 Min Read

ದೆಹಲಿ: ಬಹುಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ವಂಚಕ ಸುಕೇಶ್ ಚಂದ್ರಶೇಖರ್ (Sukesh Chandrashekhar) ನನ್ನ ಮೇಲೆ ಜೈಲಿನಲ್ಲಿ CRPF ಹಲ್ಲೆ ನಡೆಸಿದೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ ಸಕ್ಸೇನಾಗೆ (Lieutenant Governor Vinai Kumar Saxena) ಪತ್ರ ಬರೆದು ಎಎಪಿ (AAP) ಸಚಿವರ ವಿರುದ್ಧ ಗಂಭೀರ ಆರೋಪ ಹೊರಿಸಿದ್ದಾನೆ.

215 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಜೈಲು ಸೇರಿರುವ ಬೆಂಗಳೂರು ಮೂಲದ ಸುಕೇಶ್ ಚಂದ್ರಶೇಖರ್ ನಡುವಿನ ಪ್ರಕರಣಕ್ಕೆ ನಾನಾ ರೀತಿಯ ತಿರುವುಗಳು ಸಿಗುತ್ತಿವೆ. ದೆಹಲಿ ಲೆಫ್ಟಿನೆಂಟ್ ಗವರ್ನರ್‌ಗೆ ಬರೆದಿರುವ ಪತ್ರದಲ್ಲಿ, ಜೈಲು ಆಡಳಿತದಿಂದ ನಿರಂತರ ಬೆದರಿಕೆ ಮತ್ತು ಒತ್ತಡ ಹಾಕಲಾಗುತ್ತಿದೆ. ಎಎಪಿ ನಾಯಕರ ವಿರುದ್ಧ ನೀಡಿರುವ ಕೇಸ್‌ ವಾಪಸ್‌ ತೆಗೆದುಕೊಳ್ಳುವಂತೆ ಒತ್ತಡವಿದೆ. ಜೈಲಿನಲ್ಲಿ ನನ್ನ ಮೇಲೆ ಹಲ್ಲೆ ನಡೆದಿದೆ. ಪಂಜಾಬ್ ಮತ್ತು ಗೋವಾ ಚುನಾವಣೆ ಸಂದರ್ಭದಲ್ಲಿ ಹಣ ನೀಡುವಂತೆ ಆಮ್ ಆದ್ಮಿ ಪಕ್ಷದ ಸತ್ಯೇಂದರ್ ಜೈನ್ (Satyendar Jain) ನನ್ನನ್ನು ಕೇಳಿದ್ದರು. ಹೀಗಾಗಿ ಕಾನೂನಿನಂತೆ ನಡೆಯಲು ನಿರ್ಧರಿಸಿದ್ದೇನೆ. ಯಾರ ಸಹಾಯವನ್ನು ಪಡೆಯುವುದಿಲ್ಲ. ನನ್ನ ಕೇಸ್ ನಿರ್ವಹಿಸುವ ಸಾಮರ್ಥ್ಯ ನನಗಿದ್ದು ಅಮಾಯಕ ಎಂದು ಸಾಬೀತುಪಡಿಸುತ್ತೇನೆ. ನನ್ನ ಕೇಸ್‍ಗೆ ಸಂಬಂಧಿಸಿದ ಎಲ್ಲಾ ಮೂಲಗಳನ್ನು ಹೊಂದಿದ್ದೇನೆ. ಯಾರ ಸಹಾಯವೂ ಬೇಡ ಎಂದು ಮಾಂಡೊಲಿ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ತಿಳಿಸಿದ್ದಾನೆ. ಇದನ್ನೂ ಓದಿ: ಗುಜರಾತ್‍ನಲ್ಲಿ ಕಾಂಗ್ರೆಸ್‍ಗೆ ಮತ್ತೆ ಆಘಾತ – ಝಲೋದ್ ಭವೇಶ್ ಕಟಾರಾ ರಾಜೀನಾಮೆ

ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ (Arvind Kejriwal) ಮತ್ತು ಸತ್ಯೇಂದರ್ ಜೈನ್ ಅವರಿಗೆ ಸಂಬಂಧಿಸಿದ ಹಲವು ವೈಯಕ್ತಿಕ ವಿಚಾರಗಳು ನನಗೆ ಗೊತ್ತು ಎಂದು ಬೆದರಿಕೆ ಹಾಕಿರುವ ಚಂದ್ರಶೇಖರ್, ನಾನು ಅವರ ವೈಯಕ್ತಿಕ ವಿಚಾರಗಳನ್ನು ಬಿಚ್ಚಿಟ್ಟರೆ ದೇಶವನ್ನೇ ಅಲುಗಾಡಿಸುವಂತಹ ಸ್ಫೋಟಕ ಸತ್ಯವದು. ಕೇಜ್ರಿವಾಲ್ ಅವರೇ, ನೀವು ಮತ್ತು ನಿಮ್ಮ ಸಹಚರರು ಹೇಳುತ್ತಿರುವಂತೆ, ದೆಹಲಿ ಲೆಫ್ಟಿನೆಂಟ್ ಗವರ್ನರ್ ಮುಂದೆ ತಾನು ಪ್ರಸ್ತಾಪಿಸಿರುವ ಯಾವುದೇ ವಿಷಯ ಸುಳ್ಳಾದರೆ ತಾನು ನೇಣಿಗೇರಲು ಸಿದ್ಧನಿದ್ದೇನೆ. ಆದರೆ, ಒಂದು ವೇಳೆ ದೂರು ಸಾಬೀತಾದರೆ, ನೀವು ರಾಜೀನಾಮೆ ನೀಡುತ್ತೀರಾ? ರಾಜಕೀಯದಿಂದ ನಿವೃತ್ತಿ ಹೊಂದುವಿರಾ ಎಂದು ಪ್ರಶ್ನೆ ಹಾಕಿದ್ದಾನೆ. ಇದನ್ನೂ ಓದಿ: ಜಾಕ್ವೆಲಿನ್‌ಗೆ ಕಿಸ್ ಮಾಡುತ್ತಿರುವ ಸುಕೇಶ್ ಚಂದ್ರಶೇಖರ್ – ರೋಮ್ಯಾಂಟಿಕ್ ಫೋಟೋ ವೈರಲ್

ಗೋವಾ ಮತ್ತು ಪಂಜಾಬ್ ಚುನಾವಣೆಗಾಗಿ ಸತ್ಯೇಂದರ್ ಜೈನ್ ನನ್ನ ಬಳಿ ಹಣ ಕೇಳಿದರು. ಜೈಲಿನ ಸಿಬ್ಬಂದಿ ಮೂಲಕ ನಿರಂತರ ಒತ್ತಡ, ಬೆದರಿಕೆಗಳಿತ್ತು. ಪಂಜಾಬ್ ಮತ್ತು ಗೋವಾ ಚುನಾವಣೆಯ ಸಂದರ್ಭದಲ್ಲಿ ನಾನು ತನಿಖೆಗೆ ಒಳಪಡುತ್ತಿದ್ದರೂ ಧೈರ್ಯದಿಂದ ಹಣ ನೀಡುವಂತೆ ಜೈನ್ ನನ್ನನ್ನು ಕೇಳಿದರು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾನೆ. ಈ ಆರೋಪವನ್ನು ಎಎಪಿ ತಿರಸ್ಕರಿಸಿದ್ದು, ಸುಳ್ಳು ಹೇಳುತ್ತಿದ್ದಾನೆ ಎಂದು ಪ್ರತ್ಯಾರೋಪ ಮಾಡಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *