ಮೈಲಾರಿ ಹೋಟೆಲ್‌ನಲ್ಲಿ ಅಚ್ಚುಮೆಚ್ಚಿನ ದೋಸೆ ಸವಿದ ಸಿಎಂ

Public TV
1 Min Read
Siddaramaiah

ಮೈಸೂರು: ನಗರದ (Mysuru) ಪ್ರವಾಸದಲ್ಲಿರುವ ಸಿಎಂ ಸಿದ್ದರಾಮಯ್ಯ (Siddaramaiah) ಅಗ್ರಹಾರದಲ್ಲಿರುವ ಮೈಲಾರಿ ಹೋಟೆಲ್‌ನಲ್ಲಿ ಉಪಹಾರ ಸೇವಿಸಿದರು.

ಮೈಲಾರಿ ಹೋಟೆಲ್‌ನಲ್ಲಿ (Mylari Hotel) ಸಿಎಂ ದೋಸೆ, ಇಡ್ಲಿ ಸವಿದರು. ಸಿದ್ದರಾಮಯ್ಯಗೆ ಸಚಿವ ಕೆ.ವೆಂಕಟೇಶ್, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಐಜಿಪಿ ಬೋರಲಿಂಗಯ್ಯ ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಸಾಥ್ ನೀಡಿದರು. ಇದನ್ನೂ ಓದಿ: ಮೈಲಾರಿ ಹೋಟೆಲ್‌ನಲ್ಲಿ ತಾನೇ ದೋಸೆ ಹಾಕಿ ರುಚಿಗೆ ಫಿದಾ ಆದ ಪ್ರಿಯಾಂಕಾ ಗಾಂಧಿ

ಸಿಎಂ ಸಿದ್ದರಾಮಯ್ಯ ಅವರಿಗೆ ಮೈಲಾರಿ ಹೋಟೆಲ್‌ನ ದೋಸೆ ಬಹಳ ಅಚ್ಚುಮೆಚ್ಚು. ನಗರಕ್ಕೆ ಭೇಟಿ ಕೊಟ್ಟಾಗ ಸಾಮಾನ್ಯವಾಗಿ ಅವರು ಈ ಹೋಟೆಲ್‌ಗೆ ತೆರಳಿ ದೋಸೆ ಸವಿಯುತ್ತಾರೆ.

ವಿಧಾನಸಭಾ ಚುನಾವಣೆ ವೇಳೆ ಪ್ರಿಯಾಂಕಾ ಗಾಂಧಿಯವರು ಮೈಸೂರಿಗೆ ಭೇಟಿ ಕೊಟ್ಟಾಗ ಮೈಲಾರಿ ಹೋಟೆಲ್‌ನ ದೋಸೆ ಸವಿದಿದ್ದರು. ಅವರೇ ಅಡುಗೆ ಮನೆಯಲ್ಲಿ ತವಾ ಮೇಲೆ ದೋಸೆ ಹಾಕಿ, ಬಳಿಕ ದೋಸೆ ಸವಿದು ರುಚಿಗೆ ಮನಸೋತಿದ್ದರು. ಇದನ್ನೂ ಓದಿ: ಜಮೀರ್‌ಗೆ 2.5 ಕೋಟಿ ಸಾಲ – ಲೋಕಾ ಪೊಲೀಸರಿಂದ ರಾಧಿಕಾ ಕುಮಾರಸ್ವಾಮಿ ವಿಚಾರಣೆ

Share This Article