ಬೆಂಗಳೂರಿಗರೇ ಮತ್ತೆ ದಂಡ ಕಟ್ಟಲು ಸಿದ್ಧರಾಗಿ – ಮಾಸ್ಕ್‌ ಹಾಕದಿದ್ರೆ 250 ರೂ. ಫೈನ್‌

Public TV
1 Min Read

ಬೆಂಗಳೂರು: ರಾಜಧಾನಿಯಲ್ಲಿ ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ನಿಯಂತ್ರಣಕ್ಕೆ ಸರ್ಕಾರ ಸಾರ್ವಜನಿಕರ ಮೇಲೆ ದಂಡದ ಅಸ್ತ್ರ ಪ್ರಯೋಗಿಸಲು ಸಿದ್ಧತೆ ನಡೆಸಿದೆ. ಮಾಸ್ಕ್‌ ಧರಿಸದೇ ಸಾರ್ವಜನಿಕ ಸ್ಥಳದಲ್ಲಿ ಓಡಾಡುವವರ ವಿರುದ್ಧ ದಂಡ ವಿಧಿಸಲು ಸರ್ಕಾರ ನಿರ್ಧರಿಸಿದೆ.

ದಂಡ ಪ್ರಯೋಗಕ್ಕೆ ಅನುಮತಿ ನೀಡುವಂತೆ ಆರೋಗ್ಯ ಇಲಾಖೆ ಸರ್ಕಾರದ ಮುಂದೆ ಪ್ರಸ್ತಾವನೆ ಇರಿಸಿದೆ. ಬೆಂಗಳೂರು ನಗರದಲ್ಲಿ ಮಾತ್ರ ದಂಡ ಪ್ರಯೋಗಕ್ಕೆ ಅನುಮತಿ ನೀಡುವಂತೆ ಕೋರಲಾಗಿದೆ. ಕೋವಿಡ್‌ ಪ್ರಕರಣಗಳ ಹೆಚ್ಚಳದ ಬಗ್ಗೆ ಎಷ್ಟೇ ಜಾಗೃತಿಗೊಳಿಸಿದರೂ ಜನ ಮಾಸ್ಕ್ ಹಾಕುತ್ತಿಲ್ಲ. ಹೀಗಾಗಿ ದಂಡ ಪ್ರಯೋಗಕ್ಕೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿತ್ತು. ಇದನ್ನೂ ಓದಿ: ಬದಲಾದ ವಾತಾವರಣದಿಂದ ಯುವಕರಲ್ಲಿ ಹೆಚ್ಚಿದ ಹೃದಯಾಘಾತ

ಸಲಹಾ ಸಮಿತಿಯ ಶಿಫಾರಸನ್ನು ಆರೋಗ್ಯ ಇಲಾಖೆ ಈಗ ಸರ್ಕಾರದ ಮುಂದಿಟ್ಟಿದೆ. ಶೀಘ್ರದಲ್ಲೆ ದಂಡ ಪ್ರಯೋಗಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಡುವ ಸಾಧ್ಯತೆಯಿದೆ. ಈಗಾಗಲೇ ಬೆಂಗಳೂರಿನಲ್ಲಿ ಕೊರೊನಾ ಕೇಸ್‌ ಒಂದು ಸಾವಿರ ಗಡಿ ದಾಟಿದೆ. ಈಗಾಗಲೇ ಬೆಂಗಳೂರಿನಲ್ಲಿ ಪಾಸಿಟಿವಿಟಿ ರೇಟ್ ಕೂಡ ಶೇ.5 ದಾಟಿದೆ. ಮಾಲ್, ಸೂಪರ್ ಮಾರ್ಕೆಟ್, ಪಬ್, ಬಾರ್ ಸೇರಿದಂತೆ ಜನಸಂದಣಿ ಪ್ರದೇಶದಲ್ಲಿ ಜನ ಮಾಸ್ಕ್ ಹಾಕುತ್ತಿಲ್ಲ.

ಸರ್ಕಾರ ಈಗಾಗಲೇ ಮಾಸ್ಕ್ ಕಡ್ಡಾಯ ಮಾಡಿದೆ. ಮಾಸ್ಕ್ ಕಡ್ಡಾಯ ಮಾಡಿದರೂ ಜನ ಮಾತ್ರ ಮಾಸ್ಕ್ ಹಾಕದೇ ನಿಯಮ ಉಲ್ಲಂಘಿಸುತ್ತಿದ್ದಾರೆ. ರೂಲ್ಸ್ ಬ್ರೇಕ್ ಮಾಡುವವರಿಗೆ ದಂಡ ಹಾಕಲು ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಸಜ್ಜಾಗಿದೆ. ಇದನ್ನೂ ಓದಿ: ಕೆಜಿಎಫ್ ನಟನ ಐಷಾರಾಮಿ ಕಾರು ಅಪಘಾತ

ಸದ್ಯ ಸರ್ಕಾರ ಜಾರಿ ಮಾಡಿರೋ ನಿಯಮ ಏನು?
ಮಾಸ್ಕ್ ಕಡ್ಡಾಯವಾಗಿ ಹಾಕಬೇಕು, ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಮಾಲ್, ಥಿಯೇಟರ್, ಸೂಪರ್ ಮಾರ್ಕೆಟ್ ಜನಸಂದಣಿ ಪ್ರದೇಶಗಳಲಿ ಮಾಸ್ಕ್ ಕಡ್ಡಾಯ ಮತ್ತು ಎರಡು ಡೋಸ್ ಹಾಕಿಸಿರುವ ಸರ್ಟಿಫಿಕೇಟ್ ಕಡ್ಡಾಯ. ಸರ್ಕಾರಿ ಮತ್ತು ಖಾಸಗಿ ಕಚೇರಿಗಳಲ್ಲಿ ಸಿಬ್ಬಂದಿ ಮಾಸ್ಕ್ ಕಡ್ಡಾಯವಾಗಿ ಹಾಕಬೇಕು. ಮಾಸ್ಕ್ ಹಾಕದೇ ಇದ್ದವರಿಗೆ ಮಾರ್ಷಲ್, ಪೊಲೀಸರು ಮಾಸ್ಕ್ ಹಾಕುವಂತೆ ಜಾಗೃತಿ ಮೂಡಿಸಬೇಕು.

Live Tv

Share This Article
Leave a Comment

Leave a Reply

Your email address will not be published. Required fields are marked *