LatestMain PostNational

ಗುಜರಾತ್‍ನಲ್ಲಿ ಕಾಂಗ್ರೆಸ್‍ಗೆ ಮತ್ತೆ ಆಘಾತ – ಝಲೋದ್ ಭವೇಶ್ ಕಟಾರಾ ರಾಜೀನಾಮೆ

ಗಾಂಧೀನಗರ: ಗುಜರಾತ್‍ನಲ್ಲಿ (Gujrat) ವಿಧಾನಸಭೆ ಚುನಾವಣೆಗೂ (Assembly Elections) ಮುನ್ನವೇ ಕಾಂಗ್ರೆಸ್‍ಗೆ ಮತ್ತೊಂದು ಆಘಾತಎದುರಾಗಿದೆ. ಪಕ್ಷದ ಶಾಸಕ ಝಲೋದ್ ಭವೇಶ್ ಕಟಾರಾ (Jhalod Bhavesh Katara) ಅವರು ಬುಧವಾರ ಸ್ಪೀಕರ್ ನಿಮಾಬೆನ್ ಆಚಾರ್ಯ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.

ಒಂದೇ ದಿನ ರಾಜೀನಾಮೆ ನೀಡಿದ ಕಾಂಗ್ರೆಸ್ ನಾಯಕರಲ್ಲಿ ಎರಡನೇಯವರು ಝಲೋದ್ ಭವೇಶ್ ಕಟಾರಾ ಅವರಾಗಿದ್ದಾರೆ. ಇದಕ್ಕೂ ಮುನ್ನ ಗುಜರಾತ್‍ನ ತಲಾಲಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಭಗವಾನ್‍ಭಾಯ್ ಡಿ ಬರಾದ್ ಅವರು ಕಾಂಗ್ರೆಸ್‍ನ ಎಲ್ಲಾ ಹುದ್ದೆಗಳಿಗೂ ರಾಜೀನಾಮೆ ನೀಡಿದ್ದರು. ತಮ್ಮ ಬೆಂಬಲಿಗರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಕಾಂಗ್ರೆಸ್ ತೊರೆಯಲು ನಿರ್ಧರಿಸಿ, ಬಿಜೆಪಿಗೆ ಸೇರ್ಪಡೆಯಾಗುತ್ತಿದ್ದೇನೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಪ್ರೀತಂಗೌಡ V/S ಹೆಚ್.ಡಿ.ರೇವಣ್ಣ- ಹಾಸನದಲ್ಲಿ ಚುನಾವಣೆಗೆ ನಿಲ್ಲುವಂತೆ ಶಾಸಕರ ಸವಾಲು

ಹತ್ತು ಬಾರಿ ಕಾಂಗ್ರೆಸ್ ಪಕ್ಷದಲ್ಲಿ ಶಾಸಕರಾಗಿದ್ದ ಬುಡಕಟ್ಟು ಮುಖಂಡ ಮೋಹನ್‍ಸಿನ್ಹ್ ರಥ್ವಾ ಮಂಗಳವಾರ ಕಾಂಗ್ರೆಸ್‍ಗೆ ರಾಜೀನಾಮೆ ನೀಡಿ ಬಿಜೆಪಿಗೆ ಸೇರಿದರು, ಇದಾದ ಬಳಿ ಎರಡನೇ ದಿನವೂ ಕಾಂಗ್ರೆಸ್‍ಗೆ ಮತ್ತೆ ಆಘಾತ ಉಂಟಾಗಿದೆ. ಡಿಸೆಂಬರ್ 1 ಮತ್ತು 5 ರಂದು ಗುಜರಾತ್ ವಿಧಾನಸಭೆ ಚುನಾವಣೆ ನಡೆಯಲಿದ್ದು, ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಮುರುಘಾ ಶ್ರೀಗಳಿಗೆ ಪೋಕ್ಸೋ ಸಂಕಷ್ಟ- ಪೊಲೀಸರಿಂದ ಕೋರ್ಟ್‍ಗೆ ಚಾರ್ಜ್‍ಶೀಟ್ ಸಲ್ಲಿಕೆ

Live Tv

Leave a Reply

Your email address will not be published. Required fields are marked *

Back to top button